ಇಂದು ಎಪ್ರಿಲ್ 1, ಮೂರ್ಖರ ದಿನ ! ದಿನದ ವಿಶೇಷತೆ, ಎಲ್ಲಿ ಈ ದಿನದ ಆಚರಣೆ ಹುಟ್ಟಿದ್ದು ? ಸಂಪೂರ್ಣ ಮಾಹಿತಿ ಇಲ್ಲಿದೆ!

ಭಾರತದಲ್ಲಿ ಮಾತ್ರ ಅಲ್ಲ, ಎಲ್ಲ ದೇಶಗಳಲ್ಲೂ ಏಪ್ರಿಲ್ 1.ನ್ನು ಮೂರ್ಖರ ದಿನ ಎಂದು ಆಚರಿಸಲಾಗುತ್ತದೆ. ಎಪ್ರಿಲ್ ಫೂಲ್ ಮೊದಲು ಹುಟ್ಟಿದ್ದು ಫ್ರಾನ್ಸ್ ದೇಶದಲ್ಲಿ ಎಂಬುವುದಾಗಿ ಇತಿಹಾಸಕಾರರು ಹೇಳುತ್ತಾರೆ. ಬಳಿಕ ಇದು ಯುರೋಪ್ ನ ದೇಶಗಳಲ್ಲೂ ಆಚರಿಸಲು ಆರಂಭಿಸಿದರು. ನಂತರ ಅಲ್ಲಿಂದ ಹಲವು ದೇಶಗಳಿಗೆ ವ್ಯಾಪಿಸಿದೆ. ಹಾಗಾದರೆ, ಏಪ್ರಿಲ್ ಫೂಲ್ ದಿನ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಏಪ್ರಿಲ್ ಫೂಲ್ ದಿನದ ಆಚರಣೆಯ ನಿಖರವಾದ ಮಾಹಿತಿ ಮಾತ್ರ ಇನ್ನೂ ನಿಗೂಢವಾಗಿದೆ. ಇದನ್ನು ಯಾರು ಪ್ರಾರಂಭಿಸಿದರು ಅಥವಾ ಕಂಡುಹಿಡಿದರು ಎಂದು ಯಾರಿಗೂ ತಿಳಿದಿಲ್ಲ. ಆದರೂ, ಇತಿಹಾಸಕಾರರ ಪ್ರಕಾರ ಇದು 1582ರ ಹಿಂದೆಯೇ ಶುರುವಾಗಿದ್ದು. ಮೊದಲು ಫ್ರಾನ್ಸ್ ನಲ್ಲಿ ಆರಂಭವಾಗಿ ಬಳಿಕ ಯುರೋಪ್ ದೇಶಗಳಲ್ಲಿ ಆರಂಭವಾಯಿತು ಎನ್ನುತ್ತಾರೆ. ಸಿಂಪಲ್ ಆಗಿ ಹೇಳಬೇಕೆಂದರೆ ಕ್ಯಾಲೆಂಡರ್ ಬದಲಾವಣೆಯೇ ಮೂರ್ಖರ ದಿನ ಎಂದು ಕರೆಯಲಾಗುತ್ತದೆ.


Ad Widget

Ad Widget

Ad Widget

ಜೂಲಿಯನ್ ಕ್ಯಾಲೆಂಡರ್ ನ್ನು
ಫ್ರಾನ್ಸ್ ನಲ್ಲಿ ಮೊದಲು ಬಳಕೆ ಮಾಡಲಾಗುತ್ತಿತ್ತು. ಈ ಜೂಲಿಯನ್ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಎಪ್ರಿಲ್ 1 ರಂದು ಆಚರಿಸಲಾಗುತ್ತದೆ. ಹಲವು ದಶಕಗಳ ಹಿಂದೆ ಇಡೀ ಜಗತ್ತೆ ಎಪ್ರಿಲ್ 1 ರಂದು ಹೊಸ ವರ್ಷವನ್ನು ಜೂಲಿಯನ್ ಕ್ಯಾಲೆಂಡರ್ ಪ್ರಕಾರ ಆಚರಣೆ ಮಾಡಲಾಗುತ್ತಿತ್ತು.

ಆದರೆ ಫ್ರಾನ್ಸ್ ದೇಶವೂ ಪೋಪ್ XIIನೇ ಗ್ರೆಗೊರಿ ಸೂಚನೆ ಪ್ರಕಾರ ಗ್ರೆಗೋರಿಯನ್ ಕ್ಯಾಲೆಂಡರ್ ಬಳಕೆ ಮಾಡಲು ಆರಂಭಿಸಿತು. ಈ ಗ್ರೆಗೋರಿಯನ್ ಕ್ಯಾಲೆಂಡರ್ ನಲ್ಲಿ ಹೊಸ ವರ್ಷವನ್ನು ಜನವರಿ 1 ರಂದು ಆಚರಿಸಬೇಕೆಂದು ಇತ್ತು. ಇದರಿಂದಾಗಿ ಹೀಗಾಗಿ ಇಲ್ಲಿಯವರೆಗೆ ಜನವರಿ 1 ರ ಬದಲು ಎಪ್ರಿಲ್ 1ರಂದು ನಾವು ಹೊಸ ವರ್ಷ ಆಚರಿಸುತ್ತಿದ್ದೆವು ಎಂದು ತಿಳಿದ ಫ್ರಾನ್ಸ್ ದೇಶ, ಇಷ್ಟು ದಿನ ನಾವು ಮೂರ್ಖರಾದೆವು ಎಂದು ಅಂದುಕೊಂಡಿತು.

ಎಪ್ರಿಲ್ 1 ನ್ನು ಹೊಸ ವರ್ಷ ಎಂದು ನಂಬಿದವರು ಹಾಗೂ ಈಗಾಲೂ ಎಪ್ರಿಲ್ 1 ರಂದು ಹೊಸ ವರ್ಷ ಆಚರಣೆ ಮಾಡುತ್ತಿರುವ ಹಿನ್ನೆಲೆ ಈ ದಿನವನ್ನು ಮೂರ್ಖರ ದಿನವನ್ನಾಗಿ ಆಚರಿಸಲಾಗುತ್ತಿದೆ.

Leave a Reply

error: Content is protected !!
Scroll to Top
%d bloggers like this: