ಮೂರು ತಿಂಗಳುಗಳ ಕಾಲ ಯುವತಿಯ ಕೂದಲಲ್ಲೇ ಗೂಡು ಕಟ್ಟಿ ಜೀವಿಸಿದ್ದ ಪಕ್ಷಿ|84 ದಿನ ತಲೆ ಸ್ನಾನ ಮಾಡದೆ ಅಮ್ಮನಂತೆ ಆರೈಕೆ

ಇಂದಿನ ಪ್ರಪಂಚ ಹೇಗೆ ಮುಂದುವರೆದಿದೆ ಎಂಬುದು ನಿಮಗೆಲ್ಲರಿಗೂ ಅರಿವಿರೋ ವಿಚಾರ. ಮಾನವೀಯತೆ, ಸಮಾನತೆ ಎಂಬ ಪದದ ಅರ್ಥವೇ ತಿಳಿಯದ ಕಾಲ!!ಒಂಚೂರು ಮಂದಿ ಈ ಗುಂಪಿಗೆ ಸೇರಿದ್ರೆ ಇನ್ನೊಂದುಚೂರು ಜನ ತಮ್ಮವರು ಎಂದು ಕಷ್ಟಕ್ಕೆ ಕೈಗೂಡಿಸೋ ಜನ.. ಮಾನವರು ಒಂದು ಕಡೆ ಆದ್ರೆ, ಇನ್ನೊಂದು ಕಡೆ ಟೆಕ್ನಾಲಾಜಿ. ಇದು ಕೈ ಕೆಲಸ ಕಡಿಮೆ ಮಾಡಿವೆ ನಿಜ. ಆದ್ರೆ ಇದರಿಂದ ಮೂಕ ಪ್ರಾಣಿ-ಪಕ್ಷಿಗಳಿಗೆ ತಮ್ಮ ಕೆಲಸವನ್ನು ಮಾಡಿಕೊಂಡು ಸ್ವಚ್ಛಂದದಿಂದ ಜೀವಿಸಲು ಅಸಾಧ್ಯ…

ಹೌದು ಓದುಗರೇ,ಇಂತಹ ಪ್ರಾಣಿ- ಪಕ್ಷಿಗಳನ್ನು ದ್ವೇಷಿಸೋ ಕೆಲವೊಂದು ಜನರ ನಡುವೆ. ಪ್ರಾಣಿ ಪ್ರಿಯರು ಇದ್ದೇ ಇರುತ್ತಾರೆ.ಎಷ್ಟರ ಮಟ್ಟಿಗೆ ಆತ್ಮೀಯತೆ, ಬಾಂಧವ್ಯಯೆಂದರೆ ತಮ್ಮ ಮಕ್ಕಳಂತೆ ಸಾಕಿ ಸಲಹುವ ಅಮ್ಮನಂತೆ.ಇಷ್ಟೆಲ್ಲಾ ವಿಚಾರದ ಹಿಂದಿದ್ದಾಳೆ ‘ಪಕ್ಷಿ ಪ್ರೇಮಿ’. ಹೌದು ಈಕೆಗೆ ಪಕ್ಷಿ ಮೇಲೆ ಎಷ್ಟು ಪ್ರೀತಿ ಎಂಬುದು ಆಕೆ ಮಾಡಿದ ಆ ಒಂದು ಮಹಾ ಕಾರ್ಯವೇ ಸಾಕ್ಷಿ.ಈಕೆ ಇಂಗ್ಲೆಂಡ್‌ನ ಯುವತಿ ಹನ್ನಾ ಬೋರ್ನ್-ಟೇಲರ್. ಹೆಚ್ಚು ಕಡಿಮೆ ಅಂದರೆ ಮೂರು ತಿಂಗಳು ಹಕ್ಕಿಗೆ ತನ್ನ ಕೂದಲಿನಲ್ಲಿ ಗೂಡು ಕಟ್ಟಲು ಅವಕಾಶ ಮಾಡಿಕೊಟ್ಟಿದ್ದಾಳೆ.ಅಮ್ಮನ ಸ್ಥಾನದಲ್ಲಿ ಅದರ ಆರೈಕೆ ಮಾಡಿದ್ದಾಳೆ.84 ದಿನಗಳ ಕಾಲ ಆಕೆಯ ತಲೆಯಲ್ಲಿ ಹಕ್ಕಿ ಗೂಡು ಸುರಕ್ಷಿತವಾಗಿರಬೇಕಾದರೆ ಅವಳ ಜವಾಬ್ದಾರಿ ಎಷ್ಟಿರಬೇಕೆಂದು ನೀವೇ ಯೋಚಿಸಿ? ನಿದ್ದೆ ಮಾಡುವಾಗ ಒಂಚೂರು ಗೂಡಿಗೆ ಪೆಟ್ಟಾಗದಂತೆ, ಅಲುಗಾಡದೆ ಹಕ್ಕಿಗೆ ಬೆಚ್ಚನೆಯ ಮುದ ಕೊಡುವ ಆಕೆಯ ಪ್ರೀತಿ ವಿಸ್ಮಯವೇ ಸರಿ.

ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದ ಹೆನ್ನಾ ಸ್ಥಳೀಯ ಪಕ್ಷಿಗಳು ಮತ್ತು ಅವುಗಳ ದಿನಚರಿಗಳ ಬಗ್ಗೆ ಸಾಕಷ್ಟು ಕಲಿತಿದ್ದರು.2018 ರಲ್ಲಿ ಒಂದು ದಿನ ಚಂಡಮಾರುತದಿಂದಾಗಿ ದಾರಿ ತಪ್ಪಿದ ಒಂದು ಪುಟ್ಟ ಹಕ್ಕಿ ದಾರಿ ತಪ್ಪಿತ್ತು. ಹೆನ್ನಾ ಅದನ್ನು ರಕ್ಷಿಸಿ ಅದರ ಕಾಳಜಿ ವಹಿಸಲು ಶುರು ಮಾಡಿದರು. ತಾಯಿಯ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ, ಹನ್ನಾ ಹಕ್ಕಿಯ ಜತೆ ಆತ್ಮೀಯವಾಗಿ ಇರತೊಡಗಿದರು.ಹಕ್ಕಿ ಹಾರಲು ಕಲಿತದ್ದನ್ನು ಹೆನ್ನಾ ಗಮನಿಸಿದಳು. ಮತ್ತು ದಿನಗಳು ಕಳೆದಂತೆ, ಹಕ್ಕಿ ಹನ್ನಾನ್‌ಳ ಕೂದಲಿನ ಮೇಲೆ ಮತ್ತು ಅವಳ ಕೊರಳೆಲುಬಿನ ತೋಪಿನ ಮೇಲೆ ಸಣ್ಣ ಗೂಡುಗಳನ್ನು ಮಾಡಲು ಪ್ರಾರಂಭಿಸಿತು. ಆ 84 ದಿನ ಹಕ್ಕಿಯ ಕಾಳಜಿಯ ವಹಿಸಬೇಕಾಗಿದ್ದ ಕಾರಣ ಹನ್ನಾನ್‌ ತಲೆಸ್ನಾನ ಕೂಡಾ ಮಾಡಲ್ಲಿಲ್ಲ.

ಹನ್ನಾನ್ ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಹಕ್ಕಿಯನ್ನು ತನ್ನ ಹಿಂಡುಗಳಿಂದ ಮಿಸ್ ಆಗಿತ್ತು. ಹಕ್ಕಿ ಗೂಡು ಮಾವಿನ ಮರಗಳಿಂದ ಎಲ್ಲೋ ಹೋಗಿತ್ತು. ಅದಕ್ಕೆ ಮನೆಯನ್ನು ಹುಡುಕಲಾಗಲಿಲ್ಲ, ಅದು ನನ್ನ ಕೂದಲಿನಲ್ಲಿ ಗೂಡುಕಟ್ಟಲು ಪ್ರಾರಂಭಿಸಿತು ಎಂದಿದ್ದಾರೆ .ಹನ್ನಾನ್ ಉದ್ದನೆಯ ದಪ್ಪವಾದ ಹೊಂಬಣ್ಣದ ಕೂದಲುಗಳ ನಡುವೆ ರೋಮದಿಂದ ಕೂಡಿದ ಹಕ್ಕಿಯ ಫೋಟೋಗಳನ್ನು ಹಂಚಿಕೊಂಡಿದ್ದಾಳೆ.ಈಕೆ ವಿಚಾರ ಬಹಿರಂಗಪಡಿಸಿದ ನಂತರ ಭಾರೀ ವೈರಲ್ ಆಗಿದೆ.

‘ಅದರ ಕಣ್ಣುಗಳು ಬಿಗಿಯಾಗಿ ಮುಚ್ಚಲ್ಪಟ್ಟವು ಮತ್ತು ನಡುಗುತ್ತಿತ್ತು. ಒಂಟಿಯಾಗಿ ಬದುಕಲು ತುಂಬಾ ಚಿಕ್ಕದಾಗಿತ್ತು. ಅದನ್ನುಟವೆಲ್‌ಗಳೊಂದಿಗೆ ರಟ್ಟಿನ ಪೆಟ್ಟಿಗೆಯಲ್ಲಿ ಇರಿಸಿದೆ, ರಾತ್ರಿಯಿಡೀ ಎಚ್ಚರವಾಗಿದ್ದೆ, ಹಕ್ಕಿಯನ್ನು ಹೇಗೆ ಕಾಳಜಿ ವಹಿಸಬೇಕು ಎಂದು ಸಂಶೋಧನೆ ಮಾಡಿದೆ’ ಎಂದು ಹನ್ನಾ ತಿಳಿಸಿದ್ದಾರೆ. ವನ್ಯಜೀವಿ ತಜ್ಞ ಹನ್ನಾಗೆ ಈ ಪುಟ್ಟ ಪಕ್ಷಿಯನ್ನು ಕಾಡಿಗೆ ಸಿದ್ಧಪಡಿಸಲು ಕನಿಷ್ಠ 12 ವಾರಗಳು ಬೇಕಾಗುತ್ತದೆ ಎಂದು ಹೇಳಿದರು. ಇದನ್ನು ತಿಳಿದ ನಂತರ, ಹನ್ನಾ ಗೆದ್ದಲು ಮತ್ತು ಇತರ ವಸ್ತುಗಳನ್ನು ನೀಡುವ ಮೂಲಕ ಪಕ್ಷಿಯನ್ನು ನೋಡಿಕೊಳ್ಳಲು ಪ್ರಾರಂಭಿಸಿದಳು.

ಹಕ್ಕಿ ಕೂದಲಿನ ಪರದೆಯ ಕೆಳಗೆ ತನ್ನನ್ನು ತಾನೇ ಸಿಕ್ಕಿಸಿಕೊಂಡು ತನ್ನ ಕೊಕ್ಕಿನಿಂದ ಪ್ರತ್ಯೇಕ ಎಳೆಗಳನ್ನು ಸಂಗ್ರಹಿಸಿತ್ತು ಹಕ್ಕಿ. ಅವುಗಳನ್ನು ನೇಯ್ದ ಸುತ್ತಿನಲ್ಲಿ ಸಣ್ಣ ಗೂಡನ್ನು ಕಟ್ಟಿ ಹಕ್ಕಿ ಅದರೊಳಗೆ ಕೂರುತ್ತದೆ ಎಂದು ಹೆನ್ನಾನ್‌ ಹೇಳಿದರು. ಆದರೆ ಕ್ರಿಸ್‌ಮಸ್ ವಿರಾಮದ ಸಮಯದಲ್ಲಿ, ಹಕ್ಕಿಯ ಹಿಂಡು ಪ್ರದೇಶಕ್ಕೆ ಮರಳಿದ್ದರಿಂದ ಹಕ್ಕಿಯನ್ನು ಬಿಟ್ಟಿದ್ದಾಗಿ ಹನ್ನಾ ತಿಳಿಸಿದ್ದಾರೆ.2013ರಲ್ಲಿ ಕೆಲವು ವೀಸಾ ಸಮಸ್ಯೆಗಳಿಂದಾಗಿ ಕೆಲಸ ಸಿಗದ ಕಾರಣ ಪ್ರಕೃತಿಯತ್ತ ಮುಖ ಮಾಡಿ ಪಕ್ಷಿಗಳ ಬಗ್ಗೆ ಕಲಿಯಲು ಆರಂಭಿಸಿದ್ದೆ ಎಂದು ಹನ್ನಾ ಬೋರ್ನ್-ಟೇಲರ್ ಹೇಳಿದ್ದಾರೆ.

Leave A Reply

Your email address will not be published.