ರಾತ್ರಿ ವೇಳೆ ಚಪಾತಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಾ ಅಥವಾ ಕೆಟ್ಟದ್ದಾ !??| ಇಲ್ಲಿದೆ ಚಪಾತಿ ಸೇವನೆ ಕುರಿತಾದ ಆರೋಗ್ಯಕರ ಮಾಹಿತಿ

ನಾವು ಪ್ರತಿನಿತ್ಯ ಅನ್ನ, ಚಪಾತಿ, ರೊಟ್ಟಿ, ದೋಸೆ, ಇಡ್ಲಿ, ಉಪ್ಪಿಟ್ಟು ಎಂದೆಲ್ಲಾ ಉಪಹಾರಗಳನ್ನು ಸೇವಿಸುತ್ತೇವೆ.ಅದರಲ್ಲೂ ಮೈದಾ ಮಿಶ್ರಣ ಮಾಡದ ಚಪಾತಿ, ಅಂದರೆ ಬರೀ ಗೋಧಿ ಹಿಟ್ಟಿನ ಚಪಾತಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ನೀವು ಕೇಳಿರಬಹುದು. ಆದರೂ ಚಪಾತಿಯನ್ನು ಪ್ರತಿನಿತ್ಯ ಸೇವನೆ ಮಾಡಬಹುದಾ? ಚಪಾತಿ ತೂಕವನ್ನು ಹೇಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ.

ಚಪಾತಿಗಳು ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿದ್ದು, ನಿರಂತರ ಶಕ್ತಿಯನ್ನು ನೀಡುತ್ತದೆ. ಅಲ್ಲದೆ, ಪದೇ ಪದೇ ಹಸಿವಿನ ಕಡು ಬಯಕೆಯನ್ನು ತಗ್ಗಿಸುತ್ತದೆ. ಅದಲ್ಲದೆ ಚಪಾತಿಯಲ್ಲಿ ನಾರಿನ ಅತ್ಯುತ್ತಮವಾದ ಮೂಲವನ್ನು ಹೊಂದಿದೆ. ಇದು ರಕ್ತದ ಕೊಲೆಸ್ಟ್ರಾಲ್‌, ಮಲಬದ್ಧತೆಯನ್ನು ತಡೆಯುತ್ತದೆ. ಅಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.


Ad Widget

Ad Widget

Ad Widget

ಚಪಾತಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ ಮತ್ತು ಸೋಡಿಯಂ ಅನ್ನು ಹೊಂದಿದೆ. ಅಲ್ಲದೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಇದು ಹಂತ ಹಂತವಾಗಿ ತಗ್ಗಿಸುತ್ತದೆ. ವೈದ್ಯರ ಪ್ರಕಾರ ರಾತ್ರಿ ಸಮಯದಲ್ಲಿ ಚಪಾತಿ ತಿನ್ನುವುದು ಒಳ್ಳೆಯದಂತೆ. ಏಕೆಂದರೆ ಇದು ಫೈಬರ್‌ನಿಂದ ತುಂಬಿದೆ. ಹಾಗಾಗಿ ಇದು ನಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

ಚಪಾತಿಯನ್ನು ಸಂಪೂರ್ಣವಾಗಿ ಗೋಧಿಯಿಂದ ತಯಾರಿಸಲಾಗುತ್ತದೆ. ಚಪಾತಿಯಲ್ಲಿ ವಿಟಮಿನ್‌ ಬಿ 1, ಬಿ 2, ಬಿ 3, ಬಿ 6 ಮತ್ತು ಬಿ 9 ಇದೆ. ಇನ್ನು ಕಬ್ಬಿಣ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳಿಂದ ಶ್ರೀಮಂತವಾಗಿದೆ. ಚಪಾತಿಗಳು ರಕ್ತದ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಂದರೆ ಮಧುಮೇಹ ಹೊಂದಿರುವವರು ಚಪಾತಿಗಳನ್ನು ರಾತ್ರಿಯ ವೇಳೆ ಸೇವನೆ ಮಾಡುವುದು ಬಹಳ ಒಳ್ಳೆಯದು. ಚಪಾತಿಯಲ್ಲಿರುವ ಪೋಷಕಾಂಶಗಳು ಕೂದಲು ಮತ್ತು ಚರ್ಮವನ್ನು ಆರೋಗ್ಯಕರವಾಗಿಡಲು ಸಾಕಷ್ಟು ಸಹಾಯ ಮಾಡುತ್ತದೆ.

ಅನೇಕ ಅಧ್ಯಯನಗಳ ಪ್ರಕಾರ, ಗೋಧಿ ಹಿಟ್ಟು ತ್ವಚೆಯ ಮೇಲಿನ ಮೊಡವೆಗಳಿಗೆ ಒಳಗಿನಿಂದ ಚಿಕಿತ್ಸೆ ನೀಡುತ್ತದೆ. ಅಷ್ಟೇ ಅಲ್ಲ, ಚಪಾತಿ ಸೇವನೆ ಮಾಡುವುದರಿಂದ ಅದರಲ್ಲಿರುವ ಪೌಷ್ಟಿಕ ಸತ್ವಗಳು ನೇರವಾಗಿ ಕೇಶ ಸೌಂದರ್ಯವನ್ನು ಹೆಚ್ಚಿಸಲು ಉತ್ತೇಜಿಸುತ್ತವೆಯಂತೆ. ಹಾಗಾಗಿ ಈ ಆರೋಗ್ಯಕರ ಉಪಹಾರವನ್ನು ವಾರಕ್ಕೆ ಒಂದು ಬಾರಿಯಾದರೂ ಸೇವಿಸಿ, ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಿ.

Leave a Reply

error: Content is protected !!
Scroll to Top
%d bloggers like this: