ಸರ್ಕಾರದಿಂದ ಶಾಲೆಗಳಿಗೆ ಹೊಸ ಸಮವಸ್ತ್ರ !! | ವಿದ್ಯಾರ್ಥಿಗಳಿಗೆ ಈ ಬಾರಿ ಯಾವ ಬಣ್ಣದ ಯೂನಿಫಾರ್ಮ್ ಗೊತ್ತಾ??

0 11

ಕೋಲ್ಕತ್ತಾ: ಸರ್ಕಾರವು ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲು ಹೊರಟಿದ್ದು,ಬಂಗಾಳದ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪಾಲನೆಯಾಗಲಿದೆ.

ಈ ನಿಯಮವನ್ನು ಪಶ್ಚಿಮ ಬಂಗಾಳ ಸರ್ಕಾರ ಜಾರಿಗೊಳಿಸಿದ್ದು,ಹೊಸ ಡ್ರೆಸ್ ಕೋಡ್‌ನಲ್ಲಿ ಬಂಗಾಳ ಸರ್ಕಾರದ ‘ಬಿಸ್ವಾ ಬಾಂಗ್ಲಾ’ ಲೋಗೋ ಕೂಡ ಇರುತ್ತದೆ. ಇದನ್ನು ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿನ್ಯಾಸಗೊಳಿಸಿದ್ದಾರೆ.

ಸರ್ಕಾರದ ಆದೇಶದ ಪ್ರಕಾರ, ಹೊಸ ಸಮವಸ್ತ್ರವನ್ನು ರಾಜ್ಯದ ಎಂಎಸ್‌ಎಂಇ ಇಲಾಖೆಯು ಪೂರೈಸುತ್ತದೆ. ಬಿಸ್ವಾ ಬಾಂಗ್ಲಾ ಲಾಂಛನವು ಪ್ರತಿ ಡ್ರೆಸ್‌ನ ಜೇಬಿನ ಮೇಲೂ ಇರುತ್ತದೆ. ರಾಜ್ಯ ಸರ್ಕಾರವು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಶಾಲಾ ಬ್ಯಾಗ್‌ಗಳಲ್ಲಿಯೂ ಬಿಸ್ವಾ ಬಾಂಗ್ಲಾ ಎಂಬ ಲೋಗೋ ಇರುತ್ತದೆ.ಪೂರ್ವ ಪ್ರಾಥಮಿಕದಿಂದ 8 ನೇ ತರಗತಿಯವರೆಗೆ ಹುಡುಗರಿಗೆ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಹಾಗೂ ಹುಡುಗಿಯರಿಗೆ, ಬಿಳಿ ಶರ್ಟ್ ಡ್ರೆಸ್ ಕೋಡ್ ಅನ್ನು ನೇವಿ ಬ್ಲೂ ಫ್ರಾಕ್ ಮತ್ತು ಸಲ್ವಾರ್ ಕಮೀಜ್‌ನೊಂದಿಗೆ ನಿಗದಿಪಡಿಸಲಾಗಿದೆ.

ಪೂರ್ವ ಪ್ರಾಥಮಿಕದಿಂದ 8ನೇ ತರಗತಿವರೆಗಿನ ಬಾಲಕರಿಗೆ 1 ಹಾಫ್ ಪ್ಯಾಂಟ್ ಮತ್ತು 1 ಫುಲ್ ಶರ್ಟ್ ಸಿಗಲಿದೆ ಎಂದು ಸರಕಾರಿ ಆದೇಶದಲ್ಲಿ ತಿಳಿಸಲಾಗಿದೆ. ಪೂರ್ವ ಪ್ರಾಥಮಿಕದಿಂದ II ನೇ ತರಗತಿಯವರೆಗಿನ ಹುಡುಗಿಯರು ಎರಡು ಸೆಟ್ ಶರ್ಟ್ ಮತ್ತು ಟ್ಯೂನಿಕ್ ಫ್ರಾಕ್ ಅನ್ನು ಪಡೆಯುತ್ತಾರೆ. III ನೇ ತರಗತಿಯಿಂದ V ವರೆಗೆ ಎರಡು ಸೆಟ್ ಶರ್ಟ್ ಮತ್ತು ಸ್ಕರ್ಟ್ ನೀಡಲಾಗುವುದು.

ಈ ಮೊದಲೇ ಮಮತಾ ಬ್ಯಾನರ್ಜಿ ಸರ್ಕಾರ ಈ ವಿಚಾರವಾಗಿ ನೀಡಿದ ಆದೇಶದ ಅಡಿಯಲ್ಲಿ, ಎಲ್ಲಾ ಸರ್ಕಾರಿ ಕಚೇರಿ ಕಟ್ಟಡಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳಿಗೆ ನೀಲಿ ಮತ್ತು ಬಿಳಿ ಬಣ್ಣ ಬಳಿಯಲಾಗಿತ್ತು.ಇದೀಗ ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದಲ್ಲೂ ಬದಲಾವಣೆ ತರಲಾಗಿದೆ.

Leave A Reply