ಪಾಕಿಸ್ತಾನ ಪರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಯುವತಿ !! | ರಾಷ್ಟ್ರದ್ರೋಹಿ ಆರೋಪಿ ಪರ ಯಾರೂ ವಕಾಲತ್ತು ಹಾಕದಂತೆ ವಕೀಲರ ಸಂಘಕ್ಕೆ ಹಿಂದೂಪರ ಸಂಘಟನೆಗಳಿಂದ ಒತ್ತಾಯ

0 9

ಇತ್ತೀಚೆಗೆ ನಮ್ಮ ದೇಶದಲ್ಲಿ ಪಾಕಿಸ್ತಾನ ಪರವಾಗಿ ತಮ್ಮ ನಿಲುವು ತೋರಿರುವ ದೇಶದ್ರೋಹದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಕರ್ನಾಟಕದ ಯುವತಿಯೋರ್ವಳು ಪಾಕಿಸ್ತಾನದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ರಾಷ್ಟ್ರದ್ರೋಹ ಎಸಗಿದ್ದಾಳೆ. ಈ ರೀತಿ ರಾಷ್ಟ್ರದ್ರೋಹ ಎಸಗಿರುವ ಯುವತಿ ಪರ ಯಾರೂ ವಕಾಲತ್ತು ಹಾಕದಂತೆ ವಕೀಲರ ಸಂಘಕ್ಕೆ ಮುಧೋಳ ಹಿಂದೂ ಸಂಘಟನೆಗಳ ಒಕ್ಕೂಟದಿಂದ ಮನವಿ ಮಾಡಿದ ಘಟನೆ ಮುಧೋಳ ನಗರದಲ್ಲಿ ನಡೆದಿದೆ.

ಕಳೆದ ಮಾರ್ಚ್ 23 ರಂದು ಸೆಲೆಬ್ರೇಟಿಂಗ್ ಪಾಕಿಸ್ತಾನ ರೆವಲ್ಯೂಷನ್ ಡೇ ಎಂದು ಕುತ್ತುಮಾ ಶೇಖ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಳು. ಯುವತಿಯ ಈ ಪೋಸ್ಟ್ ವೈರಲ್ ಸಹ ಆಗಿತ್ತು. ಹೀಗಾಗಿ ಆರೋಪಿ ಯುವತಿಯ ಪೋಸ್ಟ್ ವಿರುದ್ಧ ಮುಧೋಳ ಠಾಣೆಯಲ್ಲಿ ಹಿಂದೂ ಸಂಘಟನೆ ಯುವಕ ಅರುಣ್ ಭಜಂತ್ರಿ ದೂರು ನೀಡಿದ್ದರು. ಸದ್ಯ ಆರೋಪಿ ಮುಧೋಳ ನಿವಾಸಿಯಾಗಿರುವ ಕುತ್ತುಮಾ ಶೇಖ್ ಪೊಲೀಸರ ವಶದಲ್ಲಿದ್ದಾಳೆ.

ಕುತ್ತುಮಾ ವಾಟ್ಸಪ್ ಸ್ಟೇಟಸ್‍ನಲ್ಲಿ ಲವ್ ಪಾಕಿಸ್ತಾನ ಎಂಬ ಬರಹ ಇದ್ದ ಫೋಟೊ ಪೋಸ್ಟ್ ಮಾಡಿದ್ದಳು. ಇದೀಗ ಯುವತಿ ರಾಷ್ಟ್ರದ್ರೋಹ ಆರೋಪ ಎದುರಿಸುತ್ತಿದ್ದಾಳೆ. ಆದ್ದರಿಂದ ಭಾರತ ದೇಶದಲ್ಲಿದ್ದು, ವೈರಿ ರಾಷ್ಟ್ರ ಪಾಕ್ ಪರ ವ್ಯಾಮೋಹ ತೋರಿರುವ ಆರೋಪಿ ಕುತ್ತುಮಾ ಪರ ಯಾರೂ ವಕಾಲತ್ತು ವಹಿಸದಂತೆ ವಕೀಲರ ಸಂಘಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

Leave A Reply