ಮಂಗಳೂರು: ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿ ಮನೆಗೆ ಬಾರದೆ ನಾಪತ್ತೆ!! ಮಧ್ಯ ವಯಸ್ಕನೊಂದಿಗೆ ಪರಾರಿಯಾಗಿರುವ ಶಂಕೆ-ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು: ಇಲ್ಲಿನ ಖಾಸಗಿ ಕಾಲೇಜೊಂದರಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ನಡೆಸುತ್ತಿದ್ದ ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾಪತ್ತೆಯಾದ ಯುವತಿಯನ್ನು ದೇರಳಕಟ್ಟೆ ಮಾಡೂರಿನ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ, ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಗ್ರಾಮದ ಊರ್ನಿ ನಿವಾಸಿ ಸ್ವಾತಿ(23) ಎಂದು ಗುರುತಿಸಲಾಗಿದೆ.

ಯುವತಿಯು ಎಂದಿನಂತೆ ತನ್ನ ದ್ವಿಚಕ್ರ ವಾಹನದಲ್ಲಿ ಮುಡಿಪುವಿಗೆ ತೆರಳಿ,ಅಲ್ಲಿಂದ ಬಸ್ಸಿನಲ್ಲಿ ತೆರಳಿದ್ದಳು. ಸಂಜೆವೇಳೆಗೆ ಇನ್ನೂ ಮನೆಗೆ ಬಾರದಿರುವುದರಿಂದ ಅನುಮಾನಗೊಂಡ ಆಕೆಯ ಸಹೋದರ ಕರೆ ಮಾಡಿದಾಗ ಕರೆ ಸ್ವೀಕರಿಸದೆ ಇದ್ದುದರಿಂದ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply