ಮೊದಲ‌ ಅನುಭವದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ! ಇದು ಯಾಕಿಷ್ಟು ಸ್ಪೆಶಲ್ ? ಇಲ್ಲಿದೆ ನೋಡಿ

ಪಿಜ್ಜಾ  ಅಂದ್ರೆ ಯಾರಿಗೆ ತಾನೇ ಇಷ್ವವಿಲ್ಲ. ಹಿಂದಿನ ಕಾಲದಲ್ಲಿ ರೊಟ್ಟಿ ಚಪಾತಿ ತಿನ್ನುತ್ತಿದ್ದ ಜನ ಈಗ ಪಿಜ್ಜಾ ಇಷ್ಟಪಡುತ್ತಾರೆ. ಕೆಲವರಿಗೆ ಪಿಜ್ಜಾ ಎಂದರೆ ಪ್ರಾಣ ಮೂರು ಹೊತ್ತು ಅದನ್ನೇ ತಿನ್ನುತ್ತಾರೆ. ಇನ್ನು ಕೆಲವರು ಪಿಜ್ಜಾ ಎಂದರಡ ಮೂಗು ಮುರಿತುತ್ತಾರೆ. ಇನ್ನು ಕೆಲವರಿಗೆ ಪಿಜ್ಜಾ ಹೇಗೆ ತಿನ್ನುವುದು ಎಂದೂ ಗೊತ್ತಿಲ್ಲ ! ಮೊದಲ ಬಾರಿ ಪಿಜ್ಜಾ ತಿನ್ನುವಾಗ ನಿವೆಲ್ಲ ಹೇಗೆ ತಿಂದರಿ ನೆನಪು ಮಾಡಿಕೊಳ್ಳಿ. ಏಕೆಂದರೆ ಇಲ್ಲೊಬ್ಬರು ಮೊದಲ ಬಾರಿ ತಿಂದ ಪಿಜ್ಜಾ ಸಕ್ಕತ್ ವೈರಲ್ ಆಗಿದೆ.

ಇದೇನು ಹೊಸತು ನಾವು ಮೊದಲ ಸಲ ಪಿಜ್ಜಾ ತಿಂದಿದ್ದೀವಿ ನಮ್ಮದೇಕೆ ಪಿಜ್ಜಾ ವಿಡಿಯೋ ವೈರಲ್ ಆಗಿಲ್ಲ ಎಂದು ಯೋಚಿಸುತ್ತಿದ್ದೀರೆ? ಸದ್ಯ ವೈರಲ್ ಆಗುತ್ತಿರುವುದು ಬುಡಕಟ್ಟು ಜನಾಂಗ ದವರು ಪಿಜ್ಜಾ ಸವಿದಿರುವ ವೀಡಿಯೋ. ಬುಡಕಟ್ಟು ಜನಾಂಗದವರ ಆಹಾರ ಶೈಲಿ ವಿಭಿನ್ನ. ಅವರಿಗೆ ಪಿಜ್ಜಾ ಎತ್ತಣ ಕೋಗಿಲೆ, ಎತ್ತಣ ಮಾಮರ, ಎಲ್ಲಿಗೆ ಎಲ್ಲಿಂದ ಸಂಬಂಧ!?


Ad Widget

Ad Widget

Ad Widget

ಪಿಜ್ಜಾ ಅವರ ಪಾಲಿಗೆ ವಿಚಿತ್ರ ಆಹಾರ. ಹಾಗಿದ್ರೆ ಮೊದಲ ಬಾರಿಗೆ ಪಿಜ್ಜಾ ತಿಂದವರ ರಿಯಾಕ್ಷನ್ ಹೇಗಿತ್ತು ಗೊತ್ತೆ ?! ಮಸಾಯಿ ಬುಡಕಟ್ಟಿನ ಜನರು ಮೊದಲ ಬಾರಿಗೆ ಪಿಜ್ಜಾ ಪ್ರಯತ್ನಿಸುತ್ತಿರುವ ವೀಡಿಯೊ ಭರ್ಜರಿ ವೈರಲ್ ಆಗಿದೆ. ಸಿಕ್ಕಾಪಟ್ಟೆ ಲೈಕ್ ಬಂದಿದೆ. ಅವರು ಟಾಂಜಾನಿಯಾದಿಂದ ಬಂದವರು. ಮೊದಲ ಬಾರಿಗೆ ಪಿಜ್ಜಾವನ್ನು ಸವಿಯುತ್ತಿರುವುದಾಗಿ ಅವರು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಅವರೇ ಅವರದೇ ಆದ ಯೂಟ್ಯೂಬ್ ಚಾನಲ್ ನಲ್ಲಿ ಹಾಕಿಕೊಂಡಿದ್ದಾರೆ.

ಒಬ್ಬ ವ್ಯಕ್ತಿಯು ಇಡೀ ಪಿಜ್ಜಾವನ್ನು ತೆಗೆದುಕೊಂಡು ಅದನ್ನು ತಿನ್ನಲು ಪ್ರಯತ್ನಿಸುತ್ತಿನೆ. ಇನ್ನೊಬ್ಬನು ಪಿಜ್ಜಾ ಸ್ಲೈಸ್ ಅನ್ನು ಕಟ್ ಮಾಡಲು ಒದ್ದಾಡುತ್ತಿದ್ದಾನೆ. ಪಿಜ್ಜಾ ತಿಂದ ನಂತರ ಗುಂಪಿನಲ್ಲಿರುವ ಒಬ್ಬ ವ್ಯಕ್ತಿಯು, ಪಿಜ್ಜಾ ಹೊಟ್ಟೆಯಲ್ಲಿ ಎಷ್ಟು ದಿನ ಇರುತ್ತದೆ ಎಂದು ಕೇಳುತ್ತಾನೆ. ಇನ್ನೊಬ್ಬ ನನಗೆ ಪಿಜ್ಜಾ ನಿಜವಾಗಿಯೂ ಇಷ್ಟವಾಯಿತು. ರುಚಿಕರವಾಗಿರುವ ಈ ಆಹಾರವನ್ನು ಮತ್ತೊಮ್ಮೆ ತಿನ್ನಲು ಇಷ್ಟಪಡುತ್ತಾರೆ ಎನ್ನುತ್ತಾನೆ. ಮೊದಲ ಬಾರಿಗೆ ನಾವು ಪಿಜ್ಜಾವನ್ನು ಪ್ರಯತ್ನಿಸಿದ್ದೇವೆ ಮತ್ತು ಈಗ ನಮಗೆ ಇನ್ನಷ್ಟು ಬೇಕು ಎಂದು ವೀಡಿಯೊದ ಶೀರ್ಷಿಕೆಯಲ್ಲಿ ಹೇಳಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: