ಶಂಕ್ರಣ್ಣನ ಕುಟುಂಬದಲ್ಲಿ ಎಲ್ಲರದ್ದೂ ದುರಂತ ಅಂತ್ಯ ! ; ಹೆತ್ತ ಕರುಳು ಹೇಳಿದ್ದೇನು ?

0 55

ಮುದಿಪ್ರಾಯದಲ್ಲಿ ಆಸರೆಯಾಗಿದ್ದ ಮಗ ಶಂಕರ  ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಜನ ಅತ್ತೆ ಸೊಸೆ ಜಗಳದಲ್ಲಿ ಶಂಕರ ಸತ್ತ ಎಂದು ಆರೋಪಿಸುತ್ತಿದ್ದಾರೆ‌. ಹೀಗಿರುವಾಗ ಶಂಕರನ ಅಮ್ಮ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

ಇವರಿಗೆ ನಾಲ್ಕು ಜನ ಮಕ್ಕಳು. ಸುಮಾರು 10 ವರ್ಷಗಳ ಹಿಂದೆ ಅವರ ಎರಡನೇ ಮಗ ಹಾವು ಕಚ್ಚಿ ಸತ್ತು ಹೋದರು. ದೊಡ್ಡ ಮಗಳು ಗಂಡ ನೀಡುತ್ತಿದ್ದ ವಿಪರೀತ ಹಿಂಸೆಯಿಂದಾಗಿ ತವರಿಗೆ ವಾಪಸ್ಸು ಬಂದು ಸತ್ತಳು. ಮತ್ತೊಬ್ಬ ಮಗಳ ತಲೆಯ ಮೇಲೆ ತೆಂಗಿನ ಬಿದ್ದ ಕಾರಣ ಹುಚ್ಚುಚ್ಚಾಗಿ ಆಡುತ್ತಿದ್ದಾಳೆ. ತಾನು ಮದುವೆಯಾದರೆ ತಾಯಿ ಮತ್ತು ತಂಗಿಯನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ ಎಂಬ ಕಾರಣಕ್ಕೆ ತನ್ನ ಮಗ (ಶಂಕ್ರಣ್ಣ ) 45 ನೇ ವಯಸ್ಸಿನವರೆಗೆ ಮದುವೆಯಾಗಿರಲಿಲ್ಲ. ಎಂದು ಅಳುತ್ತಾ ತನ್ನ ಕುಟುಂಬದ ಕಷ್ಟವನ್ನು ಹೇಳಿದ್ದಾರೆ ಶಂಕರನ ತಾಯಿ.

ತನ್ನ ಮಗನ ಆಸ್ತಿಯ ಮೇಲೆ ಕಣ್ಣಿಟ್ಟು ಮೇಘನಾ ತನಗಿಂತ 20 ವರ್ಷ ಹಿರಿಯನಾಗಿದ್ದ ತನ್ನ ಮಗನನ್ನು ಮದುವೆಯಾದಳು. ಒಂದು ಲಕ್ಷ ರೂಪಾಯಿ ಗಳನ್ನು ಗಂಡನ ಮೂಲಕ ಇಸಿದುಕೊಂಡು ತನ್ನಪ್ಪನಿಗೆ ಒಂದು ದ್ವಿಚಕ್ರ ವಾಹನ ಖರೀಸಿ ಕೊಟ್ಟಿದ್ದಳಂತೆ ಮತ್ತು ತಾನು ಕಿವಿಯೋಲೆ ಮಾಡಿಸಿಕೊಂಡಿದ್ದಳು ಎಂದು ಮೇಘನಾ ಅವರ ಅತ್ತೆ ದೂರುತ್ತಿದ್ದಾರೆ.

ಮೇಘನಾ ಪ್ರತಿದಿನ ತನ್ನೊಂದಿಗೆ ಮತ್ತು ಗಂಡನೊಂದಿಗೆ ಜಗಳವಾಡುತ್ತಿದ್ದಳು, ಮನೆಗೆಲಸ ಯಾವುದನ್ನೂ ಮಾಡುತ್ತಿರಲಿಲ್ಲ, ತಾನೇ ಅವಳ ಬಟ್ಟೆ ಒಗೆಯಬೇಕಿತ್ತು.‌ ಆಸ್ತಿಯನ್ನೆಲ್ಲ ಮಾರಿ ಬೆಂಗಳೂರಿಗೆ ಹೋಗಿ ಇದ್ದುಬಿಡೋಣ ಅಂತ ಮೇಘನಾ ಪ್ರತಿದಿನ ಗಂಡನನ್ನು ಪೀಡಿಸುತ್ತಿದ್ದಳು.ಹೆಂಡತಿಯ ಮಾತು ಕೇಳಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಶಂಕ್ರಣ್ಣ ತಾಯಿ ಮೇಲೆ ಕೈಮಾಡಲು ಹೋಗಿದ್ದರಂತೆ. ಹೆಂಡತಿ ಕಾಟ ತಡೆಯಲಾರದೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕರನ ತಾಯಿ ಆರೋಪ ಮಾಡುತ್ತಿದ್ದಾರೆ.

Leave A Reply