ಬೆಳ್ಳಂಬೆಳಗ್ಗೆ ಉಡುಪಿಯಲ್ಲಿ ಘರ್ಜಿಸಿದ ಜೆಸಿಬಿಗಳು !!| ಎಸ್‍ಡಿಪಿಐ ಜಿಲ್ಲಾಧ್ಯಕ್ಷನ ಅಕ್ರಮ ಹೋಟೆಲ್ ಕಟ್ಟಡ ನೆಲಸಮ

ಬೆಳ್ಳಂಬೆಳಗ್ಗೆ ಉಡುಪಿ ನಗರದಲ್ಲಿ ಜೆಸಿಬಿಗಳ ಘರ್ಜನೆ ಶುರುವಾಗಿದೆ. ಎಲ್ಲೆಂದರಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದೆ. ಇಷ್ಟು ದಿನ ಅಕ್ರಮವಾಗಿ ಕಟ್ಟಡ ನಿರ್ಮಿಸಿ ಹಾಯಾಗಿ ಮಲಗಿದ್ದ ಮಾಲೀಕರಿಗೆ ನಗರಸಭೆ ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.

ಈ ತೆರವಿನ ಭಾಗವಾಗಿ ಹಿಜಾಬ್ ಹೋರಾಟದಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದ ಎಸ್‍ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ಝರಾ ನಿರ್ಮಿಸಿದ್ದ ಹೋಟೆಲನ್ನು ತೆರವು ಮಾಡಲಾಗುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ನಗರಸಭೆ ಅಧಿಕಾರಿಗಳು ಜಾಮಿಯಾ ಮಸೀದಿ ಕಾಂಪ್ಲೆಕ್ಸ್ ನಲ್ಲಿ ಬುಲ್ಡೋಜರ್ ಮೂಲಕವಾಗಿ ಅಕ್ರಮ ಅಂಗಡಿಗಳ ತೆರವು ಕಾರ್ಯಾಚರಣೆ ಮಾಡುತ್ತಿದ್ದಾರೆ. ಉಡುಪಿ ನಗರಸಭೆ ಹಲವು ಬಾರಿ ಹೋಟೆಲ್‍ಗೆ ನೋಟಿಸ್ ನೀಡಿತ್ತು. ನಗರಸಭೆಯ ಸಭೆಯಲ್ಲಿ ಸಮಗ್ರ ಚರ್ಚೆ ಬಳಿಕ ಇಂದು ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಅಂಗಡಿಗಳ ತೆರವು ಮಾಡುತ್ತಿದ್ದಾರೆ.

ಹಿಜಾಬ್ ಹೋರಾಟದಲ್ಲಿ ಎಸ್‍ಡಿಪಿಐ, ಜಿಲ್ಲಾಧ್ಯಕ್ಷ ನಜೀರ್ ಅಹಮ್ಮದ್ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದರು. ಇವರ ಝರಾ ಹೋಟೆಲ್ ಕಟ್ಟಡದಲ್ಲಿರುವ ಝೈತರ್ ಆನ್ ಎಂಬ ಮಳಿಗೆಯನ್ನೂ ತೆರವು ಮಾಡಲಾಗಿದೆ. ಹೀಗೆ ಅಕ್ರಮವಾಗಿ ಕಟ್ಟಿಸಿದ ಹಲವು ಕಟ್ಟಡಗಳು ಇಂದು ನೆಲಸಮವಾಗಲಿದೆ.

Leave a Reply

error: Content is protected !!
Scroll to Top
%d bloggers like this: