ಹಬ್ಬದ ದಿನವೇ ಮನೆ ಮಹಾಲಕ್ಷ್ಮಿಯ ದುರಂತ ಅಂತ್ಯ!! ನವವಿವಾಹಿತೆಯ ಸಾವಿನ ಸುತ್ತ ಹಲವು ಅನುಮಾನ-ಪೊಲೀಸರ ತನಿಖೆ ಚುರುಕು

0 12

ಚಿಕ್ಕಮಗಳೂರು:ಯುಗಾದಿ ಹಬ್ಬದ ದಿನದಂದೇ ನವವಿವಾಹಿತ ಮಹಿಳೆಯೊಬ್ಬರು ಮೃತಪಟ್ಟ ಘಟನೆಯೊಂದು ಬೆಳಕಿಗೆ ಬಂದಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾದ ಬೆನ್ನಲ್ಲೇ ಪತಿ ಸಹಿತ ಅತ್ತೆ ಮಾವನ ವಿರುದ್ಧ ಪ್ರಕರಣ ದಾಖಲಾಗಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಮೂಡಿಗೆರೆ ತಾಲೂಕಿನ ಕಾರಬೈಲು ನಿವಾಸಿ ಗಾನವಿ (27) ಎಂದು ಗುರುತಿಸಲಾಗಿದೆ. ಮಹಿಳೆಯು ಕಳೆದ ವರ್ಷ ನಂದಿತ್ ಎನ್ನುವಾತನನ್ನು ವಿವಾಹವಾಗಿದ್ದು ಅತ್ತೆ ಮನೆಯಲ್ಲಿ ಪ್ರತಿದಿನವೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇತ್ತೀಚಿಗಷ್ಟೇ ಮಹಿಳೆಯ ತಂದೆ ಮಹಿಳೆಯ ಪತಿಗೆ ಎರಡು ಲಕ್ಷ ಹಣವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಆದರೂ ಆತನ ಬಯಕೆ ತೀರದೆ ಇನ್ನಷ್ಟೂ ಹಣಕ್ಕೆ ಬೇಡಿಕೆ ಇರಿಸಿದ್ದ, ಇದೇ ಕಾರಣಕ್ಕಾಗಿ ಪ್ರತೀ ದಿನವೂ ಮಹಿಳೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಹಬ್ಬದ ಹಿಂದಿನ ದಿನವೂ ಮನೆಯಲ್ಲಿ ಜಗಳ ನಡೆದಿದ್ದು, ಈ ವೇಳೆ ಪತಿ,ಅತ್ತೆ ಮಾವ ಮೂವರೂ ಸೇರಿಕೊಂಡು ಮಹಿಳೆಗೆ ಬಲವಂತವಾಗಿ ವಿಷ ಕುಡಿಸಿ ಸಾಯಿಸಿದ್ದಾರೆ ಎಂದು ಮಹಿಳೆಯ ತಂದೆ ದೂರು ನೀಡಿದ್ದಾರೆ.

ಪ್ರಕರಣದಲ್ಲಿ ಹಿನ್ನೆಲೆಯಲ್ಲಿ ಮಹಿಳೆಯ ಪತಿ, ಅತ್ತೆ ಮಾವ ನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಯ ಬಳಿಕ ಕೊಲೆಯೋ ಆತ್ಮಹತ್ಯೆಯೋ ಎನ್ನುವ ಅನುಮಾನಕ್ಕೆ ತೆರೆ ಬೀಳಲಿದೆ.

Leave A Reply