ಕಾಣಿಯೂರು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಕಡಬ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟಿರುವ ಘಟನೆ ಕಾಣಿಯೂರು ಸಮೀಪ ಮಾ 27ರಂದು ನಡೆದಿದೆ.

ಮೃತರನ್ನು ಕಾಯ್ಮಣ ಗ್ರಾಮದ ಮಜಲಡ್ಡ ನಿವಾಸಿ ಗಂಗಾಧರ (40) ಎಂದು ಗುರುತಿಸಲಾಗಿದೆ. ಮೃತರು ನಡೆದುಕೊಂಡು ಹೋಗುತ್ತಿದ್ದಾಗ
ಮಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದ್ದು, ತಕ್ಷಣ ಅವರನ್ನು ಸ್ಥಳೀಯರ ಸಹಾಯದಿಂದ ಪುತ್ತೂರು ಆಸ್ಪತ್ರೆಯೊಂದಕ್ಕೆ ತರಲಾಗಿದ್ದು, ಚಿಕಿತ್ಸೆ ಫಲಕರಿಸದೆ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯ ಮೋಹನ್ ಅಗಳಿ ಭೇಟಿ ನೀಡಿದ್ದಾರೆ. ಮೃತರು ತಾಯಿ ಲಲಿತಾ, ಸಹೋದರ ದಯಾನಂದ, ಸಹೋದರಿ ಮಮತಾ ಅವರನ್ನು ಅಗಲಿದ್ದಾರೆ. ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.