ಎಪ್ರಿಲ್ ತಿಂಗಳಲ್ಲಿ ಅರ್ಧ ತಿಂಗಳುಗಳ ಕಾಲ ಬ್ಯಾಂಕ್ ಗಳು ಕ್ಲೋಸ್ !! | ಮುಂದಿನ ತಿಂಗಳ ಬ್ಯಾಂಕ್ ರಜಾ ಪಟ್ಟಿ ಇಂತಿದೆ

ಮಾರ್ಚ್ ತಿಂಗಳು ಇಂದಿಗೆ ಮುಗಿಯುತ್ತಿದೆ. ಈ ತಿಂಗಳು ಆರ್ಥಿಕ ವರ್ಷದ ಕೊನೆ. ನಾಳೆಯಿಂದ ಏಪ್ರಿಲ್, ಅಂದರೆ ಹೊಸ ಆರ್ಥಿಕ ವರ್ಷವು ಪ್ರಾರಂಭವಾಗುತ್ತದೆ. ಇದರೊಂದಿಗೆ, ಏಪ್ರಿಲ್‌ನಲ್ಲಿ ಅನೇಕ ದಿನ ಬ್ಯಾಂಕ್ ರಜೆ ಇರಲಿದೆ. ಯುಗಾದಿ, ಅಂಬೇಡ್ಕರ್ ಜಯಂತಿ, ಹೀಗೆ ಏಪ್ರಿಲ್‌ನಲ್ಲಿ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿಯ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ವಾರದ ರಜೆ ಸೇರಿದಂತೆ ಒಟ್ಟು 15 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ರಜಾದಿನಗಳ ಪಟ್ಟಿಯ ಪ್ರಕಾರ, ಬ್ಯಾಂಕಿಂಗ್ ರಜಾದಿನಗಳು ದೇಶಾದ್ಯಂತ ಒಂದೇ ರೀತಿ ಇರುವುದಿಲ್ಲ. ಅನೇಕ ರಜಾದಿನಗಳು ವಿವಿಧ ರಾಜ್ಯಗಳಲ್ಲಿ ಅಥವಾ ಆ ರಾಜ್ಯಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ಆಚರಿಸಲಾಗುವ ಹಬ್ಬಗಳನ್ನು ಅವಲಂಬಿಸಿರುತ್ತದೆ. ಈ ಎಲ್ಲಾ ರಜಾದಿನಗಳೂ ಎಲ್ಲಾ ರಾಜ್ಯಗಳಲ್ಲಿಯೂ ಅನ್ವಯಿಸುವುದಿಲ್ಲ.

ರಜಾದಿನಗಳ ಪಟ್ಟಿ :

ಏಪ್ರಿಲ್ 1 – ಬ್ಯಾಂಕ್ ಖಾತೆಗಳ ಅನ್ಯುವಲ್ ಕ್ಲೋಸಿಂಗ್
ಏಪ್ರಿಲ್ 2 – ಗುಡಿ ಪಾಡ್ವಾ / ಯುಗಾದಿ ಹಬ್ಬ / ತೆಲುಗು ಹೊಸ ವರ್ಷ / ( ಬೇಲಾಪುರ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಇಂಫಾಲ್, ಜಮ್ಮು , ಮುಂಬೈ, ನಾಗ್ಪುರ, ಪಣಜಿ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ ರಜೆ)
ಏಪ್ರಿಲ್ 3 – ಭಾನುವಾರ ( ವಾರದ ರಜೆ)
ಏಪ್ರಿಲ್ 4 – ಸರಿಹುಲ್‌ ( ರಾಂಚಿಯಲ್ಲಿ ಬ್ಯಾಂಕ್ ರಜೆ )
ಏಪ್ರಿಲ್ 5 – ಬಾಬು ಜಗಜೀವನ್ ರಾಮ್ ಜನ್ಮದಿನ ( ಹೈದರಾಬಾದ್‌ನಲ್ಲಿ ಬ್ಯಾಂಕ್ ರಜೆ )
ಏಪ್ರಿಲ್ 9 – ಶನಿವಾರ (2 ನೇ ಶನಿವಾರ )
ಏಪ್ರಿಲ್ 10 – ಭಾನುವಾರ (ವಾರದ ರಜೆ)
ಏಪ್ರಿಲ್ 14 – ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ಮಹಾವೀರ ಜಯಂತಿ/ ಬೈಸಾಖಿ/ ತಮಿಳು ಹೊಸ ವರ್ಷ/ ಚೈರೋಬಾ, ಬಿಜು ಹಬ್ಬ/ ಬೋಹರ್ ಬಿಹು -( ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ )
15 ಏಪ್ರಿಲ್ – ಶುಭ ಶುಕ್ರವಾರ / ಬಂಗಾಳಿ ಹೊಸ ವರ್ಷ / ಹಿಮಾಚಲ ದಿನ / ವಿಷು / ಬೋಹಾಗ್ ಬಿಹು ( ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ರಜೆ )
16 ಏಪ್ರಿಲ್ – ಬೊಹಾಗ್ ಬಿಹು ( ಗುವಾಹಟಿಯಲ್ಲಿ ಬ್ಯಾಂಕ್ ರಜೆ)
17 ಏಪ್ರಿಲ್ – ಭಾನುವಾರ (ವಾರದ ರಜೆ)
21 ಏಪ್ರಿಲ್ – ಗಡಿಯಾ ಪೂಜೆ ( ಅಗರ್ತಲಾದಲ್ಲಿ ಬ್ಯಾಂಕ್ ರಜೆ)
23 ಏಪ್ರಿಲ್ – ಶನಿವಾರ (ತಿಂಗಳ ನಾಲ್ಕನೇ ಶನಿವಾರ)
24 ಏಪ್ರಿಲ್ – ಭಾನುವಾರ (ವಾರದ ರಜೆ)
29 ಏಪ್ರಿಲ್ – ಶಾಬ್-ಎ-ಖಾದ್ರ್/ಜುಮಾತ್-ಉಲ್-ವಿದಾ ( ಜಮ್ಮು ಮತ್ತು ಶ್ರೀನಗರದಲ್ಲಿ ಬ್ಯಾಂಕ್ ರಜೆ)

Leave A Reply

Your email address will not be published.