ಪ್ರಧಾನಿ ಮೋದಿ ಕುರಿತ ವೆಬ್‍ಸೈಟ್ ಲಾಂಚ್ !! | “ದಿ ಮೋದಿ ಸ್ಟೋರಿ ವೆಬ್‍ಸೈಟ್” ನಲ್ಲಿರುವ ಮೋದಿಜಿ ಕುರಿತ ಕುತೂಹಲಕಾರಿ ಅಂಶಗಳು ಏನೇನು ಗೊತ್ತಾ ??

Share the Article

ಇಡೀ ವಿಶ್ವ ಮೆಚ್ಚಿದ ಜನ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ. ಇಂತಹ ಪ್ರಧಾನಿಯನ್ನು ಪಡೆದಿರುವುದಕ್ಕೆ ಇಡೀ ಭಾರತವೇ ಹೆಮ್ಮೆ ಪಡುತ್ತದೆ. ಇದೀಗ ಮೋದಿ ಕುರಿತ ‘ದಿ ಮೋದಿ ಸ್ಟೋರಿ ವೆಬ್‍ಸೈಟ್’ ಪ್ರಾರಂಭವಾಗಿದ್ದು, ಈ ಲಿಂಕ್‍ ಅನ್ನು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದರಲ್ಲಿ ಮೋದಿಜಿ ಕುರಿತ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ.

ಈ ಸುದ್ದಿಯ ಮತ್ತೊಂದು ವಿಶೇಷವೆಂದರೆ ‘ಮೋದಿ ವೆಬ್‍ಸೈಟ್’ ಅನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಉದ್ಘಾಟಿಸಿದ್ದಾರೆ. ಈ ವೆಬ್‍ಸೈಟ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಒಂದು ನೋಟ ಮತ್ತು ಅವರ ಜೀವನದ ಕಥೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ಮೋದಿ ಜೀವನವನ್ನು ಹತ್ತಿರದಿಂದ ನೋಡಿದ ವ್ಯಕ್ತಿಗಳ ಪ್ರತ್ಯಕ್ಷ ಘಟನೆಗಳು ಮತ್ತು ನೆನಪುಗಳನ್ನು ಸಂಗ್ರಹಿಸಲಾಗಿದೆ.

ಅಲ್ಲದೇ ಮೋದಿ ಅವರೊಂದಿಗಿನ ಫೋಟೋಗಳು, ಪತ್ರಗಳು ಮತ್ತು ಅವರಿಗೆ ಸಂಬಂಧಿಸಿದ ವೈಯಕ್ತಿಕ ಸ್ಮರಣಿಕೆಗಳ ಜೊತೆಗೆ ಯಾವುದೇ ಅನುಭವ ಅಥವಾ ಬರಹಗಳ ಆಡಿಯೋ, ದೃಶ್ಯ ಕಥೆಗಳನ್ನು ನೀಡಲು ಇಷ್ಟಪಡುವವರಿಗೆ ಈ ವೆಬ್ ಅವಕಾಶಗಳನ್ನು ಕೊಡುತ್ತಿದೆ.

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶೀರ್ಷಿಕೆಯ ಹೊಸ ವೆಬ್‍ಸೈಟ್‍ ಬಗ್ಗೆ(modistory.in) ಟ್ವಟ್ಟರ್‌ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದು, ಸ್ಟೋರಿಸ್ ಆಫ್ ಗ್ರಿಟ್ ಮತ್ತು ಗ್ರೇಸ್ ಮಾಂತ್ರಿಕನ ನೆನಪುಗಳು, ಸೌಹಾರ್ದಯುತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಾತುಕತೆಗಳು, ನಿರ್ಣಾಯಕ ರಾಜಕೀಯ ವ್ಯಕ್ತಿತ್ವ. ಇದುವರೆಗೂ ಹೇಳಲಾಗದ, ಕೇಳಿರದ ಕಥೆಗಳು ಎಂದು ಬರೆದು ಲಿಂಕ್ ಪೋಸ್ಟ್ ಮಾಡಿದ್ದಾರೆ.

ಸ್ವಯಂಸೇವಕ ಗುಂಪು ಈ ವೆಬ್ ಪರಿಚಯಿಸಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣ ಮತ್ತು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಕುತೂಹಲಕಾರಿ ಕಥೆಗಳಿವೆ ಎಂದು ಬರೆದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ವೆಬ್‍ಸೈಟ್ ಲಿಂಕ್ ಹಂಚಿಕೊಂಡಿದ್ದಾರೆ.

Leave A Reply

Your email address will not be published.