ಮತಾಂತರಕ್ಕೆ ಒಪ್ಪದ ಹಿಂದೂ ಯುವತಿಯನ್ನು ಗುಂಡಿಕ್ಕಿ ಕೊಂದ ಮತಾಂಧ !

0 13

ಹಿಂದೂ ಹೆಣ್ಣು ಮಗಳೊಬ್ಬಳು ಮತಾಂತರಗೊಳ್ಳಲು ನಿರಾಕರಿಸಿದಕ್ಕೆ ನಡುರಸ್ತೆಯಲ್ಲಿಯೇ ಯುವಕನೊಬ್ಬ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಪ್ರದೇಶದಲ್ಲಿ ನಡೆದಿದೆ.

ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಈ ಘಟನೆ ನಡೆದಿದೆ.

ಪೂಜಾ ಕುಮಾರಿ ಎಂಬ 18 ವರ್ಷದ ಯುವತಿ ವಾಹಿದ್ ಎಂಬಾತನಿಂದ ಪ್ರಾಣ ಕಳೆದುಕೊಂಡಿದ್ದಾಳೆ. ವಾಹಿದ್ ಈಕೆಯನ್ನು ಪ್ರೀತಿಸುತ್ತಿದ್ದ. ಪದೇ ಪದೇ ಕಾಟ ಕೊಡುತ್ತಿದ್ದ. ಪೂಜಾಳನ್ನು ಹೇಗಾದರೂ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಆಕೆಯನ್ನು ಮದುವೆಯಾಗಬೇಕು ಎಂಬುದು ಆತನ ಇರಾದೆಯಾಗಿತ್ತು. ಇದಕ್ಕೆ ಪೂಜಾ ಒಪ್ಪಿರಲಿಲ್ಲ.

ಹಾಗಾಗಿ ಮತಾಂತರಕ್ಕೆ ವಿರೋಧಿಸಿದ್ದಕ್ಕೆ ವಾಹಿದ್ ಗುಂಡಿನ ದಾಳಿ ನಡೆಸಿದ್ದಾನೆ. ಈ ಘಟನೆಯಿಂದ ಸಿಂಧ್ ಪ್ರದೇಶದಲ್ಲಿನ ಹಿಂದೂಗಳು ಬೆಚ್ಚಿಬಿದ್ದಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಾನು ಆಕೆಯನ್ನು ಮತಾಂತರಗೊಳಿಸಿ ಮದುವೆ ಮಾಡಿಕೊಳ್ಳಬೇಕೆಂದು ಇದ್ದು, ಅದಕ್ಕೆ ಅವಳು ನಿರಾಕರಿಸಿದ್ದಳು ಎಂಬ ಸತ್ಯವನ್ನು ಈ ಮತಾಂಧ ಒಪ್ಪಿಕೊಂಡಿದ್ದಾನೆ.

ಪೂಜಾಳ ಸಾವಿನ ಸಮಗ್ರ ತನಿಖೆ ಆಗಿ ಅಪರಾಧಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಸ್ಥಳೀಯ ಹಿಂದೂ ಸಂಘಟನೆಗಳು ‘ಜಸ್ಟೀಸ್ ಫಾರ್ ಪೂಜಾ ಕುಮಾರಿ’ ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವಿಟರ್‌ನಲ್ಲಿ ಅಭಿಯಾನ ನಡೆಸುತ್ತಿದ್ದಾರೆ.

Leave A Reply