ಕಾಮ ಪ್ರಚೋದನೆಗಾಗಿ ಅದೊಂದು ಸಾಧನ ಬಳಿಸಿದ ಮಹಿಳೆಗೆ ಕಾದಿತ್ತು ಶಾಕ್!! ಮೂತ್ರನಾಳದ ಮೂಲಕ ಮೂತ್ರಕೋಶ ಸೇರಿಕೊಂಡ ಗಾಜಿನ ಚೂರು-ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವೈದ್ಯ ಲೋಕ

0 12

ಮಹಿಳೆಯೊಬ್ಬರು ತನ್ನ ಕಾಮ ಪ್ರಚೋದನೆಗಾಗಿ ಇಂಟ್ರಾ ವೆಜಿನಲ್ ಫಾರಿನ್ ನ್ನು ಉಪಯೋಗಿಸಿದ ಸಂದರ್ಭ ಆ ಸಾಧನದ ಗಾಜಿನ ಅಂಶವು ಮೂತ್ರಕೋಶದೊಳಗೆ ಸೇರಿಕೊಂಡಿದ್ದು, ನಾಲ್ಕು ವರ್ಷಗಳ ಬಳಿಕ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊರತೆಗೆದ ಘಟನೆಯೊಂದು ಟುನೀಶಿಯಾದಿಂದ ವರದಿಯಾಗಿದೆ.

ಮೂತ್ರನಾಳದ ಸೋಂಕಿನಿಂದ ಬಳಳುತ್ತಿದ್ದ ಈ ಮಹಿಳೆ ವೈದ್ಯರ ಬಳಿಗೆ ತೆರಳಿದ್ದಳು. ಈ ವೇಳೆ ಮಹಿಳೆಯನ್ನು ಪರಿಶೀಲಿಸಿದ ವೈದ್ಯರು, ಮೂತ್ರಕೋಶದ ಸ್ಕ್ಯಾನ್ ನಡೆಸಿದ್ದು ಈ ಸಂದರ್ಭ ಗಾಜಿನ ಲೋಟದ ಚೂರುಗಳು ಪತ್ತೆಯಾಗಿದ್ದವು.

ವೈದ್ಯ ಲೋಕಕೆ ಸವಾಲಾದ ಈ ಪ್ರಕರಣದಲ್ಲಿ ಬುದ್ಧಿವಂತಿಕೆ ಉಪಯೋಗಿಸಿದ ವೈದ್ಯ ಸಮೂಹ ಕೊನೆಗೂ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಗಾಜಿನ ಚೂರುಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

Leave A Reply