ಒಂದು ದಿನದ ಬಿಡುವಿನ ಬಳಿಕ ಮತ್ತೆ ಏರಿಕೆ ಕಂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ!!

ನವದೆಹಲಿ:ವಾಹನ ಸವಾರರಿಗೆ ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ.137 ದಿನಗಳ ನಂತರ ಎರಡು ದಿನಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಮೊದಲ ದಿನ 80 ಪೈಸೆ ಮತ್ತು ಎರಡನೇ ದಿನ 80 ಪೈಸೆಯಷ್ಟು ಏರಿಕೆ ಕಂಡಿದ್ದ ತೈಲ ದರ ಮೂರನೇ ದಿನ ಪರಿಷ್ಕರಣೆಯಾಗಿರಲಿಲ್ಲ.ಇಂದು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 80 ಪೈಸೆ ಏರಿಕೆಯಾಗಿದೆ.

ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್ ಗೆ 97.81 ರೂ., ಡೀಸೆಲ್ 89.07 ರೂ., ಇದೆ.ಮುಂಬೈನಲ್ಲಿ ಪೆಟ್ರೋಲ್ ಬೆಲೆ 112.51 ರೂ. ಮತ್ತು ಡೀಸೆಲ್ ದರ 96.70 ರೂ. ಇದೆ.ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 103.67 ರೂ., ಡೀಸೆಲ್ ಬೆಲೆ 93.71 ರೂ.(76 ಪೈಸೆ ಹೆಚ್ಚಾಗಿದೆ),ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.34 ರೂ.(84 ಪೈಸೆ ಹೆಚ್ಚಾಗಿದೆ), ಡೀಸೆಲ್ ಬೆಲೆ 91.42 ರೂ(80 ಪೈಸೆ ಹೆಚ್ಚಾಗಿದೆ).

Leave A Reply

Your email address will not be published.