ಹಲಾಲ್ ಅಭಿಯಾನ ಶುರುವಾಗಲು ಕಾರಣ ಜಮಾತ್ ಉಲೇಮಾ ?

ಹಿಜಾಬ್ ವಿವಾದದ ಬಳಿಕ ಇದೀಗ ಹಿಂದೂಗಳು ಮತ್ತು ಮುಸ್ಲಿಂರ ನಡುವೆ ಅಂತರ ಹೆಚ್ಚಾಗುತ್ತಿದೆ.ಜಾತ್ರಾ ಉತ್ಸವಗಳಲ್ಲಿ ಹಿಂದೂಯೇತರರಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದವು. ಇದೀಗ ರಾಜ್ಯದಲ್ಲಿ ಹಲಾಲ್ ಬಗ್ಗೆ ಹಿಂದೂ ಸಂಘಟನೆಗಳು ರೊಚ್ಚಿಗೇಳಲು ಬೇರೆಯೇ ಕಾರಣ ಇದೆ ಎಂಬುದು ಬಹಿರಂಗವಾಗಿದೆ ಎನ್ನಲಾಗಿದೆ.

ಹಿಜಾಬ್-ಹಲಾಲ್ ವಿವಾದಕ್ಕೂ ಒಂದಕ್ಕೊಂದು ಸಂಬಂದ ಇದೆ ಎಂಬ ಮಾತು ಕೇಳಿ ಬರುತ್ತಿದೆ.

ಜಮಾತ್ ಉಲೇಮಾ ಟ್ರಸ್ಟ್ ಹಲಾಲ್ ಪ್ರಮಾಣಪತ್ರ ನೀಡುತ್ತಿದೆ. ಹಿಂದಿನಿಂದಲೂ ಈ ಸಂಸ್ಥೆ ಪ್ರಮಾಣಪತ್ರ ನೀಡುತ್ತಿದ್ದರೂ ಇಲ್ಲಿಯವರೆಗೆ ಅದು ದೊಡ್ಡ ಸುದ್ದಿಯಾಗಿರಲಿಲ್ಲ. ಹಲಾಲ್ ಬಗ್ಗೆ ಹಿಂದೆಯೂ ಧ್ವನಿ ಎತ್ತಲಾಗಿದ್ದರೂ ಕರ್ನಾಟಕದಲ್ಲಿ ಅಷ್ಟೊಂದು ಚರ್ಚೆ ಆಗಿರಲಿಲ್ಲ. ಆದರೆ ಹಿಜಾಬ್ ವಿವಾದದಲ್ಲಿ ಈ ಸಂಸ್ಥೆ ನೀಡಿದ ನಗದು ಬಹುಮಾನ ಹಿಂದೂ ಸಂಘಟನೆಗಳನ್ನು ಕೆರಳಿಸಿದೆ.

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಎಂಬಾಕೆ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಕ್ಕಾಗಿ ಜಮಾತ್ ಉಲೇಮಾ ಟ್ರಸ್ಟ್ 5 ಲಕ್ಷ ರೂ. ಹಣ ಘೋಷಿಸಿತ್ತು. ಹಲಾಲ್ ಸರ್ಟಿಫಿಕೇಟ್ ಪಡೆಯಲು ನೀಡಿದ ಹಣವನ್ನೇ ಈ ಸಂಸ್ಥೆ ಬಳಸಿಕೊಂಡಿದೆ ಎನ್ನುವುದು ಹಿಂದೂ ಸಂಘಟನೆಗಳ ಆರೋಪ.

ಭಾರತ ಜಾತ್ಯಾತೀತ ರಾಷ್ಟ್ರ ಎಂದು ಸಂವಿಧಾನ ಹೇಳುತ್ತಿದೆ. ಹಿಜಾಬ್ ಹೋರಾಟದ ಸಮಯದಲ್ಲೂ ಮುಸ್ಲಿಂ ಸಂಘಟನೆಗಳು ನಮ್ಮದು ಜಾತ್ಯಾತೀತ ರಾಷ್ಟ್ರ, ಹಿಂದೂ ರಾಷ್ಟ್ರವಲ್ಲ ಎಂದು ಹೇಳಿದ್ದವು.

ಹೀಗಿರುವಾಗ ಆಹಾರದಲ್ಲಿ ಜಾತಿ ಸಂಸ್ಥೆಯ ಪ್ರಮಾಣಪತ್ರ ಯಾಕೆ ಎನ್ನುವುದು ಹಿಂದೂ ಸಂಘಟನೆಗಳ ಪ್ರಶ್ನೆ. ಈ ಕಾರಣಕ್ಕೆ ರಾಜ್ಯಾದ್ಯಂತ ಹಲಾಲ್ ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳು ಹಿಂದೂ ಬಾಂಧವರಲ್ಲಿ ಮನವಿ ಮಾಡಿಕೊಳ್ಳುತ್ತಿದೆ. ಅಲ್ಲದೆ ಹಿಂದವೀ ಜಟ್ಕಾ ಕಟ್ ಚಿಕನ್ ಸೆಂಟರ್ ಓಪನ್ ಮಾಡಲು ಹಿಂದೂ ಸಂಘಟನೆಗಳು ತಿರ್ಮಾನಿಸಿದೆ ಎನ್ನಲಾಗಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಮಂಡ್ಯ ಸೇರಿ ರಾಜ್ಯದ ಹಲವೆಡೆ ಹಲಾಲ್ ಮಾಂಸ ಖರೀದಿಸದಂತೆ ಅಭಿಯಾನ ಅಭಿಯಾನ ಆರಂಭವಾಗಿದೆ.

ಹಿಂದವೀ ಮಾರ್ಟ್‌‌ನಲ್ಲಿ ಮಾಂಸ ಖರೀದಿಗೆ ಆಫರ್ ನೀಡಿ ಗ್ರಾಹಕರನ್ನು ಬರಮಾಡಿಕೊಂಡಿದ್ದಾರೆ. 5 ಕಿ.ಮೀ ವ್ಯಾಪ್ತಿಯಲ್ಲಿ ಫ್ರೀ ಡೆಲಿವರಿ. 5 ಕಿಮೀ ದಾಟಿಹೋದ್ರೆ 50 ರೂ. ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದೆ. ಇದರೊಂದಿಗೆ ಮಾರುಕಟ್ಟೆಗಿಂತ 50 ರೂ. ಕಡಿಮೆ ದರದಲ್ಲಿ ಮಾಂಸ ಮಾರಾಟ ಮಾಡಲು ಹಿಂದವೀ ಮಾರ್ಟ್ ಮುಂದಾಗಿದೆ. ಹಲಾಲ್‍ಗೆ ಪ್ರತಿಯಾಗಿ ಹಿಂದೂ ಜಟ್ಕಾ ಕಟ್ ಶಾಪ್ ಓಪನ್ ಮಾಡಲು ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ.

Leave A Reply

Your email address will not be published.