‘ಅಲ್ಲಾಹು ಅಕ್ಬರ್’ ಎಂದು ಕೂಗುತ್ತಾ ಕೈಯಲ್ಲಿ ಮಚ್ಚು ಹಿಡಿದುಕೊಂಡು ದೇವಸ್ಥಾನಕ್ಕೆ ನುಗ್ಗಲು ಯತ್ನಿಸಿದ ಯುವಕ |

ದೇವಸ್ಥಾನದ ಒಳಗೆ ವ್ಯಕ್ತಿಯೋರ್ವ ಕೈಯಲ್ಲಿ ಮಚ್ಚು ಹಿಡಿದುಕೊಂಡು ಏಕಾಏಕಿ ನುಗ್ಗಿ ಆತಂಕಕಾರಿ ವಾತಾವರಣ ನಿರ್ಮಾಣ ಮಾಡಿದ ಘಟನೆಯೊಂದು ಉತ್ತರ ಪ್ರದೇಶದ ಗೋರಖನಾಥ ಮಂದಿರದಲ್ಲಿ ನಡೆದಿದೆ.

ಈ ಘಟನೆ ಎಪ್ರಿಲ್ 3 ರಂದು ಸಂಜೆ 7.45 ರ ಸುಮಾರಿಗೆ ನಡೆದಿದೆ. ಅಹ್ಮದ್ ಮುರ್ತಜಾ ಅಬ್ಬಾಸಿ ಎಂಬ ಯುವಕ ಮಂದಿರದ ಪ್ರವೇಶದ ಬಳಿ ಮೊದಲು ತಪಾಸಣೆಗೆ ಒಳಗಾಗಲು ನಿರಾಕರಿಸಿದ್ದಾನೆ. ನಂತರ ಹರಿತವಾದ ಆಯುಧ ತೆಗೆದು ಪೊಲೀಸರ ವಿರುದ್ಧ ಬೀಸಿ, ಇಬ್ಬರನ್ನು ಗಾಯಗೊಳಿಸಿದ್ದಾನೆ. ಈ ವೇಳೆ ಅಲ್ಲಾಹು ಅಕ್ಬರ್ ಎಂಬ ಘೋಷಣೆ ಕೂಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಡೆಗೇ ಈತನನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಯುವಕ ಐಐಟಿ ಬಾಂಬೆಯಲ್ಲಿ ರಾಸಾಯನಿಕ ಎಂಜಿನಿಯರಿಂಗ್ ಪದವೀಧರ. ಪೊಲೀಸರಿಗೆ ಸಿಕ್ಕಿ ಬಿದ್ದ ನಂತರ ವಿಚಾರಣೆಯಲ್ಲಿ ತಾನು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ಹೇಳಿದ್ದಾನೆ.

ಈತನ ಈ ಹೇಳಿಕೆಯನ್ನು ಏಕಾಏಕಿ ನಂಬಬಾರದು ಎಂಬ ಮಾತು ಸಾಮಾಜಿಕ ಮಾಧ್ಯಮದಲ್ಲಿ ವಾದ ಒಂದು ಎದ್ದಿದೆ.

Leave A Reply

Your email address will not be published.