ನಡುರಸ್ತೆಯಲ್ಲಿಯೇ ಧಗಧಗನೆ ಹೊತ್ತಿ ಉರಿದ ಓಲಾ S1 pro ಎಲೆಕ್ಟ್ರಿಕ್ ಸ್ಕೂಟರ್ | ಕಂಗಾಲಾದ ಮಾಲೀಕ

Share the Article

ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಡಿಮ್ಯಾಂಡ್ ಹೆಚ್ಚಿದೆ. ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನ ಖರೀದಿಸುವವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುವುದು ಅಧಿಕ.

ಈ ಹಿನ್ನಲೆಯಲ್ಲಿ ಬಹಳಷ್ಟು ನೂತನ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಮುಂದಾಗಿದ್ದು, ಇವುಗಳ ಪೈಕಿ ಓಲಾ ಕೂಡಾ ಒಂದು.

ಈಗಾಗಲೇ ಓಲಾ ಸ್ಕೂಟರ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇವುಗಳ ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದರು. ಇದರ ಮಧ್ಯೆ ಮಹಾರಾಷ್ಟ್ರದ ಪುಣೆಯಲ್ಲಿ ಓಲಾ S1 pro ಎಲೆಕ್ಟ್ರಿಕ್ ಸ್ಕೂಟರ್ ದಿಢೀರನೆ ಧಗಧಗನೆ ಹೊತ್ತಿ ಉರಿದಿದ್ದು, ವಾಹನ ಮಾಲೀಕ ಕಂಗಾಲಾಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಓಲಾ ಕಂಪನಿ ಈ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದೆ.

Leave A Reply