‘ಎಲೆಕ್ಟ್ರಿಕ್ ಬೈಕ್’ ಚಾರ್ಜಿಂಗ್ ವೇಳೆ ಸ್ಪೋಟ!|ಬಳಕೆದಾರರೇ ಎಚ್ಚರ!

0 10

ಶಿವಮೊಗ್ಗ:ಇಂದು ಎಲ್ಲರೂ ಬಳಕೆ ಮಾಡುವುದೇ ಎಲೆಕ್ಟ್ರಿಕ್ ವಾಹನ. ಇಂತಹ ಹೊಸ-ಹೊಸ ಟೆಕ್ನಾಲಜಿಯಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚು.ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನಲ್ಲಿ ಇಂತಹುದೊಂದು ಘಟನೆ ನಡೆದಿದೆ.

ಹೌದು.ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್ ಸ್ಪೋಟಗೊಂಡು ಸುಟ್ಟು ಕರಕಲಾದ ಘಟನೆ ಸಂಭವಿಸಿದೆ.ಈ ಎಲೆಕ್ಟ್ರಿಕ್ ಬೈಕ್ ನಿಂಬೆಗೊಂದಿ ಗ್ರಾಮದ ಮಲ್ಲಿಕಾರ್ಜುನ ಎಂಬವವರಿದ್ದಾಗಿದೆ.

ಮನೆಯಲ್ಲಿ ಬೈಕ್ ಸಹಿತ ಬ್ಯಾಟರಿ ಚಾರ್ಜ್ ಮಾಡುವಾಗ ರಾತ್ರಿ 11 ಗಂಟೆ ಸುಮಾರಿಗೆ ಬ್ಯಾಟರಿ ಸ್ಪೋಟಗೊಂಡು ಬೈಕ್ ಸುಟ್ಟು ಕರಕಲಾಗಿದೆ.ಸಮೀಪದಲ್ಲೇ ಮಲಗಿದ್ದ ಮಲ್ಲಿಕಾರ್ಜುನ್ ಎಚ್ಚರಗೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಈ ವೇಳೆಗಾಗಲೇ ಬೈಕ್, ಹಾಸಿಗೆ ಸುಟ್ಟು ಹೋಗಿವೆ ಎನ್ನಲಾಗಿದೆ.

Leave A Reply