‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನೋಡಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದ ಸಿಎಂ !!

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಇಡೀ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ. ದಿನದಿಂದ ದಿನಕ್ಕೆ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿರುವುದರ ಜೊತೆಗೆ ಸಾಕಷ್ಟು ಜನರ ಮನ ಮುಟ್ಟಿದೆ ಈ ಸಿನಿಮಾದ ಕಥೆ. ಈ ಸಿನಿಮಾ ನೋಡಲು ಅಸ್ಸಾಂ ಸಿಎಂ ಹೊಸ ಆಫರ್ ನೀಡಿದ್ದಾರೆ. ಅದೇನೆಂದರೆ ಸಿನಿಮಾ ನೋಡಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ ಘೋಷಿಸಿದ್ದಾರೆ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ.

1990ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೇಗೆ ಕಾಶ್ಮೀರದಿಂದ ಕಳುಹಿಸಲಾಯಿತು ಎಂಬ ಸತ್ಯವನ್ನು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಲಾಗಿದೆ. ಈ ಹಿನ್ನೆಲೆ ಹಿಮಂತ ಬಿಸ್ವಾ ಶರ್ಮಾ ಅವರು, ನಮ್ಮ ಸರ್ಕಾರಿ ನೌಕರರು ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಲು ಅರ್ಧ ದಿನದ ವಿಶೇಷ ರಜೆ ಕೊಡಲಾಗುತ್ತಿದೆ. ಈ ಘೋಷಣೆಯನ್ನು ಮಾಡಲು ತುಂಬಾ ಸಂತೋಷವಾಗಿದೆ. ಈ ಬಗ್ಗೆ ಅವರು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಬೇಕು. ಸಿನಿಮಾಗೆ ಹೋಗಿದ್ದ ಟೀಕೆಟ್‍ಗಳನ್ನು ಮರುದಿನ ಮೇಲಾಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಶರ್ಮಾ ಅವರು ಸಹ ಸೋಮವಾರ ತಮ್ಮ ಸಂಪುಟದೊಂದಿಗೆ ಗುವಾಹಟಿಯ ಚಿತ್ರಮಂದಿರದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ವೀಕ್ಷಿಸಿದರು. ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ದೌರ್ಜನ್ಯವೂ ಮಾನವೀಯತೆಯ ಮೇಲೆ ದೊಡ್ಡ ಕಳಂಕವಾಗಿದೆ ಎಂದು ಹೇಳಿದರು.

ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಅವರನ್ನು ಓಡಿಸಿರುವ ರೀತಿ ಮಾನವೀಯತೆಯ ಮೇಲೆ ಕಳಂಕವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಜನರ ದುಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರೀಸಲಾಗಿದೆ. ಇದನ್ನು ನಾನು ನನ್ನ ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು @BJP4Assam ಮತ್ತು ಮಿತ್ರಪಕ್ಷಗಳ ಶಾಸಕರೊಂದಿಗೆ ವೀಕ್ಷಿಸಿದ್ದೇನೆ ಎಂದು ಸಿನಿಮಾ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದ ದಿನದಿಂದ ಬಾರಿ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿರುವ ನೈಜತೆಯನ್ನು ಅರಿತ ರಾಜಕಾರಣಿಗಳು ಮತ್ತು ಗಣ್ಯರು ಸಿನಿಮಾವನ್ನು ಭಾರತ ಪ್ರಜೆಗಳು ನೋಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಲು ಹಲವು ರಿಯಾಯಿತಿಗಳನ್ನು ಕೊಡುತ್ತಿದ್ದಾರೆ.

Leave A Reply

Your email address will not be published.