ಉಬರ್ ಕ್ಯಾಬ್ ಬುಕ್ ಮಾಡಿದ್ದ ಯುವತಿಗೆ ಕಾದಿತ್ತು ಬಿಗ್ ಶಾಕ್ !! | ಕ್ಯಾಬ್ ಚಾಲಕನಾಗಿ ಬಂದದ್ದು ಯಾರು ಗೊತ್ತಾ??

ಉಬರ್ ಕ್ಯಾಬ್‌ ಬುಕ್‌ ಮಾಡಿ ಕಾಯುತ್ತಾ ನಿಂತಿದ್ದ ಯುವತಿಗೆ ಊಹಿಸಲಾಗದ ಅಚ್ಚರಿಯೊಂದು ಕಾದಿತ್ತು. ತನ್ನನ್ನೇ ತಾನು ನಂಬಲಾಗದ ಸ್ಥಿತಿಯಲ್ಲಿದ್ದಳು ಆಕೆ. ಏಕೆಂದರೆ ಕಾರಲ್ಲಿ ಸಾಮಾನ್ಯ ಕ್ಯಾಬ್‌ ಚಾಲಕನ ಬದಲು ಕುಳಿತಿದ್ದದ್ದು ಯಾರು ಗೊತ್ತಾ?? ಬೇರಾರೂ ಅಲ್ಲ, ಸ್ವತಃ ಊಬರ್ ಕ್ಯಾಬ್‌ ಬುಕ್ ಕಂಪನಿಯ ಸಿಇಒ ಪ್ರಭ್‌ಜೀತ್ ಸಿಂಗ್. ಇದನ್ನು ಸ್ವತಃ ಯುವತಿಯೇ ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್‌ನಲ್ಲಿ ಹಂಚಿಕೊಂಡಿದ್ದಾರೆ.

ಉಬರ್ ಇಂಡಿಯಾ ಸಿಇಒ ಅವರೊಂದಿಗಿನ ತಮ್ಮ ಮೊದಲ ಪ್ರಯಾಣದ ಬಗ್ಗೆ ಕೇವಲ ಓರ್ವ ಯುವತಿಯಲ್ಲದೇ ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್‌ಇನ್ ಬಳಕೆದಾರ ಅನನ್ಯಾ ದ್ವಿವೇದಿ, ಪ್ರಭ್‌ಜೀತ್ ಸಿಂಗ್ ಅವರ ಜೊತೆ ವಿಶೇಷ ಊಬರ್ ರೈಡ್‌ನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಬಹಳ ಸಮಯದ ನಂತರ ಕೆಲಸ ಮಾಡಲು ಹೊರಬಂದೆ ಹಾಗೂ ಕಾರನ್ನು ಯಾರೂ ಚಲಾಯಿಸಿರಬಹುದು ಎಂಬುದನ್ನು ಊಹಿಸಿ, ಬೇರೆ ಯಾರೂ ಅಲ್ಲ ಸ್ವತಃ ಉಬರ್ ಇಂಡಿಯಾ ಸಿಇಒ ಪ್ರಭ್ ಜೀತ್ ಸಿಂಗ್. ಹೌದು ಇದು ಅವರ ಸಂಶೋಧನೆಯ ಭಾಗವಾಗಿತ್ತು.

ಆರಂಭದಲ್ಲೇ ನನಗೆ ಏನೋ ಒಂಥರ ಬದಲಾವಣೆ ಎನಿಸಿತ್ತು. ನಂತರ ನಾನು ಅವರ ಹೆಸರನ್ನು ಗೂಗಲ್‌ ಮಾಡಿ ಆ ಮೂಲಕ ಅಲ್ಲಿದ್ದ ಫೋಟೋ ಹಾಗೂ ಕಾರಿನ ಚಾಲಕನ ಸ್ಥಾನದಲ್ಲಿದ್ದ ಅವರ ಮುಖವನ್ನು ಗಮನಿಸಿದೆ. ನಂತರ ಕೊನೆಯದಾಗಿ ನಾನು ಇದು ಅವರೇ ಎಂಬುದನ್ನು ನಂಬಿದೆ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಸಮಸ್ಯೆಯನ್ನು ತಿಳಿಯಲು ಮೂಲದಿಂದಲೇ ಪ್ರಯತ್ನಿಸಲು ಒಂದು ನಮ್ರತೆ ಹಾಗೂ ಸಂಕಲ್ಪ ಬೇಕಾಗುತ್ತದೆ. ಅವರಿಗೆ ನನ್ನ ಪೂರ್ಣ ಗೌರವ ಎಂದಿದ್ದಾರೆ ಅನನ್ಯಾ ದ್ವಿವೇದಿ.

ಇನ್ನೊಬ್ಬ ಲಿಂಕ್ಡ್‌ಇನ್ ಬಳಕೆದಾರರಾದ ಸೌರಭ್ ಕುಮಾರ್ ವರ್ಮಾ ಅವರು ಕಂಪನಿಯ ಸೇವೆಗಳನ್ನು ಸುಧಾರಿಸಲು ಸ್ವತಃ ರಸ್ತೆಗಿಳಿದ ಉಬರ್ ಇಂಡಿಯಾ ಸಿಇಒ ಅವರ ಸಮಗ್ರತೆಯನ್ನು ಪ್ರಶಂಸಿಸಿದ್ದಾರೆ. ಹೀಗೆ ಲಿಂಕ್ಡಿನ್‌ನಲ್ಲಿ ಮಧುವಂತಿ ಸುಂದರರಾಜನ್, ಸೇರಿದಂತೆ ಅನೇಕರು ಉಬರ್ ಕ್ಯಾಬ್‌ ಸಿಇಒ ಜೊತೆಗಿನ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ. ಅಂತೂ ಇಂತೂ ಉಬರ್ ಸಿಇಓ ಒಂದು ದಿನ ಕೆಲವು ಅದೃಷ್ಟವಂತ ಪ್ರಯಾಣಿಕರಿಗೆ ಚಾಲಕರಾಗಿದ್ದು ಮಾತ್ರ ಸತ್ಯ.

ಅದಲ್ಲದೆ ಉತ್ತರಾಖಂಡದ ಪುಟ್ಟ ಹಳ್ಳಿ ಕೋಟದ್ವಾರ್ ನ ಹುಡುಗ ರೋಹಿತ್ ನೇಗಿಗೆ ಸಿಕ್ಕಿರುವ ಅವಕಾಶವೇ ಹಾಗಿದೆ. ಐಐಟಿ ಗುವಾಹಟಿಯಲ್ಲಿ 2ನೇ ವರ್ಷದ ಎಂಟೆಕ್ ಓದುತ್ತಿರುವ ರೈತನ ಮಗ ರೋಹಿತ್ ನೇಗಿಗೆ ಉಬರ್ ಇಂಟರ್ ನ್ಯಾಷನಲ್ ಜಾಬ್ ಆಫರ್ ನೀಡಿದೆ. ಉಬರ್ ಸಂಸ್ಥೆಯು ಈ ಹುಡಗನಿಗೆ ನೀಡಲಿರುವ ವೇತನ ಎಷ್ಟು ಗೊತ್ತೇ ಬರೋಬ್ಬರಿ 2.05 ಕೋಟಿ ರೂಪಾಯಿ!!

Leave A Reply

Your email address will not be published.