ಹಲಾಲ್ ನಿಷೇಧ ಅಭಿಯಾನ ಭಾರಿ ಜೋರು
ರಾಜ್ಯದಲ್ಲಿ ಹಲಾಲ್ ನಿಷೇಧ ಕುರಿತ ಅಭಿಯಾನ ಜೋರಾಗಿದ್ದು, ಹಿಂದೂ ಜಾಗೃತಿ ವೇದಿಕೆ ಹಾಗೂ ಭಜರಂಗದಳ ಕಾರ್ಯಕರ್ತರು ಹೋಟೆಲ್ ಹಾಗೂ ಅಂಗಡಿಗಳಿಗೆ ಹಾಕಿದ್ದ ಹಲಾಲ್ ಬೋರ್ಡ್ ಗಳನ್ನು ತೆಗೆಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಹಿಂದೂಗಳೇ ಮಾಂಸದ ಅಂಗಡಿ ತೆರೆಯುತ್ತಿದ್ದಾರೆ.
ಹೋಟೆಲ್ ಗಳಲ್ಲಿ ಹಲಾಲ್ ಬೋರ್ಡ್ ಗಳನ್ನು ಸಂಘಟನೆಗಳು ತೆರವುಗೊಳಿಸಿವೆ. ಉಲ್ಲಾಲ ಬಳಿ ಹಿಂದೂಗಳೇ ಎರಡು ಮಾಂಸದ ಅಂಗಡಿಗಳಿಗೆ ಚಾಲನೆ ನೀಡುವ ಮೂಲಕ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದ್ದಾರೆ.
ನೆಲಮಂಗಲದಲ್ಲಿ ಜನ ಜಾಗೃತಿ ಅಭಿಯಾನ ಆರಂಭಿಸಿರುವ ಭಜರಂಗದಳ ಕಾರ್ಯಕರ್ತರು, ಹಲಾಲ್ ಅಲ್ಲಾಹುಗೆ ಮಾಂಸ ಅರ್ಪಣೆ ಮಾಡುವ ವಿಧಾನ. ಪ್ರಾಣಿ ವಧೆ ಕ್ರಿಯೆಯಲ್ಲಿ ವಿಷಕಾರಿ ರಾಸಾಯನಿಕ ಸೇರುತ್ತದೆ. ಅದನ್ನು ಸೇವಿಸಿದರೆ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ. ಹಾಗಾಗಿ ಹಲಾಲ್ ಮಾಂಸ ನಿಷೇಧಿಸುವಂತೆ ಬಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳ ಮೂಲಕವೂ ಅಭಿಯಾನ ಬಿರುಸುಗೊಂಡಿದೆ.