ಯಾರಾದರೂ ಕೇವಲ ಒಳ ಉಡುಪು ಧರಿಸಿ ತಿರುಗಾಡುತ್ತಿದ್ದರೆ ತಿಳಿಸಿ ಎಂದ ಪೊಲೀಸರು ; ಕಾರಣವೇನು ಗೊತ್ತೇ ?

ಯಾರಾದರೂ ಕೇವಲ ಒಳಉಡುಪು ಮಾತ್ರ ಮತ್ತು ಸಾಕ್ಸ್‌ನಲ್ಲಿ ನೋಡಿದ ಯಾರಾದರೂ ಅಥವಾ ಮತ್ತು ಸಂಶಯಾಸ್ಪದವಾಗಿ ತೋರುವ ಯಾರಾದರು ಕಂಡಲ್ಲಿ ನಮಗೆ ವರದಿ ಮಾಡಲು ಒತ್ತಾಯಿಸುತ್ತೇವೆ ಎಂದು ಪೋಲಿಸರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಹಾಗಾಗಿ‌ ಒಳುಡುಪು ಧರಿಸುವುದೇ ತಪ್ಪೇ ? ಬಿಸಿಲೆಂದು ಮನೆಯಲ್ಲೂ ಒಳ ಉಪುಡು ಮಾತ್ರ ಧರಿಸಿ ತಿರುಗಾಡಬಾರದೇ ಎಂದು ಯೋಚಿಸುತ್ತಿದ್ದಿರೇ ? ಪೊಲೀಸರು ಹೀಗೆ ಹೇಳಲು ಕಾರಣ, ಕೈದಿಯೊಬ್ಬ ಒಳ ಉಡುಪಿನಲ್ಲೇ ಪರಾರಿಯಾಗಿದ್ದಾನೆ ! ಇಲ್ಲಿದೆ ನೋಡಿ ಎಸ್ಕೆಪ್ ಕಥೆ


Ad Widget

Ad Widget

Ad Widget

ಕೈದಿಯೊಬ್ಬ ಕೇವಲ ಒಳ ಉಡುಪು ಹಾಗೂ ಸಾಕ್ಸ್‌ ಧರಿಸಿ ಜೈಲಿನಿಂದ ಪರಾರಿಯಾದ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ.  ಕೈದಿ 32 ವರ್ಷದ ಕೈಲ್ ಡ್ಯಾರೆನ್ ಎಗ್ಲಿಂಗ್ಟನ್, ಭದ್ರತಾ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ನಂತರ ಪೂಲ್‌ನಲ್ಲಿರುವ ನ್ಯಾಯಾಲಯದ ಕೈದಿಗಳ ಸಾಗಣೆ ವ್ಯಾನ್‌ನಿಂದ ಇಳಿದು ಓಡಿಹೋಗಿದ್ದಾನೆ. 

ದರೋಡೆ ಆರೋಪದ ನಂತರ ಎಗ್ಲಿಂಗ್‌ಟನ್‌ನನ್ನು ಬಂಧನದಲ್ಲಿರಿಸಲಾಗಿತ್ತು. ಮರುದಿನ ಆತನನ್ನು ಪೂಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಆತ ಪರಾರಿಯಾಗಿದ್ದಾನೆ. ವ್ಯಾನ್‌ನಿಂದ ಓಡಿಹೋದಾಗ, ಎಗ್ಲಿಂಗ್‌ಟನ್ ಕೇವಲ ಒಳ ಉಡುಪು ಮತ್ತು ಸಾಕ್ಸ್‌ಗಳನ್ನು ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಬಿಳಿ ಬಣ್ಣ ಹೊಂದಿರುವ ಆರೋಪಿ 5 ಅಡಿ 11 ಇಂಚು ಎತ್ತರ ಇದ್ದಾನೆ. ಮಧ್ಯಮ ಗಾತ್ರವನ್ನು ಹೊಂದಿದ್ದು, ಗಾಢ ಕಂದು ಬಣ್ಣದ ಕೂದಲು ಮತ್ತು ಗಡ್ಡವನ್ನು ಹೊಂದಿದ್ದಾನೆ ಎಂದಿದ್ದಾರೆ.

ನಾಪತ್ತೆಯಾಗಿದ್ದ ಕೈದಿ ಎಗ್ಲಿಂಗ್ಟನ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಆತನನ್ನು ಬಂಧಿಸಲು ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಪೊಲೀಸರು ಆತನ ಚಿತ್ರವನ್ನು ಟ್ವೀಟ್ ಮಾಡಿದ್ದು, ಜನರು ಅವನನ್ನು ನೋಡಿದರೆ ಪೊಲೀಸರಿಗೆ ವರದಿ ಮಾಡುವಂತೆ ಕೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಟ್ವಿಟ್ ವೈರಲ್ ಆಗಿದೆ. 

Leave a Reply

error: Content is protected !!
Scroll to Top
%d bloggers like this: