ಜೈಲಿಗೆ ಹೋದರೆ ವಾರಕ್ಕೊಮ್ಮೆಯಾದರೂ ಮಟನ್ ಊಟ ಸಿಗುತ್ತೆ | ಮಗನ ಇಡೀ ಕುಟುಂಬವನ್ನು ಬೆಂಕಿಗೆ ಆಹುತಿ ಕೊಟ್ಟವನ ಸಂಚಲನ ಸೃಷ್ಟಿಸಿದ ಹೇಳಿಕೆ
ಮನೇಲಿ ದಿನಾ ಪುಳಿಚಾರು ಊಟ. ನಾನು ಜೈಲಿಗೋದರೆ ವಾರಕ್ಕೆ ಒಮ್ಮೆಯಾದರೂ ಮಟನ್ ಸಿಗುತ್ತದೆ. ಮನೆಯಲ್ಲಿ ಈ ರೀತಿ ಸಿಗುವುದಿಲ್ಲ ಎಂದು ಕೊಲೆ ಪ್ರಕರಣದ ಆರೋಪಿಯೊಬ್ಬ ನೀಡಿರುವ ಹೇಳಿಕೆ ಸಂಚಲನ ಹುಟ್ಟು ಹಾಕಿದೆ.
ತನ್ನ ಸ್ವಂತ ಮಗ ಮತ್ತು ಆತನ ಕುಟುಂಬಕ್ಕೆ ಬೆಂಕಿಯಿಟ್ಟು ಹತ್ಯೆ ಮಾಡಿದ ಆರೋಪದಲ್ಲಿ ಆರೋಪಿ ಹಮೀದ್‌ನನ್ನು ಇತ್ತೀಚೆಗೆ ಬಂಧಿಸಲಾಗಿದೆ. ಈ ಕುಕೃತ್ಯಕ್ಕೂ ಕೆಲ ಸಮಯದ ಮುನ್ನ ಆರೋಪಿ ಹಮೀದ್ ಟೀ ಶಾಪ್ ಒಂದರಲ್ಲಿ ಕುಳಿತು ಮಾತನಾಡಿರುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. ಕೊಲೆ ಮಾಡಿ ಜೈಲಿಗೆ ಹೋದರೆ ಅಲ್ಲಿಯೇ ಇದಕ್ಕಿಂತ ಆರಾಮಾಗಿ ಇರಬಹುದು. ವಾರಕ್ಕೆ ಒಮ್ಮೆ ಮಟನ್ ಊಟ ಅಲ್ಲಿ ಗ್ಯಾರಂಟಿ
ದೊರೆಯುತ್ತದೆ. ಮನೆಯಲ್ಲಿ ಇದು ಕೂಡಾ ಸಿಗುವುದಿಲ್ಲ ಎಂದು ಆತ ಹೇಳಿದ್ದನಂತೆ. ಆತನ ಹೇಳಿಕೆ ಈಗ ತನಿಖೆಯ ಸಂದರ್ಭದಲ್ಲಿ ಬಯಲಾಗಿದೆ.
ಸದರಿ ಆರೋಪಿ ಹಮೀದ್ ಮಾಂಸಪ್ರಿಯ. ಚಪಲದ ಬಾಯಿಯ ಮನುಷ್ಯ. ಮಾಂಸದ ಊಟ ಇಲ್ಲದೆ ಹೋದರೆ ಆತ ಚಡಪಡಿಸುತ್ತಿದ್ದ. ವಾರಕ್ಕೆ ಮೂರು ಬಾರಿ ಕೂಡ ನನಗೆ ಮೀನು ಮತ್ತು ಮಾಂಸವನ್ನು ನೀಡುತ್ತಿಲ್ಲ ಎಂದು ಈ ಹಿಂದೆ ಹಲವಾರು ಬಾರಿ ಆತ ತನ್ನ ಕುಟುಂಬದ ಜತೆ ವಾಗ್ವಾದಕ್ಕೆ ಇಳಿದಿದ್ದನಂತೆ. ತನ್ನ ಆಸ್ತಿಯನ್ನು ಮರಳಿಸುವಂತೆ ಮಗನ ವಿರುದ್ಧವೇ ಮುನ್ಸಿಫ್ ಕೋರ್ಟ್‌ನಲ್ಲಿ ಹಮೀದ್ ದೂರು ಕೂಡಾ ದಾಖಲಿಸಿದ್ದ. ಅಲ್ಲದೆ, ತನ್ನ ಜೀವನ ವೆಚ್ಚಕ್ಕಾಗಿಯೂ ಅಲ್ಲಿನ ಕೌಟುಂಬಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದ ಎಂದು ತಿಳಿದುಬಂದಿದೆ.
ಇದರ ನಡುವೆ ಫೆ. 25ರಂದು ಮಗ ಫೈಜಲ್ ತಂದೆ ಹಮೀದ್ ವಿರುದ್ಧ ಕರಿಮನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಜಮೀನನ್ನು ಮರಳಿಸದೇ ಹೋದರೆ, ಪೆಟ್ರೋಲ್ ಸುರಿದು ಕೊಲೆ ಮಾಡುವುದಾಗಿ ತಂದೆಯಿಂದ ಬೆದರಿಕೆ ಕರೆ
ಬರುತ್ತಿದ್ದೆ ಎಂದು ಉಲ್ಲೇಖಿಸಿದ್ದ.
ಇದೆಲ್ಲ ನಡೆದ ಬಳಿಕ ಮಗ ಫೈಜಲ್ ಸೇಫ್ಟಿ ಗೆ ಇರಲಿ ಅಂತ, ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಒಂದು ಕೋಣೆಯಲ್ಲಿ ಮಲಗಲು ಆರಂಭಿಸಿದರು. ಇದು ಆರೋಪಿ ಹಮೀದ್ ಅಂದುಕೊಂಡ ಕೆಲಸಕ್ಕೆ ಸುಲಭವಾಯಿತು. ಬಾಯಿ ರುಚಿಯ ವಿಷಯದಲ್ಲಿ ತುಂಬಾ ಕೋಪಗೊಂಡಿದ್ದ ಹಮೀದ್ ಪೆಟ್ರೋಲ್ ಸುರಿದು ಮಗ ಮತ್ತು ಆತನ ಕುಟುಂಬವನ್ನೇ ಕೊಲೆ ಮಾಡಿದ್ದು, ಇದನ್ನು ಪೊಲೀಸರ ಮುಂದೆಯೂ ಒಪ್ಪಿಕೊಂಡಿದ್ದಾನೆ. ನನಗೆ ಜಮೀನು ಹಿಂತಿರುಗಿಸಲು ನಿರಾಕರಿಸಿದ್ದಲ್ಲದೆ, ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ ಇದು ಕೊಲೆಗೆ ಕಾರಣವಾಯಿತು ಎಂದು ಹಮೀದ್ ತಪ್ಪೋಪ್ಪಿಕೊಂಡಿದ್ದಾನೆ.