PM ನರೇಂದ್ರ ಮೋದಿ ಹತ್ಯೆಗೆ ಸಂಚು!

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆ ಮಾಡಲಾಗುವುದು ಎಂದು ಅನಾಮಧೇಯ ವ್ಯಕ್ತಿಯೋರ್ವನಿಂದ ಇ ಮೇಲ್ ಬಂದಿದ್ದು, ಕೊಲೆ ಬೆದರಿಕೆ ಹಾಕಿರುವ ಸ್ಫೋಟಕ ಮಾಹಿತಿಯನ್ನು ಕೇಂದ್ರದ ಗುಪ್ತಚರ ಸಂಸ್ಥೆ ಬಹಿರಂಗ ಮಾಡಿದೆ.

‘ಮೋದಿಯಿಂದಾಗಿ ನನ್ನ ಜೀವನ ಹಾಳಾಗಿದೆ. ನನ್ನ ರೀತಿಯಲ್ಲೇ ಹಲವಾರು ಮಂದಿ ಸಂಕಷ್ಟದಲ್ಲಿದ್ದಾರೆ. ಮೋದಿಯನ್ನು ಮುಗಿಸುವುದೇ ನನ್ನ ಗುರಿ. 20 ಸ್ಲಿಪರ್ ಸೆಲ್‌ಗಳು ಸಕ್ರಿಯವಾಗಿವೆ. ಮೋದಿ ಹತ್ಯೆಗೆ 20 ಕೆಜಿ RDX ಬಳಸಲಾಗುತ್ತೆ. ದೇಶಾದ್ಯಂತ 20 ಕಡೆ RDX ಸ್ಫೋಟಿಸಿ 2 ಕೋಟಿಗೂ ಅಧಿಕ ಜನರನ್ನು ಬಲಿ ತೆಗೆದುಕೊಳ್ಳುತ್ತೇನೆ. ನಿಮ್ಮಲ್ಲಿ ತಡೆಯುವ ತಾಕತ್ತು ಇದ್ದರೆ ತಡೆಯಿರಿ’ ಎಂದು ಅನಾಮಧೇಯ ವ್ಯಕ್ತಿಯಿಂದ ಮುಂಬೈನಲ್ಲಿರುವ ನ್ಯಾಷನಲ್ ಇನ್ವೆಸ್ಟಿಗೇಶನ್ ಸಂಸ್ಥೆಗೆ ಮೇಲ್ ಬಂದಿದೆ.


Ad Widget

Ad Widget

Ad Widget

ಹಾಗಾಗಿ ತನಿಖಾ ದಳ ಹೈ ಅಲರ್ಟ್ ಆಗಿದ್ದು, ಇಮೇಲ್ ಮಾಡಿದವನ ಜಾಡು ಹಿಡಿದು ಕಾರ್ಯಾಚರಣೆ ನಡೆಸಲು ಪ್ರಾರಂಭ ಮಾಡಿದೆ.

ಈ ನಡುವೆ ಇತ್ತೀಚಿನ ದಿನಗಳಲ್ಲಿ ದೆಹಲಿ ಸುತ್ತಮುತ್ತಲ ವಲಯದಲ್ಲಿ ಆರ್ ಡಿಎಕ್ಸ್ ಪತ್ತೆಯಾದ ಸುದ್ದಿಗಳೂ ವರದಿಯಾಗಿದ್ದವು. ಉತ್ತರ ಪ್ರದೇಶದ ಭಾಗವಾಗಿರುವ, ದೆಹಲಿಯೊಂದಿಗೆ ಗಡಿ ಹಂಚಿಕೊಂಡಿರುವ ಗಾಜಿಯಾಬಾದ್ ನ ಹೂವಿನ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ಆರ್ ಡಿಎಕ್ಸ್ ಪತ್ತೆಯಾಗಿತ್ತು. ಆ ಬಳಿಕ ಪಂಚರಾಜ್ಯ ಚುನಾವಣೆಯ ವೇಳೆಯಲ್ಲೂ ದೆಹಲಿಯಲ್ಲಿ ಆರ್ ಡಿಎಕ್ಸ್ ಪತ್ತೆಯಾದ ಬಗ್ಗೆ ವರದಿಯಾಗಿದ್ದವು.

Leave a Reply

error: Content is protected !!
Scroll to Top
%d bloggers like this: