ಮಂಗಳೂರು : ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ | ಆರೋಪಿ ಸಮೀರ್ ಬಂಧನ

ಮಂಗಳೂರು: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಆರೋಪದಲ್ಲಿ ರಿಕ್ಷಾ ಚಾಲಕನೋರ್ವನನ್ನು ಉಳ್ಳಾಲ ಪೊಲೀಸರು ಇಂದು ( ಮಾ.22) ಬಂಧಿಸಿದ್ದಾರೆ. ಮಂಗಳೂರು ನಗರ ಹೊರವಲಯದ ಉಳ್ಳಾಲದ ಮುನ್ನೂರು ಸಮೀರ್ (22) ಬಂಧಿತ ಆಟೋ ಚಾಲಕ.

ಸೋಮವಾರ ಸಮೀರನ ರಿಕ್ಷಾದಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದ ಸಂದರ್ಭ ಆರೋಪಿ ಸಮೀರ್ ಆಕೆಯ ಮೈಮೇಲೆ ಕೈ ಹಾಕಿ ಅಸಭ್ಯವಾಗಿ ವರ್ತಿಸಿದ್ದ. ಇಷ್ಟು ಮಾತ್ರವಲ್ಲದೇ ಆ ಮಹಿಳೆಯ ಬಗ್ಗೆ ಬೇರೆಯವರಲ್ಲಿ ವಿಚಾರಿಸಿದ್ದ ಎನ್ನಲಾಗಿದೆ.


Ad Widget

Ad Widget

Ad Widget

ಆದರೆ ಸಂತ್ರಸ್ತೆ ಮನೆಗೆ ಬಂದು ತನ್ನ ಮಗನಲ್ಲಿ ಹೇಳಿದ್ದಾಳೆ. ಈ ವಿಚಾರವಾಗಿ ಮಗ ಆರೋಪಿ ರಿಕ್ಷಾ ಚಾಲಕನ ಬಳಿ ವಿಚಾರಿಸಿದಾಗ ಆತ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಮೀರ್ ನನ್ನು ಬಂಧಿಸಲಾಗಿದೆ.

Leave a Reply

error: Content is protected !!
Scroll to Top
%d bloggers like this: