23 ವರ್ಷದ ಯುವತಿಯ ಮೇಲೆ ಬಿತ್ತು 45 ವರ್ಷದ ವಿವಾಹಿತನ ಹದ್ದಿನ ಕಣ್ಣು | ಮದುವೆ ಆಫರ್ ತಿರಸ್ಕರಿಸಿದ ಯುವತಿಯ ಮಾನಹಾನಿಗಾಗಿ ಈತ ಮಾಡಿದ ಕೆಲಸವೇನು ಗೊತ್ತೇ ?

ಸಾಮಾಜಿಕ ಮಾಧ್ಯಮದಲ್ಲಿ ವಿವಾಹದ ನಕಲಿ ಮದುವೆಯ ಪ್ರೊಫೈಲ್ ಪೋಸ್ಟ್ ಮಾಡಿದ ಯುವತಿಯ ಮಾನಹಾನಿ ಮಾಡಿದ ವಿಚಾರವಾಗಿ 37 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.


Ad Widget

Ad Widget

23 ವರ್ಷದ ಯುವತಿ ಹಾಗೂ 37 ವರ್ಷದ ವ್ಯಕ್ತಿ ಒಂದೇ ಗುಂಪಿಗೆ ಸೇರಿದವರಾಗಿದ್ದು, ಈ ವ್ಯಕ್ತಿಗೆ ಮೊದಲೇ ಮದುವೆ ಆಗಿದ್ದರೂ ತನ್ನೊಂದಿಗೆ ಸಂಬಂಧ ಇಟ್ಟುಕೊಳ್ಳಲು ಒಪ್ಪದ ಯುವತಿಯ ಮೇಲಿನ ಸಿಟ್ಟಿನಿಂದ ನಕಲಿ ವಿವಾಹದ ಪ್ರೊಫೈಲ್ ಪೋಸ್ಟ್ ಮಾಡಿದ್ದಾನೆ.


Ad Widget

ಈ ನಾಚಿಕೆಗೇಡಿನ ಘಟನೆ ನಡೆದಿರುವುದು ಮಹಾರಾಷ್ಟ್ರದ ಪುಣೆ ಘೋರ್ಪಾಡಿ ಎಂಬಲ್ಲಿ.

ಆರೋಪಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

Ad Widget

Ad Widget

Ad Widget

ನಕಲಿ ಪೋಸ್ಟ್ ನಲ್ಲಿ ಏನು ಬರೆದಿದ್ದ ? ನಕಲಿ ಪೋಸ್ಟ್‌ನಲ್ಲಿ, ಆ ಯುವತಿ ಈಗಾಗಲೇ ಮದುವೆಯಾಗಿ, ವಿಚ್ಛೇದನ ಪಡೆದಿದ್ದಾಳೆ. 45 ವರ್ಷಕ್ಕಿಂತ ಮೇಲ್ಪಟ್ಟ ವರನನ್ನು ಮತ್ತೆ ಮದುವೆಯಾಗಲು ಹುಡುಕುತ್ತಿದ್ದಾಳೆ ಎಂದು ಆತ ಬರೆದಿದ್ದ. ಆ ಯುವತಿಯ ಸಂಬಂಧಿಕರು ಮತ್ತು ಇತರರು ಆ ಪ್ರೊಫೈಲ್ ಅನ್ನು ನೋಡಿದಾಗ, ಅವರು ಆಕೆಗೆ ಫೋನ್ ಮಾಡಿ ಪ್ರಶ್ನಿಸಿದ್ದರು. ಇದರಿಂದ ಆಕೆಗೆ ಆ ನಕಲಿ ಪ್ರೊಫೈಲ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೆಲ್ಲ ಆ 37 ವರ್ಷದ ವ್ಯಕ್ತಿಯ ಕೃತ್ಯ ಎಂದು ಅರ್ಥ ಮಾಡಿಕೊಂಡ ಆಕೆ ಆತನ ಬಳಿ ಹೋಗಿ ಮಾಡಿದ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳುವಂತೆ ಎಚ್ಚರಿಸಿದ್ದಾಳೆ. ಆದರೆ, ಆತ ಅದಕ್ಕೆ ಒಪ್ಪಲಿಲ್ಲ. ಹೀಗಾಗಿ, ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.

error: Content is protected !!
Scroll to Top
%d bloggers like this: