ಪ್ರಧಾನಿ ಮೋದಿ ಫೋಟೋ ಮನೆಯಲ್ಲಿಟ್ಟುಕೊಂಡರೆ ಮನೆಯಿಂದ ಗೇಟ್ ಪಾಸ್ | ಮಾಲೀಕನಿಂದ ಬಾಡಿಗೆದಾರನಿಗೆ ಬೆದರಿಕೆ!

ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಭಿಮಾನಿ ಬಳಗ ತುಂಬಾನೇ ಇದೆ. ಆದರೆ ಇಲ್ಲೊಬ್ಬ ಮನೆ ಮಾಲೀಕ ಮಾತ್ರ ಮೋದಿ ಫೋಟೋ ಮನೆಯಲ್ಲಿಟ್ಟುಕೊಂಡರೆ ಮನೆಯಿಂದ ಹೊರಹಾಕುವೆ ಎಂದು ಬೆದರಿಕೆಯೊಡ್ಡಿದ್ದು, ನೊಂದ ನಿವಾಸಿ ಪೊಲೀಸರ ಮೊರೆ ಹೋಗಿದ್ದಾನೆ.

ಮಧ್ಯಪ್ರದೇಶದ ಇಂದೋರ್‌ನ ಪಿರ್‌ಗಲಿ ಎಂಬಲ್ಲಿನ ನಿವಾಸಿ ಯೂಸುಫ್ ಪ್ರಧಾನಿ ನರೇಂದ್ರ ಮೋದಿಯ ತತ್ವಾದರ್ಶಗಳನ್ನು ಮೆಚ್ಚಿ ಅವರ ಬಹು ದೊಡ್ಡ ಅಭಿಮಾನಿಯಾಗಿದ್ದು, ಅವರ ಫೋಟೋವೊಂದನ್ನು ಮನೆಯಲ್ಲಿ ಇರಿಸಿಕೊಂಡಿದ್ದ. ಆದರೆ ಅದನ್ನು ನೋಡಿ ಮನೆ ಮಾಲೀಕ ಸಿಟ್ಟುಗೊಂಡಿದ್ದು, ಫೋಟೋ ತೆಗೆಯದಿದ್ದರೆ, ಮನೆಯಿಂದ ಹೊರ ಹಾಕುವುದಾಗಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.


Ad Widget

Ad Widget

Ad Widget

ಮಂಗಳವಾರ ಅಲ್ಲಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ನಡೆದ ಸಾರ್ವಜನಿಕ ಅಹವಾಲು ಆಲಿಸುವ ಕಾರ್ಯಕ್ರಮಕ್ಕೆ ತೆರಳಿದ ಯೂಸುಫ್ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ನಾನು ಪ್ರಧಾನಿ ಮೋದಿಯವರ ಮೇಲಿನ ಅಭಿಮಾನದಿಂದ ನನ್ನ ಬಾಡಿಗೆ ಮನೆಯಲ್ಲಿ ಅವರ ಫೋಟೋ ಇಟ್ಟುಕೊಂಡಿದ್ದು, ಅದಕ್ಕೆ ಮನೆ ಮಾಲೀಕ ಯಾಕೂಬ್ ಮನ್ಸೂರಿ ಮತ್ತು ಆತನ ಪುತ್ರ ಸುಲ್ತಾನ್ ಮನ್ಸೂರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ನೋವು ತೋಡಿಕೊಂಡಿದ್ದಾನೆ.

ಈ ಬಗ್ಗೆ ಸ್ಪಂದಿಸಿರುವ ಹೆಚ್ಚುವರಿ ಡಿಸಿಪಿ ಮನಿಷಾ ಪಾಟಕ್ ಸೋನಿ ಅವರು ಸಂಬಂಧಿತ ಪೊಲೀಸ್ ಠಾಣೆಗೆ ಸೂಚನೆ ನೀಡಿ ತನಿಖೆ ನಡೆಸಲು ಆದೇಶ ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: