ಫಿಟ್ನೆಸ್ ಪ್ರಿಯರಿಗೆ ಸಿಹಿಸುದ್ದಿ; ಎಲ್ಲೆಡೆ ಓಡುತ್ತಿರುವ ಪರಿಸರಸ್ನೇಹಿ ಟ್ರೆಡ್​ಮಿಲ್ 

ನೀವು ಜಿಮ್​ನಲ್ಲಿ (Gym) ವರ್ಕ್​ಔಟ್ ಮಾಡುತ್ತೀರಾ? ಮನೆಯಲ್ಲೇ ಜಿಮ್ ಉಪಕರಣಗಳು ಇದ್ದಿದ್ದರೆ ಬಹಳ ಸಹಾಯವಾಗುತ್ತಿತ್ತು ಎಂದು ಆಗಾಗ ಅಂದುಕೊಳ್ಳುತ್ತಾ ಇರುತ್ತೀರಾ? ಮನೆಯಲ್ಲಿ ಟ್ರೆಡ್‌ಮಿಲ್ (Treadmill) ಇಟ್ಟುಕೊಳ್ಳಲು ಬಯಸುವ ಫಿಟ್‌ನೆಸ್ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ ಇದಾಗಿದೆ.

ಫಿಟ್ನೆಸ್ ಉತ್ಸಾಹಿಗಳಿಗೆ ಪ್ರಯೋಜನವನ್ನು ನೀಡುವಂತಹ ಒಂದು ಆವಿಷ್ಕಾರವನ್ನು ವ್ಯಕ್ತಿಯೊಬ್ಬರು ತಯಾರಿಸಿದ್ದಾರೆ. ಇದು ಯಾವುದೇ ವಿದ್ಯುತ್ತಿನ ಸಹಾಯವನ್ನು ಪಡೆಯದ ಮರದ ಟ್ರೆಡ್ ಮಿಲ್ ಆಗಿದೆ. ಭೌತಶಾಸ್ತ್ರದ ಆಧಾರದ ಮೇಲೆ ಚಲಿಸುವ ಮರದ ಟ್ರೆಡ್‌ಮಿಲ್ ಅನ್ನು ತೆಲಂಗಾಣದ ವ್ಯಕ್ತಿಯೊಬ್ಬರು ವಿನ್ಯಾಸಗೊಳಿಸಿದ್ದಾರೆ.


Ad Widget

Ad Widget

Ad Widget

ತೇಲಂಗಾಣದ ವ್ಯಕ್ತಿಯೊಬ್ಬ 10,000 ರೂಪಾಯಿಗಳನ್ನು ಖರ್ಚು ಮಾಡಿ ಕಡಿಮೆ ಬಜೆಟ್‌ನಲ್ಲಿ ಟ್ರೆಡ್ ಮಿಲ್ ನಿರ್ಮಿಸಿದ್ದಾರೆ. ಇನ್ನು ಭಾರಿ ಮೊತ್ತದಲ್ಲಿ ಖರೀದಿಸಲು ಸಾಧ್ಯವಾಗದ ಸಾಮಾನ್ಯ ಜನರಿಗೆ ಇದೊಂದು ದೊಡ್ಡ ಪ್ರಯೋಜನ ನೀಡಲಿದೆ. ಹಾಗೆ ಇದು ತಂತ್ರಜ್ಞಾನ ಅಡಕಗೊಂಡಿರುವ ಟ್ರೆಡ್​ ಮಿಲ್​ನ ಹಾಗೆಯೇ ಕೆಲಸ ಮಾಡುತ್ತದೆ.

ತೆಲಂಗಾಣದ ಕೈಗಾರಿಕೆ ಮತ್ತು ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆಟಿ ರಾಮರಾವ್ ಅವರು ಈ ಆವಿಷ್ಕಾರದಿಂದ ಪ್ರಭಾವಿತರಾಗಿದ್ದು, ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಶಿಷ್ಟ ಮರದ ಟ್ರೆಡ್ ಮಿಲ್ ಅಗತ್ಯವಿದೆ.  ಈ ವಿಶಿಷ್ಟವಾದ ಮರದ ಟ್ರೆಡ್ ಮಿಲ್ ಅನ್ನು ಕಳುಹಿಸಿಕೊಡಿ ಎಂದು ವಿನಂತಿಸಿದ್ದಾರೆ.‌ ಎಂದು ಉದ್ಯಮಿ ಆನಂದ್ ಮಹೀಂದ್ರಾ ಅವ ರು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: