ಚುನಾವಣೆಗೆ ಮಾಡಿದ ಸಾಲ ತೀರಿಸಲು ಸ್ನೇಹಿತನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿಯಿಂದ ಪತ್ನಿಗೆ ಒತ್ತಾಯ| ಮುಖಂಡನೊಬ್ಬನ ಪತ್ನಿಯ ಅಳಲು!

0 9

ಚುನಾವಣೆ ಸಂದರ್ಭ ಖರ್ಚು ಮಾಡಲು ತೆಗೆದುಕೊಂಡ ಸಾಲ ತೀರಿಸಲು ಸಾಧ್ಯವಾಗದೇ, ತನ್ನ ಪತಿ ಆತನ ಸ್ನೇಹಿತರಿಗೆ ತನ್ನನ್ನು ಮಾರಿದ್ದಾನೆ ಎಂದು ಉತ್ತರಪ್ರದೇಶದ ಸ್ಥಳೀಯ ಮುಖಂಡರೊಬ್ಬರ ಪತ್ನಿ ಆರೋಪಿಸಿದ್ದಾರೆ.

ಉತ್ತರಪ್ರದೇಶದ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ತನ್ನ ಮನೆಯಲ್ಲೇ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದೂ ಆಕೆ ಪೊಲೀಸರ ಮುಂದೆ ಅವಲತ್ತುಕೊಂಡಿದ್ದಾಳೆ.

ಮಹಿಳೆ ಹೇಳುವ ಪ್ರಕಾರ, ಮಾರ್ಚ್ 10ರಂದು ಮತ ಎಣಿಕೆ ಮುಗಿದ ನಂತರ, ನನ್ನ ಗಂಡ ತನ್ನ ಸ್ನೇಹಿತನೊಬ್ಬನನ್ನು ಮನೆಗೆ ಕರೆದುಕೊಂಡು ಬಂದು ಆತನು ಕೊಟ್ಟ ಹಣಕ್ಕಾಗಿ ಅವನ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಹೇಳಿದ. ಆದರೆ ಇದಕ್ಕೆ ನಾನು ಒಪ್ಪದಿದ್ದಾಗ ನನ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಈ ವಿಚಾರವನ್ನು ನನ್ನ ಗಂಡನ ಸಂಬಂಧಿಕರಿಗೆ ತಿಳಿಸಿದಾಗ ಅವರೆಲ್ಲಾ ಸೇರಿ ನನ್ನನ್ನು ನಿಂದಿಸಿದರು ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

ಈಗ ಪೊಲೀಸರು ಪತಿ ಮತ್ತು ಆತನ ಸ್ನೇಹಿತರು ಮತ್ತು ಸಂಬಂಧಿಕರ ಮೇಲೆ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಐಪಿಸಿಯ ಇತರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Leave A Reply