ಬೇಸಿಗೆಯಲ್ಲಿ ಆಹಾರ ಕೆಡದಂತೆ ಇಡಲು ಕೆಲವೊಂದು ಟಿಪ್ಸ್ | ಆಹಾರ ಕೆಟ್ಟೋಯ್ತು ಅನ್ನೋರು ಇದನ್ನು ಓದಿ!

ಬೇಸಿಗೆ ಈಗಾಗಲೇ ಶುರುವಾಗಿದೆ. ಬಿಸಿಲಿನ ಝಳಕ್ಕೆ ಮನುಷ್ಯ ಸುಸ್ತಾಗಿ ಹೋಗಿದ್ದಾನೆ. ಬೇಸಿಗೆಯಲ್ಲಿ ಆರೋಗ್ಯದಲ್ಲಿ ಏರು ಪೇರಾಗುವುದು ಸಹಜ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಮಾತ್ರವಲ್ಲ ಆಹಾರದ ಬಗ್ಗೆಯೂ ಕಾಳಜಿ ವಹಿಸುವುದು ಮುಖ್ಯ. ಯಾಕೆಂದ್ರೆ ಆಹಾರಗಳು ಬಿಸಿಲ ಕಾರಣಕ್ಕೆ ಬಹುಬೇಗ ಹಾಳಾಗುತ್ತವೆ.

ಹಾಲಿನಿಂದ ಹಿಡಿದು ಹಣ್ಣುಗಳ ವರೆಗೆ ಎಲ್ಲ ಆಹಾರಗಳು ಬಿಸಿಲಿನ ತಾಪಮಾನಕ್ಕೆ ಬೇಗ ಹಾಳಾಗುತ್ತದೆ. ಇದನ್ನು ತಿಳಿಯದೆ ನಾವು ಸೇವನೆ ಮಾಡಿದ್ರೆ ಆರೋಗ್ಯ ಹಾಳಾಗುವ ಅಪಾಯವು ಹೆಚ್ಚು.

ಬೇಸಿಗೆಯಲ್ಲಿ ಫುಡ್ ಪಾಯ್ಸನ್ ಅಪಾಯವೂ ಹೆಚ್ಚು. ಹಳಸಿದ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಅಡುಗೆ ಮಾಡಿದ ನಂತರ ಅದನ್ನು ಸರಿಯಾದ ಸಮಯದಲ್ಲಿ ತಿನ್ನುವುದು ಮತ್ತು ಉಳಿದ ಆಹಾರವನ್ನು ಸರಿಯಾಗಿ ಸುರಕ್ಷಿತವಾಗಿರಿಸುವುದು ಬಹಳ ಮುಖ್ಯ.

ಬೇಸಿಗೆಯಲ್ಲಿ ಆಹಾರ ಹಾಳಾಗುವುದು ಮಾಮೂಲಿ. ಅದಕ್ಕಾಗಿ ಬೇಸಿಗೆಯಲ್ಲಿ ಆಹಾರವನ್ನು ಹೆಚ್ಚೆಚ್ಚು ತಯಾರಿಸಬಾರದು. ಒಂದು ವೇಳೆ ಹೆಚ್ಚಾಗಿ ಆಹಾರ ಉಳಿದರೆ ಅದನ್ನು ದೀರ್ಘಕಾಲದವರೆಗೆ ಹೊರಗೆ ಇಡುವುದರಿಂದ, ಅದರಲ್ಲಿ ಬ್ಯಾಕ್ಟಿರಿಯಾಗಳು ಬೆಳೆಯುತ್ತವೆ. ಅದು ಆಹಾರವನ್ನು ಬೇಗ ಹಾಳು ಮಾಡುತ್ತದೆ. ಈ ಸಮಸ್ಯೆ ಎಲ್ಲರೂ ಎದುರಿಸುತ್ತಾರೆ. ಬೇಸಿಗೆಯಲ್ಲಿ ಆಹಾರವನ್ನು ಹೇಗೆ ದೀರ್ಘಕಾಲದವರಗೆ ಹಾಳಾಗದಂತೆ ರಕ್ಷಿಸಬೇಕು ಎಂಬುದಕ್ಕೆ ಕೆಲವೊಂದು ಟಿಪ್ಸ್ ಇಲ್ಲಿದೆ.

ಬೇಸಿಗೆಯಲ್ಲಿ ಹಸಿವಾಗುವುದು ಕಡಿಮೆ. ಬಾಯಾರಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗುವ ಕಾರಣಕ್ಕೆ ಜನರು ಹೆಚ್ಚು ನೀರು ಸೇವನೆ ಮಾಡ್ತಾರೆ. ಇದ್ರಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಹಾಗಾಗಿ ಸಮಯಕ್ಕೆ ಅಗತ್ಯವಿರುವಷ್ಟು ಆಹಾರವನ್ನು ಮಾತ್ರ ತಯಾರಿಸಿ. ಒಮ್ಮೆಲೇ ಒಂದೇ ದಿನಕ್ಕೆ ಆಗುವ ಆಹಾರವನ್ನು ಒಟ್ಟಿಗೆ ತಯಾರಿಸಬೇಡಿ. ಅಲ್ಲದೆ ಆಹಾರ ಸೇವನೆ ಮಾಡುವ ಎರಡು ಗಂಟೆ ಮೊದಲು ಆಹಾರ ತಯಾರಿಸಿದರೆ ಉತ್ತಮ.

ಮನೆಯಲ್ಲಿತಯಾರಿಸಿದ ಹೆಚ್ಚಾದಲ್ಲಿ ಅದನ್ನು ತಕ್ಷಣ ಫ್ರಿಜ್ ನಲ್ಲಿಡಿ. ಆಹಾರವನ್ನು ದೀರ್ಘಕಾಲದವರೆಗೆ ರೆಫ್ರಿಜರೇಟರ್‌ನ ಹೊರಗೆ ಇಟ್ಟರೆ, ಅದರಲ್ಲಿ ಬ್ಯಾಕ್ಟಿರಿಯಾಗಳು ಬೆಳೆಯುತ್ತವೆ. ಅದು ಆಹಾರವನ್ನು ತ್ವರಿತವಾಗಿ ಹಾಳುಮಾಡಲು ಪ್ರಾರಂಭಿಸುತ್ತದೆ. ಹಾಗಾಗಿ
ಆಹಾರವನ್ನು ಆದಷ್ಟು ಬೇಗ ಫ್ರಿಜ್ ನಲ್ಲಿಟ್ಟು ಆಹಾರ ಕೊಡುವುದನ್ನು ಬೇಸಿಗೆ ಕಾಲದಲ್ಲಿ ತಪ್ಪಿಸಬಹುದು.

ಎಲ್ಲರೂ ಫ್ರಿಡ್ಜ್ ಉಪಯೋಗಿಸುವುದು ಕಡಿಮೆ. ಅಂಥವರು ಹೊರಗಿನ ತಾಪಮಾನದಲ್ಲಿ ಆಹಾರವನ್ನಿಟ್ಟರೆ ಹಾಳಾಗುತ್ತೆ ಫ್ರಿಡ್ಜ್ ಇಲ್ಲದಿದ್ದರೆ ಚಿಂತೆ ಬೇಡ. ಒಂದು ಪಾತ್ರೆಗೆ ತಣ್ಣನೆಯ ನೀರು ಹಾಕಿ, ಅದರೊಳಗೆ ಆಹಾರದ ಪಾತ್ರೆಯನ್ನು ಇಡಿ. ಇದು ಆಹಾರ ದೀರ್ಘಕಾಲದವರೆಗೆ ಹಾಳಾಗದಂತೆ ರಕ್ಷಿಸುತ್ತದೆ.

ಸಾಮಾನ್ಯವಾಗಿ ಅಡುಗೆ ಮಾಡಿದ ಪಾತ್ರೆಯನ್ನೇ ನಾವು ಫ್ರಿಡ್ಜ್ ನಲ್ಲಿ ಇಡುತ್ತೇವೆ. ಆದ್ರೆ ಮಿಕ್ಕ ಆಹಾರವನ್ನು ತಯಾರಿಸಿದ ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಹಾಕಿ ನಂತ್ರ ಫ್ರಿಡ್ಜ್ ನಲ್ಲಿಡಿ. ಆಹಾರವನ್ನು ನೀವು ತಯಾರಿಸಿದ್ದು ತಕ್ಷಣ ಸೇವನೆ ಮಾಡ್ತಿಲ್ಲ ಎನ್ನುವುದಾದ್ರೆ ನೀವು ಆಹಾರ ಬಿಸಿಯಿರುವಾಗಲೇ ಫ್ರಿಡ್ಜ್ ನಲ್ಲಿ ಇಡಬೇಡಿ. ಆ ಆಹಾರವನ್ನು ಸಾಮಾನ್ಯ ತಾಪಮಾನಕ್ಕೆ ತಂದು ನಂತ್ರ ಫ್ರಿಡ್ಜ್ ನಲ್ಲಿಡಿ. ಬಿಸಿ ಆಹಾರವನ್ನು ಫ್ರಿಡ್ಜ್ ನಲ್ಲಿಟ್ಟರೆ ಆಹಾರ ಹಾಳಾಗುವ ಸಾಧ್ಯತೆಯಿರುತ್ತದೆ.

ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಬೇಕು ಎನ್ನುವವರು ಯಾವುದೇ ಕಾರಣಕ್ಕೂ ಮಾಡಿಟ್ಟ ಅಡುಗೆಯನ್ನು ಪದೇ ಪದೇ ಬಿಸಿ ಮಾಡೇಡಿ. ಆಹಾರವನ್ನು ಪದೇ ಪದೇ ಬಿಸಿ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತವೆ.

Leave A Reply

Your email address will not be published.