ನಟನೆಗೆ ವಿದಾಯ ಹೇಳಿದ ನಟಿ ಸಾಯಿ ಪಲ್ಲವಿ !

ಸಹಜ ಸುಂದರಿ ನಟಿ ಸಾಯಿ ಪಲ್ಲವಿ ನಟಿಸಿದ ಮೊದಲ ಸಿನಿಮಾದಲ್ಲೇ ಸ್ಟಾರ್ ಪಟ್ಟಕ್ಕೆ ಏರಿದವರು. ಯಾವ ನಾಯಕ ನಟರಿಗೂ ಕಮ್ಮಿಯಿಲ್ಲದಂತೇ ನಟಿಸುವ ಸಾಯಿ ಪಲ್ಲವಿ ಲಕ್ಷಾಂತರ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದ್ದಾರೆ.

ಹೌದು ಭಾಷೆಯ ಗಡಿ ದಾಟಿ ಭಾರತದಾದ್ಯಂತ ಲಕ್ಷಾಂತರ ಸಿನಿ ಪ್ರೇಮಿಗಳು ನಟಿ ಸಾಯಿಪಲ್ಲವಿಯನ್ನು ಆರಾಧಿಸುವ ಆಕೆಯ ನಟನೆಯನ್ನು ಕಣ್ಣು ತುಂಬಿಸುವ ಅಭಿಮಾನಿಗಳು ಇದ್ದಾರೆ. ಇಂತಿಪ್ಪ ನಟಿ ಸಾಯಿ ಪಲ್ಲವಿ ಈಗ ಸಿನಿಮಾದಿಂದಲೇ ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಸದ್ದು ಮಾಡಲಾರಂಭಿಸಿದೆ. ಟಾಲಿವುಡ್,ಮಾಲಿವುಡ್ ಸೇರಿದಂತೆ ಎಲ್ಲ ಚಿತ್ರರಂಗದಲ್ಲೂ ತಮ್ಮ ಪ್ರೌಢ ಅಭಿನಯದಿಂದಲೇ ಅಭಿಮಾನಿಗಳನ್ನು ಸೆಳೆದ ಸಾಯಿ ಪಲ್ಲವಿ, ನಟನೆಯ ಜೊತೆಗೆ ಸುಂದರ ನಾಟ್ಯದ ಮೂಲಕವೂ ಮನಗೆದ್ದವರು.


Ad Widget

Ad Widget

Ad Widget

ಈಗ ತಮ್ಮನ್ನು ಆರಾಧಿಸುವ ಲಕ್ಷಾಂತರ ಮಂದಿಗೆ ಅಭಿಮಾನಿಗಳಿಗೆ ನಿರಾಸೆ ಮೂಡಿಸುತ್ತಿರುವ ಸಾಯಿಪಲ್ಲವಿ ತನ್ನ ಸಿನಿಜರ್ನಿಯನ್ನೇ ಕೊನೆಗೊಳಿಸುತ್ತಿದ್ದಾರಂತೆ. ಶ್ಯಾಮ್ ಸಿಂಗ್ ರಾಯ್ ಸಿನಿಮಾ ಸಾಯಿ ಪಲ್ಲವಿ ಅವರ ತೆರೆಯಲ್ಲಿ ಕಂಡ ಕೊನೆಯ ಸಿನಿಮಾ. ಆದರೆ ಈ ಸಿನಿಮಾ ನಂತರ ಸಾಯಿ ಪಲ್ಲವಿ ಯಾವುದೇ ಮಲಯಾಳಂ, ತೆಲುಗು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ವಂತೆ. ಈ ಸಿನಿಮಾ ನಂತರ ಸಾಯಿಪಲ್ಲವಿ ಯಾವುದೇ ಸಿನಿಮಾ ಒಪ್ಪದೇ ಇರೋದಕ್ಕೆ ಕಾರಣ ನಟನೆಗೆ ವಿದಾಯ ಹೇಳಲು ನಿರ್ಧರಿಸಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಆದರೆ ಈ ಕುರಿತು ನಟಿ ಸಾಯಿಪಲ್ಲವಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Reply

error: Content is protected !!
Scroll to Top
%d bloggers like this: