ವ್ಯಕ್ತಿಯ ಮೇಲೆ‌ ಮಲಗಿದ ಮೊಸಳೆ! ನಂತರ ಆದದ್ದು ಏನು ಗೊತ್ತೆ ?

0 5

ಬೆಕ್ಕು, ನಾಯಿ, ಪಕ್ಷಿಗಳು, ಮೊಲಗಳನ್ನು,‌ ಕೋಳಿ, ಮೇಕೆ, ಕುರಿ, ಹಸುಗಳನ್ನು ಮನೆಯಲ್ಲಿ ಸಾಕುವುದು ಸಾಮಾನ್ಯ‌. ಅವನ್ನು ಮುದ್ದಾಡುತ್ತಾರೆ. ಜೊತೆಗೆ ಮಲಗಿಸಿಕೊಳ್ಳುತ್ತಾರೆ‌. ಆದರೆ ಕೆಲವು ಪ್ರಾಣಿಗಳಿಂದ ಜನರು ದೂರ ಇರುತ್ತಾರೆ. ಆದರೆ ಇಲ್ಲೊಬ್ಬನ ಮೇಲೆ ಮೊಸಳೆ‌ ಮಲಗಿದೆ.

ಮೊಸಳೆ‌ ಅಪಾಯಕಾರಿ ಪ್ರಾಣಿಗಳಲ್ಲಿ ಒಂದಾಗಿದೆ. ಮೊಸಳೆಗಳು ತಮಗಿಂತ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುವ ಸಾಮಾರ್ಥ್ಯವನ್ನು ಹೊಂದಿವೆ. ನೀರು ಕುಡಿಯಲು ಬರುವ ಪ್ರಾಣಿಗಳ ಮೇಲೆ ಮೊಸಳೆ ಆಕ್ರಮಣ ನಡೆಸುತ್ತವೆ. ಇಲ್ಲಿ ಮೊಸಳೆಯು ಮಾನವನ ಎದೆಯ ಮೇಲೆ ಕುಳಿತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಮೊಸಳೆಯು ನೆಲದ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಹತ್ತಿ ಅವನ ಎದೆಯ ಮೇಲೆ ಉರುಳಲಾರಂಭಿಸುತ್ತದೆ. ಈ ದೃಷ್ಯ ಭಯ ಮೂಡಿಸುತ್ತದೆ.  ಆದರೆ ಆ ವ್ಯಕ್ತಿಯ ಮೊಗದಲ್ಲಿ ಯಾವ ಭಯವೂ ಇಲ್ಲ. ಆತ ತನ್ನ ಮೇಲೆ ಮೊಸಳೆ ಆಡಲು ಬಿಡುತ್ತಾನೆ. ಇದನ್ನು ನೋಡಿದ ಜನ ಇದೊಂದು ಸಾಕು ಪ್ರಾಣಿಯಾಗಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

Leave A Reply