ಶಬರಿಯಂತೆ ಪುನೀತ್ ಬರುವಿಕೆಗೆ ಕಾಯುತ್ತಿರುವ ಜೀವ! ಇಂದು ಆ ಜೀವ ಹೇಳಿದ್ದೇನು ?

Share the Article

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ 5 ತಿಂಗಳಾಗಿದೆ. ಈಡಿ ನಾಡು ಅಪ್ಪು ಇಲ್ಲ ಎಂಬ ನೋವಿನಲ್ಲಿದೆ. ಆದರೆ ಒಂದು ಜೀವ ಅಪ್ಪು ಬರುವಿಕೆಗಾಗಿ ಕಾಯುಯುತ್ತಿದೆ. ಆ ಜೀವಕ್ಕೆ ಅಪ್ಪು ಇಲ್ಲ ಎಂಬ ಅಹಿತಕರ ಸುದ್ದಿ ಗೊತ್ತಿಲ್ಲ! ರಾಜ್ ಕುಮಾರ್ ಅವರ ತಂಗಿ ನಾಗಮ್ಮ ಅವರಿಗೆ ಅಪ್ಪು ಅಗಲಿಕೆಯ ಸುದ್ದಿಯೇ ತಿಳಿದಿಲ್ಲ ಅವರು ಇಂದಿಗೂ ಅಪ್ಪು ಬರುವಿಕೆಗಾಗಿ ಕಾಯುತ್ತಿದ್ದಾರೆ.

ಇಂದು ಅಪ್ಪು ಹುಟ್ಟುಹಬ್ಬದಿಂದು ಜೇಮ್ಸ್ ಬಿಡುಗಡೆಯಾಗುತ್ತಿರುವ ಸುದ್ದಿ ತಿಳಿದು ಸಂತಸದಿಂದ ಜೇಮ್ಸ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಹರಸಿದ್ದಾರೆ ಹಾಗು ಲೋಹಿತ(ಪುನೀತ್) ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ ನಾಗತ್ತೆ.

ಚಾಮರಾಜನಗರದ ಗಾಜನೂರಿನಲ್ಲಿರುವ ನಾಗಮ್ಮ ಅವರಿಗೆ ಅನಾರೋಗ್ಯ ಕಾಡುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಅಪ್ಪು ನಿಧನದ ಸುದ್ದಿಯನ್ನು ತಿಳಿಸಿಲ್ಲ. ಹಾಗಾಗಿ ಅವರು ಇಂದಿಗೂ ಅಪ್ಪು ಜೀವಂತವಿದ್ದು, ತಮ್ಮನ್ನು ನೋಡಲು ಬರುತ್ತಾರೆ ಎಂದು ಕಾಯುತ್ತಿದ್ಧಾರೆ. 

Leave A Reply