ಕಡಬ: ಕಡಬ ತಾಲೂಕಿನ ಬಲ್ಯ ಎಂಬಲ್ಲಿ ಅಕ್ರಮ ಮರಳು ಸಾಗಾಟದ ಲಾರಿಯೊಂದನ್ನು ಗಣಿ ಇಲಾಖಾಧಿಕಾರಿಗಳು ವಶಕ್ಕೆ ಪಡೆದ ಘಟನೆಯೊಂದು ಬೆಳಕಿಗೆ ಬಂದಿದೆ.
ಅಕ್ರಮ ಮರಳು ತುಂಬಿಸಿಕೊಂಡು ಪದವು ಕಡೆಯಿಂದ ಬರುತ್ತಿರುವಾಗ ಬಲ್ಯ ಸಮೀಪದ ಕುಡ್ರಡ್ಕ ಎಂಬಲ್ಲಿ ಗಣಿ ಅಧಿಕಾರಿ ಸುಷ್ಮಾ ನೇತೃತ್ವದ ಸಿಬ್ಬಂದಿಗಳ ತಂಡ ಲಾರಿಯನ್ನು ವಶಕ್ಕೆ ಪಡೆದಿದ್ದು,ಬಳಿಕ ಕಡಬ ತಹಶೀಲ್ದಾರ್ ಮೂಲಕ ಕಡಬ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.