23 ವರ್ಷದ ಯುವತಿಯ ಮೇಲೆ ಬಿತ್ತು 45 ವರ್ಷದ ವಿವಾಹಿತನ ಹದ್ದಿನ ಕಣ್ಣು | ಮದುವೆ ಆಫರ್ ತಿರಸ್ಕರಿಸಿದ ಯುವತಿಯ ಮಾನಹಾನಿಗಾಗಿ ಈತ ಮಾಡಿದ ಕೆಲಸವೇನು ಗೊತ್ತೇ ?
ಸಾಮಾಜಿಕ ಮಾಧ್ಯಮದಲ್ಲಿ ವಿವಾಹದ ನಕಲಿ ಮದುವೆಯ ಪ್ರೊಫೈಲ್ ಪೋಸ್ಟ್ ಮಾಡಿದ ಯುವತಿಯ ಮಾನಹಾನಿ ಮಾಡಿದ ವಿಚಾರವಾಗಿ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
23 ವರ್ಷದ ಯುವತಿ ಹಾಗೂ 37 ವರ್ಷದ ವ್ಯಕ್ತಿ ಒಂದೇ ಗುಂಪಿಗೆ ಸೇರಿದವರಾಗಿದ್ದು, ಈ ವ್ಯಕ್ತಿಗೆ ಮೊದಲೇ ಮದುವೆ ಆಗಿದ್ದರೂ ತನ್ನೊಂದಿಗೆ ಸಂಬಂಧ ಇಟ್ಟುಕೊಳ್ಳಲು ಒಪ್ಪದ ಯುವತಿಯ ಮೇಲಿನ ಸಿಟ್ಟಿನಿಂದ ನಕಲಿ ವಿವಾಹದ ಪ್ರೊಫೈಲ್ ಪೋಸ್ಟ್ ಮಾಡಿದ್ದಾನೆ.
ಈ ನಾಚಿಕೆಗೇಡಿನ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆ ಘೋರ್ಪಾಡಿ ಎಂಬಲ್ಲಿ.
ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ನಕಲಿ ಪೋಸ್ಟ್ ನಲ್ಲಿ ಏನು ಬರೆದಿದ್ದ ? ನಕಲಿ ಪೋಸ್ಟ್‌ನಲ್ಲಿ, ಆ ಯುವತಿ ಈಗಾಗಲೇ ಮದುವೆಯಾಗಿ, ವಿಚ್ಛೇದನ ಪಡೆದಿದ್ದಾಳೆ. 45 ವರ್ಷಕ್ಕಿಂತ ಮೇಲ್ಪಟ್ಟ ವರನನ್ನು ಮತ್ತೆ ಮದುವೆಯಾಗಲು ಹುಡುಕುತ್ತಿದ್ದಾಳೆ ಎಂದು ಆತ ಬರೆದಿದ್ದ. ಆ ಯುವತಿಯ ಸಂಬಂಧಿಕರು ಮತ್ತು ಇತರರು ಆ ಪ್ರೊಫೈಲ್ ಅನ್ನು ನೋಡಿದಾಗ, ಅವರು ಆಕೆಗೆ ಫೋನ್ ಮಾಡಿ ಪ್ರಶ್ನಿಸಿದ್ದರು. ಇದರಿಂದ ಆಕೆಗೆ ಆ ನಕಲಿ ಪ್ರೊಫೈಲ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೆಲ್ಲ ಆ 37 ವರ್ಷದ ವ್ಯಕ್ತಿಯ ಕೃತ್ಯ ಎಂದು ಅರ್ಥ ಮಾಡಿಕೊಂಡ ಆಕೆ ಆತನ ಬಳಿ ಹೋಗಿ ಮಾಡಿದ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವಂತೆ ಎಚ್ಚರಿಸಿದ್ದಾಳೆ. ಆದರೆ, ಆತ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ, ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.