ಗ್ರಾಹಕರೇ ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್ : ಡೀಸೆಲ್ ಬೆಲೆ ಲೀಟರ್ ಗೆ ರೂ.25 ಹೆಚ್ಚಳ

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಯ ಕಾರಣದಿಂದಾಗಿ, ಸಗಟು ಗ್ರಾಹಕರಿಗೆ ಮಾರಾಟ ಮಾಡುವ ಡೀಸೆಲ್ ಪ್ರತಿ ಲೀಟರ್‌ಗೆ 25 ರೂಪಾಯಿಗಳಷ್ಟು ದುಬಾರಿಯಾಗಿದೆ. ಸಗಟು ಗ್ರಾಹಕರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ. ಹೆಚ್ಚಳವಾಗಿದೆ.

ಹೀಗಿದ್ದರೂ, ಪೆಟ್ರೋಲ್ ಪಂಪ್‌ಗಳ ಮೂಲಕ ಮಾರಾಟವಾಗುವ ಡೀಸೆಲ್‌ನ ಚಿಲ್ಲರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಈ ತಿಂಗಳು ಪೆಟ್ರೋಲ್ ಪಂಪ್‌ಗಳ ಮಾರಾಟದಲ್ಲಿ ಶೇಕಡಾ 20 ರಷ್ಟು ಏರಿಕೆ ಕಂಡುಬಂದಿದೆ. ಬಸ್ ಫ್ಲೀಟ್ ನಿರ್ವಾಹಕರು ಮತ್ತು ಮಾಲ್‌ಗಳಂತಹ ಸಗಟು ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಂದ ಇಂಧನವನ್ನು ಖರೀದಿ ಮಾಡುವುದು ಸಾಮಾನ್ಯ. ಇವರುಗಳು ನೇರವಾಗಿ ಪೆಟ್ರೋಲಿಯಂ ಕಂಪನಿಗಳಿಂದ ಇಂಧನವನ್ನು ಸಂಗ್ರಹಿಸುವುದರಿಂದ ಇಂಧನವನ್ನು ಚಿಲ್ಲರೆಯಾಗಿ ಮಾರಾಟ ಮಾಡುವ ಕಂಪನಿಗಳ ನಷ್ಟ ಹೆಚ್ಚಿದೆ. ಅದರಲ್ಲೂ ನೈರಾ ಎನರ್ಜಿ, ಜಿಯೋ-ಬಿಪಿ ಮತ್ತು ಶೆಲ್‌ನಂತಹ ಕಂಪನಿಗಳಿಗೆ ಇದು ಹೆಚ್ಚು ಪರಿಣಾಮ ಬೀರಿವೆ. ಮಾರಾಟವನ್ನು ಹೆಚ್ಚಿಸಿದರೂ, ಈ ಕಂಪನಿಗಳು ಇನ್ನೂ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಈಗ ಪಂಪ್‌ಗಳು ಕಾರ್ಯನಿರ್ವಹಿಸಲು ಆರ್ಥಿಕವಾಗಿ
ಲಾಭದಾಯಕವಾಗುವುದಿಲ್ಲ ಎಂಬುವುದು ಗಮನಾರ್ಹ.

Leave A Reply

Your email address will not be published.