ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಫ್ಲೈಟ್​ನಲ್ಲಿ ಬೆಂಗಳೂರಿಗೆ ಎಂಟ್ರಿ ಕೊಟ್ಟ ಪತಿರಾಯ|ಬಳಿಕ ಈತ ಮಾಡಿದ್ದೇನು ಗೊತ್ತಾ!?

0 13

ಬೆಂಗಳೂರು:ಎಲ್ಲಾ ಹೆಂಡತಿಯರಿಗೂ ತನ್ನ ಗಂಡ ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದು ಆಸೆ. ಅಂತೆಯೇ ಪತಿಗೂ ಪತ್ನಿಯನ್ನು ಸಂತೋಷವಾಗಿರಿಸಬೇಕೆಂಬು ಹಂಬಲ ಇದ್ದೇ ಇರುತ್ತದೆ. ಹೀಗಾಗಿ ಪತಿ ಮಹಾಶಯರು ಬೆವರು ಸುರಿಸಿ ದಿನವಿಡೀ ದುಡಿದು ತನ್ನ ಹೆಂಡತಿಯ ಇಷ್ಟಾರ್ಥಗಳನ್ನೆಲ್ಲ ಈಡೇರಿಡುತ್ತಾರೆ.ಆದರೆ ಇಲ್ಲೊಬ್ಬ ಗಂಡ ತನ್ನ ಅರ್ಧಾಂಗಿಯನ್ನು ಚೆನ್ನಾಗಿ ನೋಡಿಕೊಳ್ಳಲು ಮಾಡಿದ್ದೇನು ಗೊತ್ತಾ!?

ಹೌದು.ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಪತ್ನಿಯನ್ನು ಖುಷಿಯಿಂದ ಇರಿಸಲು ಹಣ ಬೇಕಾದ ಕಾರಣ ಬೆಂಗಳೂರಿಗೆ ಬಂದು ಅಡ್ಡದಾರಿ ಹಿಡಿದಿದ್ದಾನೆ. ತನ್ನ ಹೆಂಡತಿಯನ್ನು ಸಂತೋಷ ಪಡಿಸಲು ಫ್ಲೈಟ್​ನಲ್ಲಿ ಬರುತ್ತಿದ್ದ ವ್ಯಕ್ತಿ ಬೆಂಗಳೂರಿನಲ್ಲಿ ಕಳ್ಳತನ ಕೃತ್ಯಕ್ಕೆ ಕೈ ಹಾಕಿದ್ದ. ಹೆಂಡತಿ ಜೊತೆ ಜಾಲಿ ರೈಡ್ ಮಾಡಲು ಸರಗಳ್ಳತನ ಮಾಡುತ್ತಿದ್ದ. ಹೀಗೆ ಸರಗಳ್ಳತನ ನಡೆಸುತ್ತಿದ್ದ ವ್ಯಕ್ತಿ ಉಮೇಶ್ ಖತ್ತಿಕ್ ಎಂದು ಗುರುತಿಸಲಾಗಿದೆ.

ಬೆಂಗಳೂರು ನಗರಕ್ಕೆ ಬರುತ್ತಿದ್ದ ಆರೋಪಿ ಉಮೇಶ್, ಮೊದಲು ಬೈಕ್ ಕದಿಯುತ್ತಿದ್ದ. ಬಳಿಕ ಅದೇ ಬೈಕ್​ನಲ್ಲಿ ಸುತ್ತಾಡಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರ ಕದಿಯುತ್ತಿದ್ದ. ಹೀಗೆ ಬೆಂಗಳೂರಿನಲ್ಲಿ ಒಂದೇ ದಿನ ಮೂರು ಕಡೆ ಸರಗಳ್ಳತನ ಮಾಡಿದ್ದ. ಚೆನ್ನಮ್ಮನಕೆರೆ ಅಚ್ಚುಕಟ್ಟು, ಪುಟ್ಟೇನಹಳ್ಳಿ, ಮಾರತಹಳ್ಳಿಯಲ್ಲಿ ಸರಗಳ್ಳತನ ಮಾಡಿದ್ದ. ಕಳೆದ ಡಿಸೆಂಬರ್​ನಲ್ಲಿ ಸರಗಳ್ಳತನ ಮಾಡಿದ್ದ ಆರೋಪಿ, ಬಳಿಕ ಹೈದರಾಬಾದ್​ಗೆ ಹೋಗಿ ಈ ಕೃತ್ಯ ಮುಂದುವರಿಸಿದ್ದಾನೆ.

ಬೆಂಗಳೂರಿನಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು, ರಾಜಸ್ಥಾನಕ್ಕೆ ತೆರಳಿ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಇದುವರೆಗೆ ರಾಜಸ್ಥಾನದಲ್ಲಿ 18, ಹೈದಾರಾಬಾದ್ 8, ಬೆಂಗಳೂರಿನಲ್ಲಿ 7 ಕೇಸ್ ದಾಖಲಾಗಿದ್ದು,ಆರೋಪಿ ಚೈನ್ ಸ್ನಾಚಿಂಗ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಉಮೇಶ್ ಪ್ರೀತಿ ಮಾಡವಾಗ ಆಕೆ ಅಪ್ರಾಪ್ತೆಯಾಗಿದ್ದು,ಅಪ್ರಾಪ್ತೆಯನ್ನೇ ಮದುವೆಯಾಗಿ ಪೋಕ್ಸೋ ಕೇಸ್ ಅಡಿ ಜೈಲು ಸೇರಿದ್ದ. ಜೈಲಿನಿಂದ ಹೊರ ಬಂದು ಮತ್ತೆ ಮದುವೆಯಾಗಿದ್ದ ಈತ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಸರಗಳ್ಳತನ ಮಾಡುತ್ತಿದ್ದ. ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರ ವಿಚಾರಣೆ ವೇಳೆ ಆರೋಪಿ ಈ ಬಗ್ಗೆ ಬಾಯಿಬಿಟ್ಟಿದ್ದಾನೆ.

Leave A Reply