ಬೀದಿಯಲ್ಲಿ ಯರ್ರಾಬಿರ್ರಿ ಹೊಡೆದಾಡಿಕೊಂಡ ಪ್ರೇಮಿಗಳು | ಇವರ ಕಿತ್ತಾಟ ನೋಡಿ ಸುಸ್ತಾದ ಡೆಲಿವರಿ ಬಾಯ್ ಮಾಡಿದ್ದೇನು ಗೊತ್ತಾ!??

ಭುವನೇಶ್ವರ:ಪ್ರೇಮಿಗಳು ಎಷ್ಟು ಆತ್ಮೀಯತೆಯಿಂದ ಇರುತ್ತಾರೋ ಅಷ್ಟೇ ಕಿತ್ತಾಟಕೂಡ ನಡೆಸುತ್ತಾರೆ. ಆದ್ರೆ ಇದು ಸ್ವಲ್ಪ ಹೊತ್ತಿನ ಮಟ್ಟಿಗೆ ಅಷ್ಟೇ. ಮತ್ತೆ ವಾಪಾಸ್ ಏನು ಆಗದಂತೆ ಇರುತ್ತಾರೆ. ತುಂಬಾ ಜನ ಹೇಳುವುದುಂಟು ಅವರಿಬ್ಬರ ಜಗಳದ ನಡುವೆ ಮೂಗುತೂರಿಸಿದರೆ ನಾವೇ ದುಷ್ಮನ್ ಆಗುತ್ತೇವೆಂದು. ಅದೇ ರೀತಿ ಇಲ್ಲಿ ಪ್ರೇಮಿಗಳ ಜಗಳದ ನಡುವೆ ಮೂರನೇಯವನು ಎಂಟ್ರಿ ನೀಡಿ ಆ ಕಿತ್ತಾಟ ಯಾವ ಮಟ್ಟಿಗೆ ಮುಗಿಸಿದ್ದಾನೆ ಗೊತ್ತಾ!??

ಹೌದು. ಪ್ರೇಮಿಗಳಿಬ್ಬರು ಯಾರನ್ನು ಲೆಕ್ಕಿಸದೆ ರಸ್ತೆಯಲ್ಲೇ ಜಗಳಕ್ಕಿಳಿದಿದ್ದಾರೆ. ಪ್ರಿಯಕರ ಎಂದೂ ನೋಡದೆ ಆಕೆ ಮಾತ್ರ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.ಅವರ ಜಗಳ ನೋಡುತ್ತಾ ನಿಂತ ವ್ಯಕ್ತಿ ಸಮಾಧಾನ ಪಡಿಸಲೆಂದು ಇಬ್ಬರ ಜಗಳದಲ್ಲಿ ಮೂರನೆಯವ ಮಧ್ಯಪ್ರವೇಶಿಸಿದ್ದಾನೆ.

ಒಡಿಶಾದ ಭುವನೇಶ್ವರದಲ್ಲಿ ನಡೆತಿದ್ದ ಪ್ರೇಮಿಗಳ ಜಗಳದಲ್ಲಿ ಎಂಟ್ರಿಯಾದ ಫುಡ್ ಡೆಲಿವರಿ ಬಾಯ್, ಯುವತಿಗೆ ಹಿಗ್ಗಾಮುಗ್ಗಾ ಜಾಡಿಸಿದ್ದಾನೆ.ಇದರಿಂದ ಪ್ರೇಮಿಗಳ ಜಗಳದಲ್ಲಿ ಮೂರನೇಯವನ ಎಂಟ್ರಿಯಿಂದ ಬೀದಿ ಕಾಳಗವಾಗಿ ಮಾರ್ಪಟ್ಟಿದೆ.ಇದೀಗ ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಪಾರ್ಕ್‌ನಿಂದ ಹೊರಬಂದ ನಂತರ ಯುವತಿ ತನ್ನ ಗೆಳೆಯನೊಂದಿಗೆ ತೀವ್ರ ಜಗಳವಾಡಿದ್ದಾಳೆ. ಆಕೆ ತನ್ನ ಬಾಯ್‌ಫ್ರೆಂಡ್‌ಗೆ ನಿಂದಿಸಿದ್ದಾಳೆ. ಆತನ ಮೇಲೆ ಕೈ ಮಾಡಿದ್ದಲ್ಲದೆ ಕಲ್ಲು ಎಸೆದಿದ್ದಾಳೆ. ಈ ವೇಳೆ ಸ್ಥಳಕ್ಕೆ ಜಮಾಯಿಸಿದ ಸ್ಥಳೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ದೃಶ್ಯವನ್ನು ರೆಕಾರ್ಡ್ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿ ಜನರ ಫೋನ್ ಕಸಿದುಕೊಳ್ಳಲು ಪ್ರಯತ್ನಿಸಿದ್ದಾಳೆ.

ಈ ವೇಳೆ ಆಹಾರ ವಿತರಣಾ ಕಾರ್ಯನಿರ್ವಾಹಕ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾನೆ. ಆದರೆ, ಆತನನ್ನೂ ಅಸಭ್ಯವಾಗಿ ನಿಂದಿಸಿದ್ದಾಳೆ. ಇದರಿಂದ ಮಾತಿನ ಚಕಮಕಿ ಉಂಟಾಗಿದೆ. ಕೊನೆಗೆ ಕೋಪಗೊಂಡ ಫುಡ್ ಡೆಲಿವರಿ ಬಾಯ್ ಆಕೆಯನ್ನು ಥಳಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಇತರರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪ್ರಯತ್ನಿಸಿದ್ದಾರೆ.

https://twitter.com/rohitkhan059/status/1509763250686095360?s=20&t=l-040HjaKDezFQd7vaHUkg


ಇನ್ನು ಈ ವಿಷಯ ಸಂಬಂಧ ಯುವತಿಯಾಗಲಿ ಅಥವಾ ಡೆಲಿವರಿ ಎಕ್ಸಿಕ್ಯೂಟಿವ್ ಆಗಲಿ ಇದುವರೆಗೆ ಪೊಲೀಸ್ ದೂರು ದಾಖಲಿಸಿಲ್ಲ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

https://twitter.com/rohitkhan059/status/1509763250686095360?s=20&t=l-040HjaKDezFQd7vaHUkg

Leave A Reply

Your email address will not be published.