ರಿಯಲ್ ಎಸ್ಟೇಟ್ ಉದ್ಯಮಿಯ ಭೀಕರ ಹತ್ಯೆ| ಮೂವರು ಹೆಂಡಿರ ಮುದ್ದಿನ ಗಂಡನನ್ನು ಕೊಂದವರ್ಯಾರು ?

Share the Article

ಮೂರು ಹೆಂಡಿರ ಮುದ್ದಿನ ಗಂಡ ಆತ. ಯಾರಿಗೂ ಮೋಸ ಮಾಡದೇ ಎಲ್ಲರಿಗೂ ಹೇಳಿಯೇ ಮದುವೆ ಆಗಿದ್ದ. ಸಂಸಾರವೂ ಚೆನ್ನಾಗಿ ನಡೆಯುತ್ತಿತ್ತು.

ಒಂದು ದಿನ ಬೆಳಗ್ಗೆ ವಾಕಿಂಗ್ ಅಂತಾ ಕಾರಿನಲ್ಲಿ ಹೊರ ಹೋದವನಿಗೆ ಯಾರೋ ಕಣ್ಣಿಗೆ ಖಾರದ ಪುಡಿ ಎರಚಿ ಬರ್ಬರವಾಗಿ ಹತ್ಯೆ ಮಾಡಿ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಉದ್ಯಮಿಯನ್ನು ಹತ್ಯೆ ಮಾಡಿದ್ಯಾರು? ಹದಿನಾರು ಬಾರಿ ಇರಿದು ಆತನನ್ನ ಕೊಂದಿದ್ದು ಯಾರು ? ಬನ್ನಿ ತಿಳಿಯೋಣ.

ಈ ಘಟನೆ ನಡೆದಿರೋದು ಬೆಳಗಾವಿಯಲ್ಲಿ. ವಾಕಿಂಗ್ ಹೋದ ವ್ಯಕ್ತಿಯ ಮೇಲೆ ಖಾರದ ಪುಡಿ ಎರಚಿ, ಮಾರಾಕಾಸ್ತ್ರಗಳಿಂದ ಹದಿನಾರು ಬಾರಿ ಇರಿದು, ಬರ್ಬರವಾಗಿ ಹತ್ಯೆ ಮಾಡಿ ಕಾಲ್ಕಿತ್ತಿದ್ದಾರೆ. ಕೊಲೆಯಾದ ವ್ಯಕ್ತಿಯ ಹೆಸರು ರಾಜು ಮಲ್ಲಪ್ಪ ದೊಡ್ಡಬಣ್ಣವರ್. 45 ವರ್ಷದ ರಾಜು ಮೂರು ಜನರನ್ನ ಮದುವೆಯಾಗಿದ್ದ. ಹಾಗಂತ ಯಾರಿಗೂ ವಿಚ್ಛೇದನ ಕೂಡ ನೀಡಿಲ್ಲ. ಮದುವೆಯಾದ ವಿಚಾರ ಎಲ್ಲರಿಗೂ ತಿಳಿದಿತ್ತು.

ರಾಜು ಮಂಗಳವಾರ ಭವಾನಿ ನಗರದ ಮನೆಯಿಂದ ಎಂದಿನಂತೆ ಬೆಳಗ್ಗೆ ಆರು ಗಂಟೆಗೆ ವಾಕಿಂಗ್‌ಗೆ ತೆರಳಿದ್ದಾನೆ. ಈ ವೇಳೆ, ಎರಡನೇ ಹೆಂಡತಿಗೆ ಫೋನ್ ಕರೆ ಮಾಡಿದ್ದಾರೆ. ಆದರೆ, ಫೋನ್ ತಗೆದಿಲ್ಲ ಅನ್ನೋ ಕಾರಣಕ್ಕೆ ಒಬ್ಬರೇ ವಾಕ್ ಮಾಡಲು ಹೊರಟ್ಟಿದ್ದಾನೆ. ಮನೆಯಿಂದ ಒಂದು ಕಿಮೀ ಹೋಗುವಷ್ಟರಲ್ಲಿ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು ರಾಜು ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ನಂತರ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ
ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ರಾಜು
ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ವಾಕಿಂಗ್ ಮಾಡುತ್ತಿದ್ದ ಕೆಲವರು ರಸ್ತೆಯಲ್ಲಿ ಶವ ಬಿದ್ದಿದ್ದನ್ನು ಗಮನಿಸಿ ಬೆಳಗಾವಿ ಗ್ರಾಮೀಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇತ್ತ ಡಿಸಿಪಿ ರವೀಂದ್ರ ಗಡಾದಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇದಾದ ಬಳಿಕ ಶವವನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ.

ರಾಜು 22ವರ್ಷದ ಹಿಂದೆ ಉಮಾ ಎಂಬುವರನ್ನು ಮದುವೆಯಾಗಿದ್ದ. ಎರಡು ಮಕ್ಕಳಿದ್ದು, ಇಬ್ಬರಿಗೂ ವೈದ್ಯಕೀಯ ಶಿಕ್ಷಣ ಓದಿಸುತ್ತಿದ್ದಾರೆ. ಆದರೆ, ನಾಲ್ಕು ವರ್ಷದ ಹಿಂದೆ ಮೊದಲ ಹೆಂಡತಿ ತನ್ನ ಮಕ್ಕಳನ್ನ ಇವರ ಬಳಿ ಬಿಟ್ಟು ಬೆಂಗಳೂರು ಸೇರಿಕೊಂಡಿದ್ದರು. ಇತ್ತ ಎಂಟು ವರ್ಷದ ಹಿಂದೆ ಮಹಾರಾಷ್ಟ್ರದ ಲಾತೂರ್‌ನ ಕಿರಣಾ ಎಂಬುವಳನ್ನೂ ರಾಜು ಮದುವೆಯಾಗಿದ್ದ. ಅವರಿಗೂ ಎರಡು ಮಕ್ಕಳಿವೆ. ಇದಾದ ಬಳಿಕ ಒಂದು ವರ್ಷದ ಹಿಂದೆ ಹಳಿಯಾಳ ತಾಲೂಕಿನ ದೀಪಾಳನ್ನ ಕಟ್ಟಿಕೊಂಡಿದ್ದ. ಆಕೆಯೂ ಇದೀಗ ಮೂರು ತಿಂಗಳ ಗರ್ಭಿಣಿ. ಹೀಗೆ ಮೂರು ಹೆಂಡತಿಯರನ್ನು ಒಂದೊಂದು ಕಡೆ ಇಟ್ಟು ಜೀವನ ಸಾಗಿಸುತ್ತಿದ್ದ ರಾಜು ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ.

ಎಲ್ಲರ ಬಳಿ ಹಣ ಪಡೆದು ಸಿಕ್ಕಂತೆ ಖರ್ಚು ಮಾಡಿದಂತೆ ಈ ರಾಜು. ವ್ಯವಹಾರ ವಿಚಾರದ ಕುರಿತು ಕೆಲ ದಿನಗಳ ಹಿಂದೆ ಕೆಲವು ಮಂದಿ ರಾಜುನ ಭೇಟಿಯಾಗೋಕೆ ಮನೆಗೂ ಬಂದಿದ್ದಾರಂತೆ. ಆದರೆ ಸೆಕ್ಯುರಿಟಿ ಗಾರ್ಡ್ ಮನೆಗೆ ಬಿಟ್ಟಿಲ್ಲವಂತೆ. ಮರುದಿನ ರಾಜು ಹತ್ಯೆಯಾಗಿದೆ. ಈತನ ಹತ್ಯೆಯಿಂದ ಮೂರುಜನ ಹೆಂಡತಿಯರು ಹಾಗೂ ಮಕ್ಕಳು ಬೀದಿಗೆ ಬಿದ್ದಂಗೆ ಆಗಿದೆ.

ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.