ಎಷ್ಟೊ ವರ್ಷಗಳ ನಂತರ ಕೃಷ್ಣಮೃಗ ಪ್ರಕರಣದಲ್ಲಿ ನಿರಾಳ ಆದ ಸಲ್ಮಾನ್ ಖಾನ್ ;  ರಾಜಸ್ಥಾನ ಹೈಕೋರ್ಟ್ ಹೇಳಿದ್ದೇನು ?

ಬಾಲಿವುಡ್ ನ ಖ್ಯಾತ ಸಲ್ಮಾನ್ ಖಾನ್ ಗೆ ರಾಜಸ್ಥಾನ ಹೈಕೋರ್ಟ್ ಭಾರಿ ಸಂತಸ ಮತ್ತು ನೆಮ್ಮದಿ ನೀಡಿದೆ. ಈ ಸಂಗತಿ ಸಲ್ಮಾನ್ ಖಾನ್ ಗೆ ವಿಶ್ರಾಂತಿ ನೀಡಿದೆ.

ಸೆಪ್ಟೆಂಬರ್ 1998 ರಲ್ಲಿ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಜೈಲಿಗೆ ಹೋಗಿ ಬಂದಿದ್ದರು. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೊರತುಪಡಿಸಿ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಆರೋಪಿಗಳನ್ನು ನ್ಯಾಯಾಲಯ ಈಗಾಗಲೇ ಖುಲಾಸೆಗೊಳಿಸಿದೆ.

ರಾಜಸ್ಥಾನದ ಮಥಾನಿಯಾ ಮತ್ತು ಭವದ್‌ನಲ್ಲಿ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದಕ್ಕಾಗಿ ಸಲ್ಮಾನ್ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದೇ ವೇಳೆ, ಜೋಧ್‌ಪುರದ ಕೆಳ ನ್ಯಾಯಾಲಯವು ಈಗಾಗಲೇ ಕಂಕಣಿಯಲ್ಲಿ ಕೃಷ್ಣಮೃಗ ಬೇಟೆಯಾಡಿದ್ದಕ್ಕಾಗಿ ಸಲ್ಮಾನ್‌ನನ್ನು ದೋಷಿ ಎಂದು ಘೋಷಿಸಿದೆ. ಇನ್ನೊಂದೆಡೆ ಲೈಸನ್ಸ್ ಅವಧಿ ಮುಗಿದ ಬಳಿಕವೂ ಕೂಡ 32 ಮತ್ತು 22 ಬೋರ್ ರೈಫಲ್ ಗಳನ್ನು ಇಟ್ಟುಕೊಂಡಿದ್ದಕ್ಕಾಗಿ ನಾಲ್ಕನೇ ಪ್ರಕರಣವನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ದಾಖಲಿಸಲಾಗಿದೆ. ಇಷ್ಟೇಲ್ಲಾ ಪ್ರಕರಣ ವಿಚಾರಣೆ ಸಲ್ಮಾನ್ ಖಾನ್ ಗೆ ತಲೆ ಬಿಸಿಯಾಗಿತ್ತು. ಪ್ರತಿಯೊಂದು ಆರೋಪಕ್ಕೂ ಬೇರೆ ಬೇರೆ ವಿಚಾರಣೆ ನಡೆಯುತ್ತಿದ್ದವು.

ಇದೀಗ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ವಿರುದ್ಧ ದಾಖಲಾದ ಎಲ್ಲಾ ಪ್ರಕರಣಗಳ ವಿಚಾರಣೆ ಒಟ್ಟಿಗೆ ನಡೆಯಲಿದೆ. ಹೈಕೋರ್ಟ್‌ನ ಈ ತೀರ್ಪಿನ ನಂತರ, ಸಲ್ಮಾನ್ ಖಾನ್ ಪದೇ ಪದೇ ವಿಚಾರಣೆಗೆ ಹಾಜರಾಗಬೇಕಿಲ್ಲ ಎನ್ನಲಾಗಿದೆ. ಸಲ್ಮಾನ್ ಖಾನ್ ಪರ ವಕೀಲರು ಸೋಮವಾರ ಹೈಕೋರ್ಟ್‌ನಲ್ಲಿ ಸಲ್ಮಾನ್ ಖಾನ್ ಪರ ತಮ್ಮ ಸಂಪೂರ್ಣ ವಾದವನ್ನು ಮಂಡಿಸಿದ್ದಾರೆ. ಇದಾದ ನಂತರ ನ್ಯಾಯಾಲಯ ತನ್ನ ತೀರ್ಪನ್ನು ಪ್ರಕಟಿಸಿದೆ.

Leave A Reply

Your email address will not be published.