ಆಧಾರ್- ಪಾನ್ ಕಾರ್ಡ್ ಲಿಂಕ್ ಮಾಡಲು ನಾಳೆ ಕೊನೆಯ ದಿನ !! | ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ತೆರಬೇಕಾದೀತು ಭಾರೀ ದಂಡ
ಆಧಾರ್ ಕಾರ್ಡ್ ಭಾರತೀಯ ದಾಖಲೆಗಳಲ್ಲಿ ಅತೀ ಮುಖ್ಯವಾದದ್ದು. ಎಲ್ಲಾ ಕೆಲಸಗಳಿಗೂ ಆಧಾರ್ ಇದೀಗ ಕಡ್ಡಾಯವಾಗಿದೆ. ಹೀಗಿರುವಾಗ ಆಧಾರ ಹಾಗೂ ಪಾನ್ ಕಾರ್ಡ್ ಲಿಂಕ್ ಮಾಡಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆಧಾರ್-ಪಾನ್ ಕಾರ್ಡ್ ಲಿಂಕ್ ಮಾಡಲು ಮಾರ್ಚ್ 31 ಕೊನೆಯ ದಿನ. ನೀವು ಇನ್ನೂ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದಾದರೆ, ನಾಳೆಯೊಳಗೆ ಈ ಕೆಲಸವನ್ನು ಮುಗಿಸಿಕೊಳ್ಳಿ. ಇಲ್ಲವಾದರೆ ಭಾರೀ ದಂಡವನ್ನು ತೆರಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಿಬಿಡಿಟಿ ಅಧಿಸೂಚನೆಯನ್ನು ಹೊರಡಿಸಿದೆ.
ಆಧಾರ್‌ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಅಂದರೆ ನಾಳೆ. ಆದರೆ ಇದರ ನಂತರವೂ ದಂಡ ಪಾವತಿಸುವ ಮೂಲಕ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಮಾರ್ಚ್ 31 ರ ನಂತರವೂ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡಬಹುದು ಎಂದು CBDT ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ ನಾಳೆಯ ನಂತರ ದಂಡವನ್ನು ಪಾವತಿಸಬೇಕಾಗುತ್ತದೆ.
ಅಧಿಸೂಚನೆಯ ಪ್ರಕಾರ, ಮಾರ್ಚ್ 31 ರ ನಂತರ 3 ತಿಂಗಳೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡಿದರೆ, 500 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ. 3 ತಿಂಗಳವರೆಗೆ ಅಂದರೆ ಜೂನ್ ವರೆಗೆ ಲಿಂಕ್ ಮಾಡದಿದ್ದರೆ, ನಂತರ 1000 ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.
ಆನ್‌ಲೈನ್‌ನಲ್ಲಿ ಪಾನ್ ಮತ್ತು ಆಧಾರ್ ಅನ್ನು ಈ ರೀತಿ ಲಿಂಕ್ ಮಾಡಿ :
*ಪಾನ್-ಆಧಾರ್ ಲಿಂಕ್ ಮಾಡಲು ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
*ಸೈಟ್‌ನ ಎಡಭಾಗದಲ್ಲಿ, ನೀವು ಕ್ವಿಕ್ ಲಿಂಕ್‌ಗಳ ಆಯ್ಕೆ ಕಾಣಿಸುತ್ತದೆ. ಇಲ್ಲಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
*ಇಲ್ಲಿ ನೀವು ನಿಮ್ಮ ಪಾನ್, ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕು.
*ಮಾಹಿತಿ ನೀಡಿದ ನಂತರ, ನಿಮಗೆ OTP ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ, ನಿಮ್ಮ ಆಧಾರ್ ಮತ್ತು PAN ಅನ್ನು ಲಿಂಕ್ ಮಾಡಲಾಗುತ್ತದೆ.