ಈಕೆಗೆ ಹೊಸ ಡ್ರೆಸ್ ಖರೀದಿ ಮಾಡೋದು ಅಲರ್ಜಿಯಂತೆ | ಮದುವೆ, ಪಾರ್ಟಿ, ಫಂಕ್ಷನ್ ಎಲ್ಲಾ ಕಡೆ ಒಂದೇ ಡ್ರೆಸ್ ಧರಿಸಿ ಬರ್ತಾಳೆ ಮಹಿಳೆ !

ಮಹಿಳೆಯರಿಗೆ ಎಷ್ಟು ಬಟ್ಟೆ ಇದ್ದರೂ ಸಾಲದು ಎಂದು ಹೇಳುವ ಮಾತು ಸತ್ಯ. ಏಕೆಂದರೆ ಮಹಿಳೆಯರು ಶಾಪಿಂಗ್ ಪ್ರಿಯರು. ವಿಧ ವಿಧವಾದ ಟ್ರೆಂಡಿಂಗ್ ಬಟ್ಟೆ ಇದೆಲ್ಲಾ ಮಹಿಳೆಯರಿಗೆ, ಯುವತಿಯರಿಗೆ ತುಂಬಾನೇ ಇಷ್ಟ. ಒಂದು ಕಡೆ ಫಂಕ್ಷನ್ ಗೆಂದು ಹಾಕಿದ ಬಟ್ಟೆಯನ್ನು ಇನ್ನೊಮ್ಮೆ ಯಾರೂ ಕೂಡಾ ಇನ್ನೊಂದು ಫಂಕ್ಷನ್ ಗೆ ಹಾಕಲು ಇಷ್ಟ ಪಡಲ್ಲ. ಎಲ್ಲರಿಗಿಂತಲೂ ಚೆನ್ನಾಗಿ ಕಾಣಬೇಕೆಂಬ ಆಸೆ ಮಹಿಳೆಯರಿಗೆ ತುಂಬಾ ಇಷ್ಟ.

ಎಲ್ಲರಿಗಿಂತ ಚೆನ್ನಾಗಿ ಕಾಣಬೇಕು ಅನ್ನೋ ಮಹಿಳೆಯರ ಮಧ್ಯೆ ಇಲ್ಲೊಬ್ಬ ಮಹಿಳೆ ಎಲ್ಲಾ ಮದುವೆ ಸಮಾರಂಭಗಳಿಗೂ ಒಂದೇ ಡ್ರೆಸ್ ಧರಿಸಿ ಬರುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

ಪಾರ್ಟಿ, ಫಂಕ್ಷನ್ ಗಾಗಿ ಡ್ರೆಸ್ ಖರೀದಿಸಲು ಸಾವಿರಾರು ರೂಪಾಯಿ ಖರ್ಚು ಮಾಡೋದು ಅವಳಿಗೆ ಇಷ್ಟವಿಲ್ಲವಂತೆ. ಅಮೆರಿಕ ಮೂಲದ ಈ ಮಹಿಳೆ ಸದ್ಯ ಕೆನಡಾದಲ್ಲಿ ನೆಲೆಸಿದ್ದಾಳೆ. ಕಳೆದ ಹಲವು ವರ್ಷಗಳಿಂದ ಒಂದೇ ಡ್ರೆಸ್ ನಲ್ಲಿ ಅದೆಷ್ಟೋ ಮದುವೆ, ಪಾರ್ಟಿಗಳನ್ನು ಅಟೆಂಡ್ ಮಾಡಿದ್ದಾಳೆ. ಆದರೆ ಈಕೆಗೆ ಅದ್ಯಾವುದೇ ಬೇಸರವಿಲ್ಲವಂತೆ.

ತನ್ನ ಬಳಿ ಇರೋದೆಲ್ಲ ಚಳಿಗಾಲಕ್ಕೆ ಸೂಕ್ತವಾದ ಬಟ್ಟೆಗಳು, ಬೇಸಿಗೆಯಲ್ಲಿ ಧರಿಸಲೆಂದೇ ವಿಶೇಷವಾಗಿ ತಾನು ಉಡುಪುಗಳನ್ನು ಖರೀದಿಸಿಲ್ಲ ಎನ್ನುತ್ತಾಳೆ ಈಕೆ. ಅವಳ ಬಳಿ ಒಂದು ಕಪ್ಪು, ಒಂದು ನೀಲಿ ಬಣ್ಣದ ಡ್ರೆಸ್ ಇದೆಯಂತೆ. ಜೊತೆಗೆ ಶಾರ್ಟ್ಸ್ ಧರಿಸ್ತಾಳೆ. ಕ್ಯಾಲಿಫೋರ್ನಿಯಾಕ್ಕೆ ಬಂದಾಗಲೆಲ್ಲ ಇದನ್ನೇ ಹಾಕಿಕೊಳ್ತಾಳೆ.

ಮದುವೆಗಳಿಗೂ ಇಂಥದ್ದೇ ಬಟ್ಟೆಗಳನ್ನು ಧರಿಸಿ ಹೋಗುತ್ತಾಳಂತೆ. ಮೊದ ಮೊದಲು ಆಕೆಯ ಸ್ನೇಹಿತರೆಲ್ಲ ಇವಳ ಈ ನಡೆಗೆ ನಗುತ್ತಿದ್ದರಂತೆ. ಈಗ ಅವರಿಗೂ ಅಭ್ಯಾಸವಾಗಿ ಹೋಗಿದೆ. ಯಾರೂ ಏನೂ ಹೇಳುವುದಿಲ್ಲವಂತೆ. ಇತ್ತೀಚೆಗೆ ಮದುವೆಗೆಂದು ಪರಿಚಯದವರು ಈಕೆಯನ್ನು ಆಹ್ವಾನಿಸಲು ಹೋದಾಗ, ಅದೇ ಹಳೆಯ ನೀಲಿ ಡ್ರೆಸ್ ಧರಿಸಿ ಬರಬೇಡ ಎಂದು ಕಟ್ಟುನಿಟ್ಟಾಗಿ ಹೇಳಿದ್ದರಂತೆ. ತನ್ನ ಉಡುಪುಗಳನ್ನೂ ಜನರು ಇಷ್ಟು ಗಮನಿಸ್ತಾರೆ ಅನ್ನೋದು ಆಗ ಮಹಿಳೆಗೆ ಅರಿವಾಗಿದೆ. ಈ ಬಗ್ಗೆ ಆಕೆ ಸಾಮಾಜಿಕ ತಾಣಗಳಲ್ಲೂ ಬರೆದುಕೊಂಡಿದ್ದಾಳೆ.

Leave A Reply

Your email address will not be published.