ರಸ್ತೆ ಅಪಘಾತದಲ್ಲಿ ಸಂತ್ರಸ್ತರ ನೆರವು ಮಾಡಿದವರಿಗೆ ರೂ.5000 ಕ್ಯಾಶ್ ಪ್ರೈಸ್ !

ರಸ್ತೆ ಅಪಘಾತವಾದಾಗ ಜನ ಸಹಾಯ ಮಾಡಲು ಹಿಂದೆ ಮುಂದೆ ನೋಡುವುದು ಸಹಜ. ಸಹಾಯ ಮಾಡಲು ಮುಂದಾದರೆ ಎಲ್ಲಿ ಕೋರ್ಟ್, ಕಚೇರಿ, ಪೊಲೀಸ್ ಸ್ಟೇಷನ್ ಎಂದು ಅಲೆದಾಡುವುದು ಎಂದು ಜನ ಹಿಂಜರಿಯುತ್ತಾರೆ.

ಆದರೆ ಈಗ ಅಪಘಾತ ಸಂತ್ರಸ್ತರಿಗೆ ನೆರವಾದರೆ ಅವರಿಗೆ 5 ಸಾವಿರ ರೂಪಾಯಿ ಕ್ಯಾಶ್ ನೀಡುವ ಹೊಸ ಎನೌನ್ಸ್‌ಮೆಂಟ್ ಮಾಡಲಾಗಿದ್ದು ಇದು ಮುಂದಿನ ದಿನಗಳಲ್ಲಿ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡಲು ಪ್ರೇರೇಪಿಸುವ ಸಾಧ್ಯತೆ ಇದೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೋಮವಾರ ರಾಜ್ಯದಲ್ಲಿ ರಸ್ತೆ ಅಪಘಾತದ ಸಂತ್ರಸ್ತರಿಗೆ ವೈದ್ಯಕೀಯ ಆರೈಕೆ ಸೌಲಭ್ಯಗಳನ್ನು ಒದಗಿಸಲು ಸಹಾಯ ಮಾಡುವ ಜನರಿಗೆ ನಗದು ಬಹುಮಾನ ಮತ್ತು ಪ್ರಮಾಣಪತ್ರಗಳನ್ನು ಘೋಷಿಸಿದ್ದಾರೆ. ಇದು ಅತ್ಯಂತ ವಿಶಿಷ್ಟವಾದ ಯೋಜನೆಗಳಲ್ಲಿ ಒಂದಾಗಿದೆ.

ಸ್ಟಾಲಿನ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದವರಿಗೆ ಸಹಾಯ ಮಾಡುವವರಿಗೆ ಮತ್ತು ಗೋಲ್ಡನ್ ಅವರ್ ಅವಧಿಯಲ್ಲಿ ಅವರನ್ನು ವೈದ್ಯಕೀಯ ಆರೈಕೆ ಸೌಲಭ್ಯಕ್ಕೆ ಕರೆದೊಯ್ಯುವವರಿಗೆ ಪ್ರಶಂಸಾ ಪತ್ರ ಮತ್ತು 5,000 ರೂಪಾಯಿ ನಗದು ಬಹುಮಾನವನ್ನು ನೀಡಲಾಗುತ್ತದೆ’ ಎಂಬುದಾಗಿ ಬರೆದಿದ್ದಾರೆ.

ಗಾಯಾಳುಗಳಿಗೆ ಮೊದಲ 48 ಗಂಟೆಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವ ‘ಇನ್ನುಯಿರ್ ಕಪ್ರೊನ್’ ಯೋಜನೆಗೆ ಈ ಹಿಂದೆ ಸಿಎಂ ಚಾಲನೆ ನೀಡಿದ್ದರು.

Leave A Reply

Your email address will not be published.