ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ ರೂ.20,000/- ದಂಡ ವಿಧಿಸಿದ ಸಂಚಾರಿ ಪೊಲೀಸರು : ಅಷ್ಟಕ್ಕೂ ಇವರು ಯಾವ ನಿಯಮ ಉಲ್ಲಂಘನೆ ಮಾಡಿದ್ದು ?
ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ವ್ಯಕ್ತಿಯೊಬ್ಬರಿಗೆ ಸಂಚಾರಿ ಪೊಲೀಸರು ಬರೋಬ್ಬರಿ ಇಪ್ಪತ್ತು ಸಾವಿರ ಮೊತ್ತದ ದಂಡವನ್ನು ವಿಧಿಸಿದ್ದಾರೆ. ಕಾರಣವೇನೆಂದರೆ ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ಯುವಕರ ಗುಂಪೊಂದು ವಾಹನ ಸಂಚಾರ ಇರುವ ರಸ್ತೆಯಲ್ಲೇ ಕಾರಿನ ಛಾವಣಿಯ ಮೇಲೆ ಮದ್ಯ ಸೇವಿಸಿ ಡ್ಯಾನ್ಸ್ ಮಾಡಿದ್ದಾರೆ.
ಯುವಕರಈ ರೀತಿಯ ವರ್ತನೆ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ವೇಳೆ ಅದೇ ರಸ್ತೆಯಲ್ಲೇ ಸಂಚರಿಸುತ್ತಿದ್ದ ಇನ್ನೊಂದು ಕಾರಿನವರು ಆ ಯುವಕರ ಈ ಪುಂಡಾಟಿಕೆಯ ವಿಡಿಯೋ ಮಾಡಿ ಗಾಝಿಯಾಬಾದ್ ಪೊಲೀಸರಿಗೆ ಟ್ವಿಟರ್ ಮೂಲಕ ಟ್ಯಾಗ್ ಮಾಡಿದ್ದಾರೆ. ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಗಾಝಿಯಾಬಾದ್ ಪೊಲೀಸರು ಕೂಡಲೇ ಕಾರಿನ ಮಾಲಕರಿಗೆ ಸಂಚಾರಿ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಇಪ್ಪತ್ತು ಸಾವಿರ ರೂಪಾಯಿ ದಂಡ ಕಟ್ಟುವಂತೆ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೆ ಪೊಲೀಸರು ವಾಹನ ಮಾಲಕರಿಗೆ ಕಳುಹಿಸಿದ ನೊಟೀಸ್ ನ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.