ಗರ್ಭಿಣಿ ಮೇಕೆ ಮೇಲೆ‌‌ ಅತ್ಯಾಚಾರ ಎಸಗಿದ ಕಾಮುಕರು ! ಮೇಕೆಗಾದ ಪರಿಸ್ಥಿತಿಗೆ ಬೆಚ್ಚಿ ಬಿದ್ದ ಜನತೆ

Share the Article

ಮಹಿಳೆಯ ಮೇಲೆ ಎಸಗುವ ಕಾಮುಕರ ಸಂಖ್ಯೆ ಹೆಚ್ಚಾಗುತ್ತಿರುವ ಜೊತೆ ಈಗ ಕಾಮುಕ ಪಿಶಾಚಿಗಳು ಗರ್ಭಿಣಿ ಮೇಕೆ ಮೇಲೆ‌ ಅತ್ಯಾಚಾರ ಎಸಗಿದ್ದಾರೆ. ಅಸಹಜ ಸಂಭೋಗದಿಂದಾಗಿ ನರಳಾಡುತ್ತಾ ರಕ್ತಸ್ರಾವದಿಂದ ಮೇಕೆ ಸತ್ತು ಬಿದ್ದಿದೆ.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮೇಕೆಯನ್ನು ಅತ್ಯಾಚಾರ ಮಾಡಿ ಕೊಂದ ಘಟನೆ ನಡೆದಿದೆ. ಆರೋಪಿಯನ್ನು ತಮಿಳುನಾಡಿನ ಹೋಟೆಲ್ ಕಾರ್ಮಿಕ ಸೆಂಥಿಲ್ ಎಂದು ಗುರುತಿಸಲಾಗಿದೆ. ಮೇಕೆಯ ಮರಣೋತ್ತರ ಪರೀಕ್ಷೆ ನಡೆಸಿದ ಸರ್ಕಾರಿ ಪಶು ವೈದ್ಯಾಧಿಕಾರಿಗಳ ಪ್ರಾಥಮಿಕ ವರದಿಯಲ್ಲಿ ಮೇಕೆ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒಳಗಾಗಿರುವುದು ಖಚಿತವಾಗಿದೆ. ವಿವರವಾದ ವರದಿಯಲ್ಲಿ ಮಾತ್ರ ಸಾವಿಗೆ ಕಾರಣ ತಿಳಿದುಬರಲಿದೆ” ಎಂದಿದ್ದಾರೆ.

ಹೋಟೆಲ್ ಮಾಲೀಕರ ದೂರಿನ ಪ್ರಕಾರ, ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಜೋರಾಗಿ ಕಿರುಚಾಡುತ್ತಿರುವ ಶಬ್ದದಿಂದ ಇತರ ಉದ್ಯೋಗಿಗಳು ಎಚ್ಚರಗೊಂಡರು. ಅವರು ಹೊರಗೆ ಬಂದಾಗ ಗರ್ಭಿಣಿ ಮೇಕೆ ರಕ್ತಸ್ರಾವವಾಗಿ ಕೆಳಗೆ ಬಿದ್ದಿರುವುದನ್ನು ನೋಡಿದರು. ಅಷ್ಟರಲ್ಲಿ ಒಬ್ಬ ವ್ಯಕ್ತಿಯು ಆ ಸ್ಥಳದಿಂದ ಓಡಿಹೋಗುವುದನ್ನು ನೋಡಿದರು. ಆತನನ್ನು ಆರೋಪಿ ಎಂದು ಖಚಿತವಾದ ನಂತರ ಪೊಲೀಸರಿಗೆ ಒಪ್ಪಿಸಲಾಯಿತು. ಈ ಕೃತ್ಯದಲ್ಲಿ ಮತ್ತಿಬ್ಬರು ಭಾಗಿಯಾಗಿದ್ದಾರೆ ಎಂದು ಹೋಟೆಲ್ ಮಾಲೀಕರು ಹೇಳಿದ್ದಾರೆ. 

ಆದರೆ, ಪೊಲೀಸರು ಸೆಂಥಿಲ್ ಒಬ್ಬನೇ ಆರೋಪಿ ಎಂದು ಹೇಳುತ್ತಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ.
ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಆರೋಪಿಗಳ ವಿರುದ್ಧ ಪ್ರಾಣಿ ಹಿಂಸೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. 

Leave A Reply