ತಾಯಂದಿರೇ ಗಮನಿಸಿ : ಪ್ರತಿ ತಿಂಗಳು 7000 ರೂ, ಹೆರಿಗೆ ರಜೆ 26 ವಾರ !

ಉದ್ಯೋಗಕ್ಕೆ ಹೋಗುವ ಗರ್ಭಿಣಿ ಮಹಿಳೆಯರಿಗೆ ಕಂಪನಿ ಹೆರಿಗೆ ರಜೆ ನೀಡುತ್ತದೆ. ಇದು ಎಲ್ಲರಿಗೂ ತಿಳಿದ ವಿಷಯ. ಇದರ ಮುಂದುವರಿದ ಭಾಗವಾಗಿ ಇಲ್ಲೊಂದು ಕಂಪನಿ ಹೊಸ ಉಪ ಕ್ರಮಗಳನ್ನು ಘೋಷಿಸಿದೆ. ಇದೀಗ ತಾಯಂದಿರಾದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 7000 ರೂಪಾಯಿ ಕೊಡುವುದಾಗಿ ಕಂಪನಿ ತಿಳಿಸಿದೆ. ಈ ಆಫರ್ ನೀಡಿರುವುದು ಟೆಲಿಕಾಂ ಆಪರೇಟರ್ ಏರ್ಟೆಲ್.

ಮಗುವಿಗೆ 18 ತಿಂಗಳು ತುಂಬುವವರೆಗೆ ವಿಶೇಷ ಮಾಸಿಕ ಭತ್ಯೆ ರೂ 7,000 ನೀಡಲಾಗುವುದು ಎಂದು ಕಂಪನಿ ತಿಳಿಸಿದೆ. ಮಕ್ಕಳನ್ನು ದತ್ತು ಪಡೆದ ತಾಯಂದಿರಿಗೂ ವಿಶೇಷ ಮಾಸಿಕ ಭತ್ಯೆ ಅನ್ವಯಿಸುತ್ತದೆ.

ಹೊಸ ಪೋಷಕರ ಯೋಜನೆಯೊಂದಿಗೆ, ವೈವಿಧ್ಯಮಯ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವಂತಹ ಕೆಲಸದ ಸ್ಥಳವನ್ನು ನಿರ್ಮಿಸುವ ಆಲೋಚನೆ ಇದೆ ಎಂದು ಕಂಪನಿ ಹೇಳಿದೆ. ಈ ಮೂಲಕ ಹೊಸ ತಾಯಂದಿರಿಗೆ ಮತ್ತು ತಂದೆಗೆ ಸಮಯ ಮತ್ತು ಹಣಕಾಸು ನೀಡುವ ಕೆಲವೇ ಕೆಲವು ಕಂಪನಿಗಳ ಪಟ್ಟಿಗೆ ಏರ್‌ಟೆಲ್ ಸೇರಿದೆ.

ವಿತ್ತೀಯ ಪ್ರಯೋಜನಗಳ ಜೊತೆಗೆ, ಕಂಪನಿಯು ಮಹಿಳಾ ಉದ್ಯೋಗಿಗಳಿಗೆ 26 ವಾರಗಳ ಹೆರಿಗೆ ರಜೆಯನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಟೆಲಿಕಾಂ ಆಪರೇಟರ್ 24 ವಾರಗಳ ಪ್ಲೇಕ್ಸಿಬಲ್ ವರ್ಕ್ ಆಯ್ಕೆಯನ್ನು ನೀಡುತ್ತದೆ. ಇದರಿಂದ ಹೊಸ ತಾಯಂದಿರು ತಮಗೆ ಅನೂಕೂಲವಾದ ಸಮಯದಲ್ಲಿ ಕೆಲಸಕ್ಕೆ ಮರಳಬಹುದು. ಅಲ್ಲದೇ ಹೊಸ ತಾಯಂದಿರು ಮಕ್ಕಳ ಆರೈಕೆಗಾಗಿ ಪ್ರತಿ ತ್ರೈಮಾಸಿಕಕ್ಕೆ ಎರಡು ಹೆಚ್ಚುವರಿ ಪಾವತಿಸಿದ ರಜೆಗಳನ್ನು ಪಡೆಯುತ್ತಾರೆ. ಈ ಮೂಲಕ ತಮ್ಮ ನವಜಾತ ಶಿಶುಗಳಿಗೆ ಸಮಯವನ್ನು ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಿಸುವುದು ಕಂಪನಿಯ ಉದ್ದೇಶವಾಗಿದೆ.

Leave A Reply

Your email address will not be published.