ಒಂದೇ ದಿನದಲ್ಲಿ 16 ವರ್ಷದ ಅಪ್ರಾಪ್ತ ಯುವತಿಯೊಂದಿಗೆ 17 ಮಂದಿಯಿಂದ ಒತ್ತಾಯದ ಲೈಂಗಿಕ ಕ್ರಿಯೆ |
ಬೆಂಗಾವಲು ಸಿಬ್ಬಂದಿಯೊಬ್ಬನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದಿದ್ದಕ್ಕೆ 16 ವರ್ಷದ ಹುಡುಗಿಯೊಬ್ಬಳನ್ನು ಒಂದೇ ದಿನದಲ್ಲಿ 17 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿರುವ ಅಮಾನವೀಯ ಘಟನೆ ಲಂಡನ್ನಲ್ಲಿ ನಡೆದಿದೆ.
ಕೇವಲ 17 ಮಂದಿ ಮಾತ್ರವಲ್ಲದೇ 30ಕ್ಕಿಂತ ಹೆಚ್ಚು ಪುರುಷರೊಂದಿಗೆ ಬಲವಂತದ ಲೈಂಗಿಕ ಕ್ರಿಯೆಗೆ ಸಂತ್ರಸ್ತೆಯನ್ನು ದೂಡಿರುವ ಆರೋಪವಿದೆ. ಎರಡು ವಾರಗಳಲ್ಲಿ ಪ್ರತಿ ಅರ್ಧ ಗಂಟೆಗೆ 80 ಪೌಂಡ್ ಪಡೆದ ಬಲವಂತಾಗಿ ಲೈಂಗಿಕ ಕ್ರಿಯೆ ಮಾಡಿಸಿದ್ದಾರೆ.
ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದಾಳೆ. ಆರೋಪಿ ಬೆಂಗಾವಲು ಸಿಬ್ಬಂದಿಯನ್ನು ಟೈಝರ್ ಜೋ ವಾಕರ್ ಎಂದು ಗುರುತಿಸಲಾಗಿದೆ. ಈತ ಸಂತ್ರಸ್ತೆ ಜತೆ ಇನ್ ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿ, ಚಾಟಿಂಗ್ ಮೂಲಕ ಮಾಡಿದ ಸಾಲ ಪಾವತಿ ಮಾಡದ ಕಾರಣಕ್ಕೆ 16 ವರ್ಷದ ಹುಡುಗಿಯೊಬ್ಬಳನ್ನು ಒಂದೇ ದಿನದಲ್ಲಿ 17 ಪುರುಷರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡಿರುವ ಅಮಾನವೀಯ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ.
ಈ ಸಂಬಂಧ ಸಂತ್ರಸ್ತೆ ದೂರು ನೀಡಿದ್ದಾಳೆ. ಆರೋಪಿಯಾದ ಬೆಂಗಾವಲು ಸಿಬ್ಬಂದಿ ಟೈಝರ್ ಜೋ ವಾಕರ್ ಎಂಬಾತನೊಂದಿಗೆ ಸಂತ್ರಸ್ತೆ ಇನ್ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿದ್ದಾಳೆ. ನಂತರ ಚಾಟಿಂಗ್ ಮೂಲಕ ಸಂತ್ರಸ್ತೆಯನ್ನು ತನ್ನ ಅಪಾರ್ಟ್ ಮೆಂಟ್ ಕರೆಸಿಕೊಂಡಿದ್ದ. ಹುಡುಗಿ ಬರಲೆಂದು ತಾನೇ 47 ಪೌಂಡ್ ಟ್ಯಾಕ್ಸಿ ಚಾರ್ಜ್ ಪಾವತಿಸಿದ್ದ. ಆದರೆ, ಹುಡುಗಿ ಮನೆಗೆ ಬಂದಾಗ ಟ್ಯಾಕ್ಸಿ ಚಾರ್ಜ್ ಮತ್ತು ಇನ್ನಷ್ಟು ಖರ್ಚು ಎಲ್ಲಾ ಸೇರಿ 100 ಪೌಂಡ್ ಕೊಡುವಂತೆ ಹುಡುಗಿಯನ್ನು ಒತ್ತಾಯಿಸಿದ್ದ. ಆದರೆ ಆಕೆಯ ಬಳಿ ಅಷ್ಟು ಹಣ ಇಲ್ಲದೇ ಇದ್ದುದರಿಂದ ಆ ಹಣವನ್ನು ಯಾವ ರೀತಿ ಪಾವತಿಸಬೇಕೆಂದು ಆಕೆಗೆ ಹೇಳಿದ್ದಾನೆ. ಕೂಡಲೇ ಆರೋಪಿ ಬಲವಂತವಾಗಿ ಸಂತ್ರಸ್ತೆಯ ಫೋಟೋಶೂಟ್ ಮಾಡಿದ್ದಾನೆ. ಆ ಬಳಿಕ 16 ವರ್ಷ ವಯಸ್ಸಿನವಳು ಎಂದು ಹೇಳಿ ಆಕೆಯ ಫೋಟೋವನ್ನು ಆತನ ಪರಿಚಯದವರಿಗೆ ರವಾನಿಸಿದ್ದಾನೆ.
ಇದಾದ ಕೂಡಲೇ ಒಬ್ಬ ವ್ಯಕ್ತಿ ಅಪಾರ್ಟ್ ಮೆಂಟ್ ಗೆ ಬಂದು, ಆಕೆಯ ಜೊತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ. ಆದರೆ ಹುಡುಗಿ ಭಯದಿಂದ ಬಾತ್ ರೂಂ ಗೆ ಹೋಗಿ ಅವಿತುಕುಳಿತಿದ್ದಾಳೆ. ಈ ರೀತಿ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಆಕೆ ಹೇಳಿದ್ದಾಳೆ. ಹಾಗಾದರೆ ನನ್ನ ಹಣ ಹೇಗೆ ಪಾವತಿ ಮಾಡುತ್ತೀಯಾ ಎಂದು ಆರೋಪಿ ಯುವತಿಗೆ ಬೆದರಿಕೆ ಹಾಕಿದ್ದಾನೆ. ನಂತರ ಆರೋಪಿ ಇನ್ನೊಂದು ವ್ಯಕ್ತಿ ಜೊತೆ ಅರ್ಧ ಗಂಟೆಗೆ 80 ಪೌಂಡ್ ನಂತೆ ಒಪ್ಪಂದ ಮಾಡಿಕೊಂಡು ಹುಡುಗಿಯನ್ನು ಲೈಂಗಿ ಕ್ರಿಯೆಗೆ ದೂಡಿದ್ದಾನೆ. ಇದೇ ರೀತಿ 30ಕ್ಕೂ ಹೆಚ್ಚು ಪುರುಷರ ಜತೆ ಹುಡುಗಿಯನ್ನು ಆರೋಪಿ ಬಲವಂತದ ಲೈಂಗಿಕ ಕ್ರಿಯೆ ದೂಡಿದ್ದಾನೆ.
ಈ ಕುರಿತು ಕೇಸನ್ನು ದಾಖಲು ಮಾಡಿದ್ದಾಳೆ ಯುವತಿ. ಈ ಕುರಿತು ಪ್ರಕರಣದ ಪರಿಶೀಲನೆ ನಡೆಸಿದ ನ್ಯಾಯಾಲಯವು ಆರೋಪಿಯು ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದರಿಂದ, 16 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ ಎಂದು ಹೇಳಿದೆ.