ಕೊಲ್ಲೂರು ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ನಡೆಯುತ್ತಿದೆ ಆರತಿ | ಕೂಡಲೇ ನಿಲ್ಲಿಸುವಂತೆ ವಿ.ಹಿಂ.ಪ.ಒತ್ತಾಯ

Share the Article

ಉಡುಪಿ : ಪ್ರಸಿದ್ದ ಯಾತ್ರಾ ಸ್ಥಳ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ದಿನಂಪ್ರತಿ ರಾತ್ರಿ 8 ಗಂಟೆಗೆ ನಡೆಯುವ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಸಲಾಂ ಎಂಬ ಮಹಾಮಂಗಳಾರತಿ ನಿಲ್ಲಿಸಬೇಕು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನವು ಐತಿಹಾಸಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರ. ಭಾರತದ 108 ಶಕ್ತಿ ಪೀಠಗಳಲ್ಲಿ ಕೊಲ್ಲೂರು ಕೂಡಾ ಒಂದು. ಇಂತಹ ಕ್ಷೇತ್ರದಲ್ಲಿ ಕ್ರೂರಿ, ಮತಾಂಧ, ಹಿಂದೂ ವಿರೋಧಿ, ನೂರಾರು ದೇವಸ್ಥಾನಗಳನ್ನು ಧ್ವಂಸ ಮಾಡಿದ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಮೂಕಾಂಬಿಕೆಗೆ ಮಹಾ ಮಂಗಳಾರತಿಯಾಗುವುದು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತದ್ದು. ಇದು ಗುಲಾಮಗಿರಿಯ ಸಂಕೇತವಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿ ಮಾಡುತ್ತದೆ ಎಂದು ವಿಎಚ್ ಪಿ ಹೇಳಿದೆ.

ಈ ಗುಲಾಮಗಿರಿಯ ಸಂಕೇತವನ್ನು ರದ್ದು ಮಾಡಬೇಕು, ಸಲಾಂ ಹೆಸರನ್ನು ತೆಗೆದು ಕೇವಲ ದೇವರ ಹೆಸರಿನಲ್ಲಿ ಮಹಾಮಂಗಳಾರತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

Leave A Reply

Your email address will not be published.